China Rare Earth Magnet: ಚೀನಾ ಅಪರೂಪದ ಆರು ಮ್ಯಾಗ್ನೆಟ್‌ಗಳ ರಫ್ತು ನಿಷೇಧಿಸಿದ್ದು, ಜಾಗತಿಕ ಆಟೋಮೊಬೈಲ್ ಉದ್ಯಮದ ಮೇಲೆ ಪರಿಣಾಮ ಬೀರಲಿದೆ. 

ಬೀಜಿಂಗ್: ನೆರೆಯ ಚೀನಾ ಅಪರೂಪದ ಆರು ಮ್ಯಾಗ್ನೆಟ್‌ಗಳ ರಫ್ತು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಮ್ಯಾಗ್ನೆಟ್‌ಗಳ ಸಂಪೂರ್ಣ ಸರಬರಾಜಿನ ಮೇಲೆ ಚೀನಾ ಸರ್ಕಾರ ನಿಷೇಧಿಸಿದ್ದು, ಇದು ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಆಟೋಮೊಬೈಲ್ ಉದ್ಯಮದ ಮೇಲೆ ನೇರ ಪರಿಣಾಮವನ್ನು ಬೀರಲಿದೆ. ಚೀನಾದ ಈ ನಿರ್ಧಾರ ಇಡೀ ಪ್ರಪಂಚದ ಆತಂಕವನ್ನು ಹೆಚ್ಚಿಸಿದೆ. ಈ ಅಪರೂಪದ ಮ್ಯಾಗ್ನೆಟ್‌ ಖನಿಜವನ್ನು (China Rare Earth Magnet Export Ban) ಹೊಂದಿರುವ ಚೀನಾ ಇಡೀ ವಿಶ್ವಕ್ಕೆ ಪೂರೈಕೆ ಮಾಡುತ್ತಿತ್ತು. ಇದರಿಂದ ಭಾರತದ ವಾಹನ ಮತ್ತು ಇತರೆ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಲಿವೆ.

ಏಪ್ರಿಲ್ ತಿಂಗಳಲ್ಲಿ, ಚೀನಾ ಅಪರೂಪದ ಖನಿಜಗಳು ಮತ್ತು ಆಯಸ್ಕಾಂತಗಳ ರಫ್ತನ್ನು ನಿಷೇಧಿಸಿತು. ಈ ಖನಿಜಗಳ ಪೂರೈಕೆ ಸ್ಥಗಿತಗೊಂಡರೆ ವಿಶೇಷವಾಗಿ ಆಟೋಮೊಬೈಲ್‌ ಕ್ಷೇತ್ರದಲ್ಲಿ ಅಡಚಣೆಯುಂಟಾಗಲಿದೆ.

ಸಂಚಲನ ಸೃಷ್ಟಿಸಿದ ಚೀನಾ

ಅಪರೂಪದ ಆಯಸ್ಕಾಂತ ಖನಿಜ ಉತ್ಪಾದನೆಯಲ್ಲಿ ಚೀನಾ ಆತ್ಮನಿರ್ಭರವಾಗಿದ್ದು, ಸುಮಾರು 35 ದೇಶಗಳಿಗೆ ಈ ಖನಿಜವನ್ನು ರಫ್ತು ಮಾಡುತ್ತದೆ. ಏಪ್ರಿಲ್ 4ರಂದು ಅಪರೂಪದ ಅಯಸ್ಕಾಂತ ಆಮದು ಮಾಡಿಕೊಳ್ಳಲು ಸಲ್ಲಿಸಿದ ಅರ್ಜಿಯನ್ನು ಚೀನಾ ಸರ್ಕಾರ (Govt Of China) ಅನುಮೋದಿಸಿಲ್ಲ. ಬೇಕಿದ್ರೆ ಆಮದು ಮಾಡಿಕೊಳ್ಳಲು ಬಯಸುವ ಕಂಪನಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಚೀನಾ ಸರ್ಕಾರ ಹೇಳಿದೆ. ಕಾಂಟಿನೆಂಟಲ್, ಭಾಷ್ ಇಂಡಿಯಾ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಚೀನಾದಿಂದ ಈ ಅಪರೂಪದ ಆಯಸ್ಕಾಂತವನ್ನು (Rare Earth Magnet) ಆಮದು ಮಾಡಿಕೊಳ್ಳುತ್ತವೆ.

