500 ರೂಪಾಯಿ ನೋಟಿನಲ್ಲಿ ರಾಮನ ಭಾವಚಿತ್ರ? ವದಂತಿಗೆ ಬ್ರೇಕ್, ಇಲ್ಲಿದೆ ಸತ್ಯಾಸತ್ಯತೆ!
ನೋಟಿನಲ್ಲಿ ಮೂಡಿಸಿದ ಕಾಲ್ಪನಿಕ ಚಿತ್ರವೊಂದು ನಿಜವೆಂದು ವೈರಲ್ ಆಗಿದೆ. 500 ರೂಪಾಯಿ ನೋಟಿನಲ್ಲಿ ಕ್ರಿಯಾಶೀಲ ಉದ್ದೇಶದಿಂದ ಮಾಡಿದ್ದ ಬದಲಾವಣೆ ನಿಜವೆಂದು ಜನ ಸುದ್ದಿ ಹಬ್ಬಿಸುತ್ತಿದ್ದಂತೆ ಅದನ್ನು ಪೋಸ್ಟ್ ಮಾಡಿದ್ದವರು ಎಚ್ಚೆತ್ತುಕೊಂಡು ಸ್ಪಷ್ಟನೆ ನೀಡಿದ್ದಾರೆ.
ವಿಶೇಷವಾದ ಸಂಗತಿಗಳು ಸೋಷಿಯಲ್ ಮೀಡಿಯಾದಲ್ಲಿ ಬಹುಬೇಗ ಎಲ್ಲರ ಗಮನ ಸೆಳೆದುಬಿಡುತ್ತವೆ. ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಲಕ್ಷಾಂತರ ಜನರನ್ನು ತಲುಪಿ ವೈರಲ್ ಆಗಿಬಿಡುತ್ತವೆ. ಆ ವಿಚಾರದ ಸತ್ಯಾಸತ್ಯತೆ ಅರಿಯದೇ ಜನ ಅದನ್ನು ನಿಜವೆಂದು ನಂಬಿಬಿಡುವುದು ಸಹ ಸಾಮಾನ್ಯ. ಪ್ರಸ್ತುತ, ಇಡೀ ದೇಶದಲ್ಲಿ ರಾಮನಾಮ ಸ್ಮರಣೆ ಕೇಳಿಬರುತ್ತಿದೆ. ರಾಮಭಕ್ತರ ನಾನಾ ರೀತಿಯ ವಿಶೇಷ ಸಂಗತಿಗಳ ಕಡೆಗೆ ಎಲ್ಲರಲ್ಲೂ ಆಸಕ್ತಿ ಇರುವುದು ಸಹಜ. ಸುಮ್ಮನೆ ಕ್ರಿಯಾಶೀಲತೆಯಿಂದ ರಚಿಸಿದ ಸಣ್ಣದೊಂದು ಚಿತ್ರ ಕೂಡ ಏಕಾಏಕಿ ವೈರಲ್ ಆಗಲು ಶುರುವಾಗುತ್ತದೆ. ಇಂಥದ್ದೇ ಘಟನೆ ಈಗ ಜರುಗಿದೆ. ಸೋಷಿಯಲ್ ಮೀಡಿಯಾದಲ್ಲಿ ರಘುಮೂರ್ತಿ೦೭ ಎನ್ನುವ ಖಾತೆಯಿಂದ ಪೋಸ್ಟ್ ಆದ ಚಿತ್ರವೊಂದು ವೈರಲ್ ಆಗಿದ್ದು, ಅದರ ಬಗ್ಗೆ ಈಗ ಸ್ಪಷ್ಟನೆಯನ್ನೂ ನೀಡಲಾಗಿದೆ. ಆ ಚಿತ್ರ ಕೂಡ ಭಾರೀ ಮುದ ನೀಡುವಂಥದ್ದು ಎನ್ನುವುದರಲ್ಲಿ ಅನುಮಾನವಿಲ್ಲ. ವೈರಲ್ ಆಗಿರುವ ಈ ಚಿತ್ರ ಯಾವುದು ಎನ್ನುತ್ತೀರಾ? ಅದು ರಾಮಮಂದಿರವನ್ನೇ ಕುರಿತಾಗಿರುವ ಚಿತ್ರ.
ರಘುಮೂರ್ತಿ ಅವರ ಖಾತೆಯಿಂದ 500 ರೂಪಾಯಿ ನೋಟಿನಲ್ಲಿ (500 Rupees Note) ಗಾಂಧೀಜಿ (Gandhiji) ಭಾವಚಿತ್ರದ (Picture) ಬದಲು ರಾಮ ಹಾಗೂ ಹಿಂಬದಿ ಭಾಗದಲ್ಲಿ ಕೆಂಪು ಕೋಟೆಯ ಬದಲು ರಾಮಮಂದಿರದ ಚಿತ್ರವನ್ನು ಕೂರಿಸಿ ಪೋಸ್ಟ್ (Post) ಮಾಡಲಾಗಿತ್ತು. ಗ್ಲಾಸುಗಳ ಬದಲಿಗೆ ರಾಮನ ಬಿಲ್ಲು ಮತ್ತು ಬಾಣದ ಚಿತ್ರಗಳಿದ್ದವು. ಅದನ್ನು ನೋಡಿದ್ದೇ ತಡ, ಇದೇ 22ರಂದು ರಾಮಮಂದಿರ (Rammandir) ಉದ್ಘಾಟನೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಮನ ಭಾವಚಿತ್ರವುಳ್ಳ ಹೊಸ (New) ನೋಟು ಬಂದಿದೆ ಅಥವಾ ಬರುತ್ತಿದೆ ಎಂದೇ ಎಲ್ಲರೂ ಭಾವಿಸಿದರು. ಹೀಗಾಗಿ, ಕೆಲವೇ ಗಂಟೆಗಳ ಅವಧಿಯಲ್ಲಿ ಈ ಪೋಸ್ಟ್ ಸಾವಿರಾರು ಜನರನ್ನು ತಲುಪಿತು.
ಜನವರಿ 22ರಂದು ಹೊಸ 500 ರೂಪಾಯಿ ನೋಟು ಅಸ್ತಿತ್ವಕ್ಕೆ ಬರುತ್ತಿದೆ ಎನ್ನುವ ಮಾತು ಕೇಳಿಬಂತು. ಆದರೆ, ಇದು ಕೇವಲ ವದಂತಿ (Fake) ಹಾಗೂ ಸತ್ಯಕ್ಕೆ ದೂರವಾದ ಸಂಗತಿ ಎನ್ನುವುದು ಕೆಲವೇ ಸಮಯದಲ್ಲಿ ತಿಳಿದುಬಂತು. ರಘುಮೂರ್ತಿ, ತಮ್ಮ ಕ್ರಿಯಾಶೀಲತೆಯನ್ನು (Creativity) ಯಾರೋ ತಪ್ಪಾಗಿ ಬಳಸಿಕೊಂಡಿದ್ದಾರೆ ಹಾಗೂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರವಾಸಿಗರ ಆಕರ್ಷಣೆಯ ಕೇಂದ್ರ , ಪುರುಷೋತ್ತಮನ ತಾಯಿ ಕೌಸಲ್ಯ ಮಂದಿರ
ಕ್ರಿಯಾಶೀಲತೆಯ ಮಿಸ್ ಯೂಸ್!
ತಮ್ಮ ಕ್ರಿಯಾಶೀಲ ಕೃತಿಯನ್ನು ಯಾರೋ ಮಿಸ್ ಯೂಸ್ (Misuse) ಮಾಡಿದ್ದಾರೆ. ಟ್ವಿಟರ್ ನಲ್ಲಿ ಅದನ್ನು ಪ್ರಕಟಿಸಿ ತಪ್ಪು ಮಾಹಿತಿ (Information) ಹಂಚಿದ್ದಾರೆ ಎಂದು ರಘುಮೂರ್ತಿ ಅವರು ಹೇಳಿದ್ದಾರೆ. ಅಲ್ಲದೇ, ತಾವು ಈ ಬಗ್ಗೆ ಸ್ಪಷ್ಟನೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. “ಇಂತಹ ವದಂತಿಗಳಿಗೆ ನನ್ನ ಬೆಂಬಲವಿಲ್ಲ. ಇದು ಕ್ರಿಯಾಶೀಲತೆಯಿಂದ ರಚಿಸಿದ ಕೃತಿಯಾಗಿದೆ. ನನ್ನ ಕೆಲಸವನ್ನು ಇಟ್ಟುಕೊಂಡು ಈ ಪೋಸ್ಟ್ ಮಾಡಲಾಗಿದೆ. ಕ್ರಿಯಾಶೀಲ ಕಾರ್ಯವು (Work) ಯಾವುದೇ ರೀತಿಯಲ್ಲಿ ತಪ್ಪು ನಿರೂಪಣೆಗೆ ಒಳಗಾಗುವುದು ನನಗೆ ಇಷ್ಟವಿಲ್ಲʼ ಎಂದು ಹೇಳಿದ್ದಾರೆ.
