Asianet Suvarna News Asianet Suvarna News

ರಾಖಿ ಕಟ್ಟೋ ಸಹೋದರಿಗೆ ನೀಡಿ ಈ 5 ಹಣಕಾಸಿನ ಉಡುಗೊರೆ, ಮಾಡಿ ಅವರ ಭವಿಷ್ಯ ಸುಭದ್ರ

ರಕ್ಷಾಬಂಧನ ಸಹೋದರತ್ವದ ಹಬ್ಬ.ಸಹೋದರಿ ರಾಖಿ ಕಟ್ಟಿದರೆ, ಸಹೋದರ ಉಡುಗೊರೆ ನೀಡಿ ಆಕೆಯನ್ನು ಖುಷಿಪಡಿಸುತ್ತಾನೆ. ಈ ರಕ್ಷಾ ಬಂಧನಕ್ಕೆ ನೀವು ನಿಮ್ಮ ಸಹೋದರಿಗೆ ಫೈನಾನ್ಷಿಯಲ್ ಗಿಫ್ಟ್ ನೀಡುವ ಮೂಲಕ ಅವರ ಭವಿಷ್ಯವನ್ನು ಭದ್ರಗೊಳಿಸಬಹುದು. ಹಾಗಾದ್ರೆ ಅಂಥ ಉಡುಗೊರೆಗಳು ಯಾವುವು? 
 

Raksha Bandhan 2023 5 Thoughtful Financial Gifts That Your Sister Will Appreciate anu
Author
First Published Aug 29, 2023, 1:26 PM IST

ನವದೆಹಲಿ (ಆ.29): ರಕ್ಷಾ ಬಂಧನ ಸಹೋದರತ್ವವನ್ನು ಸಾರುವ ಹಬ್ಬ. ಇದು ಸಹೋದರ ಹಾಗೂ ಸಹೋದರಿ ನಡುವಿನ ಪ್ರೀತಿ ಹಾಗೂ ಸುರಕ್ಷತೆಯ ಸಂಕೇತವಾಗಿದೆ. ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟಿ ಪ್ರೀತಿ ತೋರ್ಪಡಿಸಿದರೆ, ಸಹೋದರ ಉಡುಗೊರೆ ನೀಡುವ ಮೂಲಕ ತಾನು ಸದಾ ನಿನ್ನೊಂದಿಗೆ ಇರುತ್ತೇನೆ ಎಂಬ ಅಭಯ ನೀಡುತ್ತಾನೆ. ರಾಖಿ  ಹಬ್ಬದಂದು ಸಾಮಾನ್ಯವಾಗಿ ಸಹೋದರ ಸಹೋದರಿಗೆ ಸಿಹಿ ತಿನಿಸುಗಳು, ಆಭರಣಗಳು ಹಾಗೂ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುತ್ತಾನೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಹೋದರಿಗೆ ಹಣಕಾಸಿನ ಉಡುಗೊರೆಗಳನ್ನು ನೀಡುವ ಟ್ರೆಂಡ್ ಹೆಚ್ಚಿದೆ. ಆದರೆ, ಇಂಥ ಹಣಕಾಸಿನ ಉಡುಗೊರೆಗಳನ್ನು ನೀಡುವ ಮುನ್ನ ಕೆಲವೊಂದು ವಿಚಾರಗಳನ್ನು ಗಮನಿಸೋದು ಅಗತ್ಯ. ಉದಾಹರಣೆಗೆ ನಿಮ್ಮ ಸಹೋದರಿ ಹಣಕಾಸಿನ ಗುರಿ ಏನಿದೆ? ಅವರು ಮನೆ ಖರೀದಿಸಲು ಬಯಸುತ್ತಿದ್ದಾರಾ? ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಸಂಗ್ರಹಿಸುತ್ತಿದ್ದಾರಾ? ಎಂಬುದನ್ನು ಪರಿಶೀಲಿಸಿ ಅದಕ್ಕೆ ಅನುಗುಣವಾದ ಉಡುಗೊರೆ ನೀಡುವುದು ಉತ್ತಮ. ಇನ್ನೊಂದು ವಿಚಾರವೆಂದರೆ ಆ ಉಡುಗೊರೆಯನ್ನು ನೀಡುವಷ್ಟು ನೀವು ಆರ್ಥಿಕವಾಗಿ ಸದೃಢರಾಗಿದ್ದೀರಾ ಎಂಬುದನ್ನು ಯೋಚಿಸಬೇಕು. ಕೊನೆಯದಾಗಿ ನೀವು ನೀಡುವ ಉಡುಗೊರೆ ನಿಮ್ಮ ಸಹೋದರಿಗೆ ಖುಷಿ ತರುವಂತಹದ್ದು ಆಗಿರಲಿ.

