ನವದೆಹಲಿ[ಜ.24]: ಗುರುವಾರದಂದು ಟಾಟಾ ಗ್ರೂಪ್ ನ ಮುಖ್ಯಸ್ಥ ರತನ್ ಟಾಟಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ, ತಮ್ಮ ಯೌವ್ವನದ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸರಿ ಸುಮಾರು 3 ತಿಂಗಳ ಹಿಂದೆ ಇನ್ಸ್ಟಾ ಗ್ರಾಂ ರತನ್ ಟಾಟಾಗೆ ಒಟ್ಟು 8 ಲಕ್ಷ ಮಂದಿ ಹಿಂಬಾಲಕರಿದ್ದಾರೆ. ಹೀಗಿರುವಾಗ 15 ನೇ ಪೋಸ್ಟ್ ನಲ್ಲಿ ಶೇರ್ ಆಗಿರುವ 'ಯಂಗ್ ಟಾಟಾ' ಫೋಟೋ ಹಲವರಿಗೆ ಇಷ್ಟವಾಗಿದೆ.

82 ವರ್ಷದ ರತನ್ ಟಾಟಾ ಶೇರ್ ಮಾಡಿಕೊಂಡಿರುವ ಈ ಫೋಟೋ ಲಾಸ್ ಏಂಜಲೀಸ್ ನಲ್ಲಿ ತೆಗೆದ ಫೋಟೋ. ಅಂದು ಅವರು 25ರ ಯುವಕ.  ಟಾಟಾರವರ ಈ ಯೌವ್ವನದ ಫೋಟೋ ನೋಡಿದ ಹಲವರು ಹಾಲಿವುಡ್ ಹೀರೋನಂತಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ರತನ್ ಟಾಟಾ ಅಮೆರಿಕಾದಲ್ಲಿ ಶಿಕ್ಷಣ ಹಾಗೂ ಕೆಲ ಸಮಯ ಉದ್ಯೋಗ ಮಾಡಿ, 1962ರಲ್ಲಿ ಭಾರತಕ್ಕೆ ಮರಳಿ ಬಂದಿದ್ದರು.

ಮುಂಬೈ ಹುಡುಗನ ಡಾಗ್ ಕೇರ್; ಟಾಟಾ ಮಾಲೀಕರಿಂದ ಸಿಕ್ತು ಭರ್ಜರಿ ಆಫರ್!

ಇನ್ನು ಫೋಟೋ ಪೋಸ್ಟ್ ಮಾಡಿರುವ ರತನ್ ಟಾಟಾ 'ಈ ಫೋಟೋ ಬುಧವಾರದಂದೇ ಶೇರ್ ಮಾಡಬೇಕೆಂದು ಬಯಸಿದ್ದೆ. ಆದರೆ ಯಾರೋ ನನಗೆ 'ಥ್ರೋ ಬ್ಯಾಕ್ ಥರ್ಸ್ ಡೇ' ಬಗ್ಗೆ ಹೇಳಿದ್ರು. ಹೀಗಾಗಿ ಲಾಸ್ ಏಂಜಲೀಸ್ ದಿನಗಳಲ್ಲಿ ತೆಗೆದ ಈ ಫೋಟೋ ಶೇರ್ ಮಾಡಿಕೊಂಡೆ' ಎಂದಿದ್ದಾರೆ. 

ಏನಿದು #ThrowbackThursday?

'ಥ್ರೋ ಬ್ಯಾಕ್ ಥರ್ಸ್ ಡೇ' ಎನ್ನುವುದು ಇನ್ಸ್ಟಾಗ್ರಾಂನಂತಹ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂಗಳಲ್ಲಿ ಬಹಳಷ್ಟು ಪ್ರಚಲಿತವಾಗಿದೆ. #ThrowbackThursday ಹ್ಯಾಷ್ ಟ್ಯಾಗ್ ಜೊತೆ ಹಳೆ ಫೋಟೋ ಶೇರ್ ಮಾಡಲಾಗುತ್ತದೆ.