ಮತ್ತೋರ್ವ ಸೋಷಿಯಲ್ ಮೀಡಿಯಾ (Social Media) ಎಕ್ಸ್ ಬಳಕೆದಾರರಾಗಿರುವ ದಿವ್ಯಾ ಕಾಮತ್ ಎನ್ನುವವರು ಸಹ ವೈರಲ್ ಆಗಿರುವ ಈ ಮಾಹಿತಿ ಕುರಿತು ಸ್ಪಷ್ಟನೆ ನೀಡಿದ್ದಾರೆ. “ಇದು ಸ್ನೇಹಿತರಾದ ರಘುಮೂರ್ತಿ ಎನ್ನುವವರು ಎಡಿಟ್ ಮಾಡಿರುವ ಚಿತ್ರ. ಇದು ಕೇವಲ ಕ್ರಿಯಾಶೀಲತೆ (Creativity) ಬಿಂಬಿಸುವ ಚಿತ್ರವಾಗಿದ್ದು, ಇದನ್ನು ನೋಟಿನಂತೆ ತೋರಿಸುವ ಇರಾದೆಯಿಲ್ಲ. ನೋಟಿನಂತೆ ತೋರಿಸುವ ಉದ್ದೇಶವಿಲ್ಲ, ದಯವಿಟ್ಟು ತಪ್ಪು ಮಾಹಿತಿ ಹರಡದಂತೆ ನೋಡಿಕೊಳ್ಳಿʼ ಎಂದು ಮನವಿ ಮಾಡಿದ್ದಾರೆ.
ರಾಮ ಭಕ್ತ ಗಾಂಧೀಜಿಯವರು ಕೂಡ ಇದನ್ನೇ ಬಯಸುತ್ತಿದರು
— wHatNext 🚩 (@raghunmurthy07) January 14, 2024
ಜೈ ಶ್ರೀರಾಮ್ 🙏 pic.twitter.com/OnJi4RITaT
ಏನಿದು ವಿಸ್ಮಯ! 57 ವರ್ಷ ಹಿಂದೆಯೇ ನೇಪಾಳದ ಅಂಚೆಚೀಟಿಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆಯ ವರ್ಷ ಪ್ರಕಟ!
ಕಾಮೆಂಟ್ ಗಳು
ಇದಕ್ಕೂ ಮುನ್ನ, ಈ ಸುದ್ದಿ ಹಲವರಲ್ಲಿ ಸೆನ್ಸೇಷನ್ (Sensation) ಮೂಡಿಸಿತ್ತು. ರಾಮನ (Lord Ram) ಭಾವಚಿತ್ರದ ನೋಟು ಬರಲಿದೆ ಎನ್ನುವ ಸುದ್ದಿಯಿಂದ ಹಲವರು ರೋಮಾಂಚನಕ್ಕೆ ಒಳಗಾಗಿದ್ದರು. ಇದಕ್ಕೆ ಹಲವು ಕಾಮೆಂಟ್ ಕೂಡ ಬಂದಿದ್ದು, “ಇದು ನಿಜವಾಗಿಯೂ ಆಗಬೇಕಾದ ಕಾರ್ಯವಾಗಿತ್ತುʼ ಎಂದು ಹೇಳಿದ್ದರು. ರಘುಮೂರ್ತಿಯವರು ತಮ್ಮ ಖಾತೆಯಲ್ಲಿ “ರಾಮಭಕ್ತ ಗಾಂಧೀಜಿಯವರು ಕೂಡ ಇದನ್ನೇ ಬಯಸುತ್ತಿದ್ದರು, ಜೈ ಶ್ರೀರಾಮ್ʼ ಎಂಬ ಕ್ಯಾಪ್ಷನ್ (Caption) ಜತೆಗೆ ನೋಟಿನ ಚಿತ್ರವನ್ನು ಪೋಸ್ಟ್ ಮಾಡಿರುವುದು ಗೊಂದಲಕ್ಕೆ ಕಾರಣವಾಗಿತ್ತು.