ಶಸ್ತ್ರಾಸ್ತ್ರಗಳ ತಯಾರಿಕೆಯಿಂದ ಹಿಡಿದು ಕ್ಲೀನ್‌ಟೆಕ್‌ವರೆಗೆ ಆಟೋಮೊಬೈಲ್ ಕ್ಷೇತ್ರದಲ್ಲಿ (Automobile Sector) ಈ ಅಪರೂಪದ ಖನಿಜದ ಬಳಕೆಯಾಗುತ್ತದೆ. ಚೀನಾದ ಈ ನಿರ್ಧಾರದಿಂದ ವಿದ್ಯುತ್ ವಾಹನ ಉತ್ಪಾದನೆ ನೇರ ಪರಿಣಾಮ ಬೀರುತ್ತದೆ. ವಾಹನಗಳ ತಯಾರಿಕೆಯಲ್ಲಿ ಬಳಸಲಾಗುವ ಶೇ.90ರಷ್ಟು ಅಪರೂಪದ ಅಯಸ್ಕಾಂತ ಖನಿಜವನ್ನು ಚೀನಾ ದೇಶವೇ ರಫ್ತು ಮಾಡುತ್ತದೆ. ಹಾಗಾಗಿ ಎಲ್ಲಾ ದೇಶಗಳು ಚೀನಾದ ಮೇಲೆಯೇ ಅವಲಂಬನೆಯಾಗಿವೆ.

ಏಕಸ್ವಾಮ್ಯವಾಗಿರುವ ಚೀನಾ

ಚೀನಾ ಈ ಅಪರೂಪದ ಅಯಸ್ಕಾಂತದ ಗಣಿಗಾರಿಕೆ ಮತ್ತು ಸಂಸ್ಕರಣೆಯನ್ನು ಒಂದು ಕಾರ್ಯತಂತ್ರದ ಉದ್ಯಮವಾಗಿ ಸ್ಥಾಪಿಸಿದೆ. 2000ರವರೆಗೆ ಚೀನಾ ಈ ಖನಿಜ ಉತ್ಪಾದನೆಯನ್ನು ಪ್ರಪಂಚದ ಹಲವು ದೇಶಗಳು ಮಾಡುತ್ತಿದ್ದವು. ಕಾಲಕ್ರಮೇಣ ಹಲವು ಗಣಿಗಾರಿಕೆಗಳು ಮುಚ್ಚಲ್ಪಟ್ಟವು. ಅಪರೂಪದ ಅಯಸ್ಕಾಂತದ ಗಣಿಗಾರಿಕೆ ಹೊಂದಿದ್ದ ಕ್ಯಾಲಿಫೋರ್ನಿಯಾದ ಮೌಂಟ್ ಪ್ಲೆಸೆಂಟ್ ಗಣಿ 2002 ರಲ್ಲಿ ಪರಿಸರ ಮತ್ತು ಆರ್ಥಿಕ ಒತ್ತಡಗಳಿಂದಾಗಿ ಮುಚ್ಚಲ್ಪಟ್ಟಿತು. ಈ ಕಾರಣದಿಂದಾಗಿ ಚೀನಾ ಇಂದು ಜಾಗತೀಕ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಸಾಧಿಸಿದೆ.

ಅಪರೂಪದ ಆಯಸ್ಕಾಂತ ಪೂರೈಕೆ ಜೊತೆಯುಲ್ಲಿ ಬ್ಯಾಟರಿಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳಿಗೆ ಜಾಗತಿಕ ಸಂಸ್ಕರಣಾಗಾರವಾಗಿಯೂ ಮಾರ್ಪಟ್ಟಿದೆ, ಆಯಸ್ಕಾಂತಗಳನ್ನು ಇತರ ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತಿಸಿದೆ. ಅಪರೂಪದ ಭೂಮಿಯ ಖನಿಜಗಳಲ್ಲಿ ಚೀನಾದ ಪ್ರಾಬಲ್ಯದ ಮಧ್ಯೆ, ಭಾರತ ಈಗ ಇಲ್ಲಿ ತನ್ನ ಲಭ್ಯತೆಯನ್ನು ಹೆಚ್ಚಿಸುವ ಬಗ್ಗೆ ಒತ್ತಾಯಿಸುತ್ತಿದೆ. ಈ ನಿಟ್ಟಿನಲ್ಲಿ ಗಣಿಗಾರಿಕೆ ಕಾಯ್ದೆಗಳಲ್ಲಿ ವೇಗವಾಗಿ ಬದಲಾವಣೆಗಳನ್ನು ಮಾಡಲಾಗುತ್ತಿದೆ.

ಭಾರತ ಸರ್ಕಾರದ ಸುಳಿವು

ಇತ್ತೀಚೆಗಷ್ಟೇ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸ್ವತಃ ಜರ್ಮನಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಅಪರೂಪದ ಭೂಮಿಯ ಖನಿಜಗಳಿಂದ ಪಡೆದ ಆಯಸ್ಕಾಂತಗಳ ಕುರಿತು ಭಾರತವು ಇತರ ಆಯ್ಕೆಗಳ ಕುರಿತು ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು. ಈ ಮೂಲಕ ಭವಿಷ್ಯದಲ್ಲಿ ಭಾರತದಲ್ಲಿಯೇ ಈ ಅಪರೂಪದ ಅಯಸ್ಕಾಂತ ಖನಿಜ ಉತ್ಪಾದನೆಯ ಸುಳಿವನ್ನು ಭಾರತ ಸರ್ಕಾರ ನೀಡಿತ್ತು