ಅಯೋಧ್ಯೆ ಹೋಟೆಲ್ ಬಾಡಿಗೆ 5 ಪಟ್ಟು ಹೆಚ್ಚಳ: ಜನವರಿ 15 ರಿಂದ 30 ರವರೆಗೆ ಎಲ್ಲ ರೂಂ ಬುಕ್!
ಕೆಲ ಹೋಟೆಲ್‌ಗಳು ಬೇಡಿಕೆ ಇನ್ನೂ ಹೆಚ್ಚಾಗಬಹುದು. ಆಗ ಜನರಿಂದ ಹೆಚ್ಚಿಗೆ ಹಣ ‘ಸುಲಿಗೆ’ ಮಾಡಬಹುದು ಎನ್ನುವ ಕಾರಣಕ್ಕಾಗಿ ಈಗಲೇ ಮುಂಗಡ ಬುಕ್ಕಿಂಗ್ ಅನ್ನೇ ನೀಡುತ್ತಿಲ್ಲ ಎನ್ನಲಾಗಿದೆ.
ಅಯೋಧ್ಯೆ (ಡಿಸೆಂಬರ್ 18, 2023): 2024ರ ಜನವರಿ 22ರಂದು ನಡೆಯಲಿರುವ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯ ದಿನ ಸನ್ನಿಹಿತವಾಗುತ್ತಿದ್ದಂತೆ ಅಯೋಧ್ಯೆಯ ಹೋಟೆಲ್ ಶುಲ್ಕ ಗಗನಕ್ಕೇರಿ ಕುಳಿತಿದೆ. ಆದರೂ ಜನವರಿ 15ರಿಂದ ಜನವರಿ 30ರವರೆಗೆ ನಗರದ ಬಹುತೇಕ ಹೋಟೆಲ್‌ಗಳ ರೂಂಗಳು ಈಗಲೇ ಬುಕ್ ಆಗಿಬಿಟ್ಟಿವೆ.
ಸಾಮಾನ್ಯ ದಿನಗಳಲ್ಲಿ 1700 ರೂ..ಗೆ ಸಿಗುತ್ತಿದ್ದ ಕೊಠಡಿಗೆ ಇದೀಗ 10 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ಅಯೋಧ್ಯೆ ಪ್ಯಾಲೇಸ್ ಹೋಟೆಲ್‌ನ 3000 ರು. ದರದ ರೂಂಗೆ 16 ಸಾವಿರ ರೂ. ದರ ನಿಗದಿ ಮಾಡಲಾಗಿದೆ.
ಇದನ್ನು ಓದಿ: ರಾಮಮಂದಿರ ಉದ್ಘಾಟನೆಗೆ 250 ಕನ್ನಡಿಗರಿಗೆ ಆಹ್ವಾನ..!
3000- 3500 ರೂ.ನ ರೂಂನ ಶುಲ್ಕ 25 ಸಾವಿರ ರೂ.ವರೆಗೂ ತಲುಪಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವ ರಾಮಾಯಣ ಹೋಟೆಲ್‌ನಲ್ಲಿ ಹಾಲಿ 7726 ರೂ. ಇರುವ ಕೊಠಡಿ ಶುಲ್ಕ ಜನವರಿಯಲ್ಲಿ 40 ಸಾವಿರ ರೂ. ತೋರಿಸುತ್ತಿದೆ. ಇದೇ ಹೋಟೆಲ್ ಲಕ್ಷುರಿ ಕೊಠಡಿ ಶುಲ್ಕ 23,600 ರೂ. ನಿಂದ 76 ಸಾವಿರ ರೂ. ವರೆಗೂ ಹೆಚ್ಚಳಗೊಂಡಿದೆ.
ಕೆಲ ಹೋಟೆಲ್‌ಗಳು ಬೇಡಿಕೆ ಇನ್ನೂ ಹೆಚ್ಚಾಗಬಹುದು. ಆಗ ಜನರಿಂದ ಹೆಚ್ಚಿಗೆ ಹಣ ‘ಸುಲಿಗೆ’ ಮಾಡಬಹುದು ಎನ್ನುವ ಕಾರಣಕ್ಕಾಗಿ ಈಗಲೇ ಮುಂಗಡ ಬುಕ್ಕಿಂಗ್ ಅನ್ನೇ ನೀಡುತ್ತಿಲ್ಲ ಎನ್ನಲಾಗಿದೆ.
ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ ಧಾರ್ಮಿಕ ಸಾಮರಸ್ಯ,ಮುಸ್ಲಿಂ ಶಿಲ್ಪಿಗಳಿಂದ ಅಯೋಧ್ಯೆ ದೇವಸ್ಥಾನಕ್ಕೆ ರಾಮನ ಪ್ರತಿಮೆ
ಅಯೋಧ್ಯೆಯಲ್ಲಿ 175 ಹೋಟೆಲ್‌ಗಳು, 72 ಗೆಸ್ಟ್‌ಹೌಸ್, 50 ಧರ್ಮಶಾಲೆ, 400ಕ್ಕಿಂತ ಹೆಚ್ಚು ಪೇಯಿಂಗ್ ಗೆಸ್ಟ್ ಲಭ್ಯತೆ ಇದೆ. ಆದರೆ ಏಕಕಾಲಕ್ಕೆ ಲಕ್ಷಾಂತರ ಜನ ಅಯೋಧ್ಯೆಗೆ ಕಡೆಗೆ ಮುಖ ಮಾಡಿರುವ ಹಿನ್ನೆಲೆಯಲ್ಲಿ ಎಷ್ಟು ಕೊಠಡಿಗಳಿದ್ದರೂ ಸಾಲದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನು ಓದಿ: ಮುಂಡರಗಿಯ ಯುವ ಶಿಲ್ಪಿಗೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆಹ್ವಾನ
ಅಯೋಧ್ಯೆಯಲ್ಲಿ ಭಕ್ತರು ತಂಗಲು 452 ಹೋಂಸ್ಟೇ
ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ನಗರದಲ್ಲಿ ಭಕ್ತಾದಿಗಳ ವಾಸಕ್ಕೆಂದು 452 ಹೋಂಸ್ಟೇಗಳು ಸಿದ್ಧಗೊಳ್ಳುತ್ತಿವೆ.
ಈ ಕುರಿತು ಮಾತನಾಡಿದ ಅಯೋಧ್ಯಾ ನಗರಾಭಿವೃದ್ಧಿ ಪ್ರಾಧಿಕಾರ ಉಪಾಧ್ಯಕ್ಷ ವಿಶಾಲ್ ಸಿಂಗ್, ‘ಜನರ ದಟ್ಟಣೆ ನಿಯಂತ್ರಿಸಲು ಕಟ್ಟುನಿಟ್ಟಿನ ನಿಯಮ ಪಾಲನೆಯೊಂದಿಗೆ ಹೋಂಸ್ಟೇ ನಡೆಸಲು ಅನುಮತಿ ನೀಡಲಾಗುತ್ತಿದೆ. ಇಲ್ಲಿಯವರೆಗೆ 312 ಹೋಂಸ್ಟೇಗಳಿಗೆ ಅನುಮತಿ ನೀಡಲಾಗಿದೆ. ಇನ್ನೂ 140 ಅರ್ಜಿಗೆ ಅನುಮತಿ ಬಾಕಿ ಇದೆ.
ಈ ಮೂಲಕ ಭಕ್ತಾದಿಗಳು ಅವಧ್ ಪ್ರಾಂತ್ಯದ ಸ್ಥಳೀಯರೊಂದಿಗೆ ಬೆರೆಯುವ ಮೂಲಕ ಅವರ ಆಹಾರ-ಸಂಸ್ಕೃತಿಯನ್ನು ಆಸ್ವಾದಿಸಬಹುದಾಗಿದೆ. ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಇದರ ಮೇಲುಸ್ತುವಾರಿ ನೋಡಿಕೊಳ್ಳಲಿದ್ದು, ಒಂದು ದಿನದ ಬಾಡಿದೆ ಸುಮಾರು ₹1,500 ರಿಂದ ₹2,500ರ ಆಸುಪಾಸಿನಲ್ಲಿ ನಿಗದಿಪಡಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು