ಗುವಾಹಟಿ[ಜು.31]: ದಿಬ್ರೂಗಢ ಟೀ ಎಸ್ಟೇಟ್‌ನ ‘ಮನೋಹರಿ ಗೋಲ್ಡ್‌ ಟೀ’ ಪುಡಿ ಗುವಾಹಟಿ ಚಹಾ ಹರಾಜು ಕೇಂದ್ರದಲ್ಲಿ ಮಂಗಳವಾರ 1 ಕೇಜಿಗೆ 50 ಸಾವಿರ ರುಪಾಯಿ ಬೆಲೆಯಲ್ಲಿ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ.

ಸೌರಭ ಟೀ ಟ್ರೇಡರ್ಸ್‌ ಪ್ರೈವೇಟ್‌ ಲಿಮಿಟೆಡ್‌ 2 ಕೇಜಿ ಮನೋಹರಿ ಗೋಲ್ಡ್‌ ಚಹಾ ಪುಡಿಯನ್ನು ಖರೀದಿಸಿದೆ. ಸಾರ್ವಜನಿಕರ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಹರಾಜಾದ ವಿಶ್ವದ ಮೊದಲ ಚಹಾ ಪುಡಿ ಇದಾಗಿದೆ ಎಂದು ಜಿಟಿಎಸಿ ತಿಳಿಸಿದೆ.

ಸಾಂಪ್ರದಾಯಿಕ ಮನೋಹರಿ ಗೋಲ್ಡ್‌ ತಳಿಯ ಎಲೆಗಳನ್ನು ಮುಂಜಾನೆಯೇ ಕಟಾವು ಮಾಡಿ ಸಂಸ್ಕರಿಸಲಾಗುತ್ತದೆ. ಅತ್ಯಂತ ಪರಿಮಳಯುಕ್ತ ಸ್ವಾದ ಹೊಂದಿರುವ ಈ ಚಹಾ ಬಂಗಾರದ ಬಣ್ಣ ಹೊಂದಿರುತ್ತದೆ.