ಈ ಹಣಕಾಸಿನ ಉಡುಗೊರೆಗಳನ್ನು ನೀಡಬಹುದು
1.ಆರೋಗ್ಯ ವಿಮಾ ಪಾಲಿಸಿ:
ಈ ರಾಖಿಯಂದು ನೀವು ನಿಮ್ಮ ಸಹೋದರಿಗೆ ಉಡುಗೊರೆ ನೀಡಲು ಪ್ಲ್ಯಾನ್ ಮಾಡಿದ್ರೆ ಆರೋಗ್ಯ ವಿಮೆ ಉತ್ತಮ ಗಿಫ್ಟ್ ಆಗಬಲ್ಲದು. ಇದು ಆರೋಗ್ಯದ ತುರ್ತು ಸಂದರ್ಭಗಳಲ್ಲಿ ಅವರ ನೆರವಿಗೆ ಬರುತ್ತದೆ. 

2.ಚಿನ್ನದ ಇಟಿಎಫ್: ಈ ರಾಖಿಯಂದು ನೀವು ನಿಮ್ಮ ಸಹೋದರಿಗೆ ಉಡುಗೊರೆ ನೀಡಲು ಪ್ಲ್ಯಾನ್ ಮಾಡಿದ್ರೆ ಚಿನ್ನವನ್ನು ಕೂಡ ನೀಡಬಹುದು. ಚಿನ್ನದ ಆಭರಣ ಅಥವಾ ನಾಣ್ಯದ ಸುರಕ್ಷತೆ ಹಾಗೂ ಭದ್ರತೆ ಬಗ್ಗೆ ಅವರಿಗೆ ಭಯವಿದ್ದರೆ ಚಿನ್ನದ ಇಟಿಎಫ್ ಗಳನ್ನು ಉಡುಗೊರೆ ನೀಡುವುದು ಉತ್ತಮ.

NRIಗಳಿಂದ ಪಡೆದ ಉಡುಗೊರೆಗಳಿಗೂ ಬೀಳುತ್ತೆ ತೆರಿಗೆ: ITRನಲ್ಲಿ ಉಲ್ಲೇಖಿಸಲು ಮರೆಯಬೇಡಿ!

3.ಮ್ಯೂಚುವಲ್ ಫಂಡ್ ಎಸ್ ಐಪಿ:  ಮ್ಯೂಚುವಲ್ ಫಂಡ್  ಎಸ್ ಐಪಿ ನೀವು ನಿಮ್ಮ ಸಹೋದರಿಗೆ ನೀಡುವ ಅತ್ಯುತ್ತಮ ಉಡುಗೊರೆಗಳಲ್ಲಿ ಒಂದಾಗಬಹುದು. ದೀರ್ಘಾವಧಿಯ ಲಾಕ್ ಇನ್ ಹೊಂದಿರುವ ಮ್ಯೂಚುವಲ್ ಫಂಡ್ ಎಸ್ ಐಪಿಯನ್ನು ಉಡುಗೊರೆಯಾಗಿ ನೀಡಬಹುದು. ಇಂದು ಬ್ಯಾಂಕ್ ಎಫ್ ಡಿ, ಆರ್ ಡಿಗಳಿಗಿಂತ ಮ್ಯೂಚುವಲ್ ಫಂಡ್  ಎಸ್ ಐಪಿಗಳಲ್ಲಿ ಹೂಡಿಕೆ ಮಾಡುವ ಮೂಲಕ ದೀರ್ಘಾವಧಿಯಲ್ಲಿ ಉತ್ತಮ ರಿಟರ್ನ್ಸ್ ಪಡೆಯಬಹುದು. ಹೀಗಾಗಿ ನಿಮ್ಮ ಸಹೋದರಿಯ ದೀರ್ಘಾವಧಿಯ ಹಣಕಾಸಿನ ಯೋಜನೆಗೆ ನೆರವಾಗಲು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ. 

4.ಎಲ್ ಐಸಿ ಪಾಲಿಸಿಗಳು: ಒಂದು ವೇಳೆ ನೀವು ನಿಮ್ಮ ಸಹೋದರಿಗೆ ಹಣಕಾಸಿನ ಸ್ಥಿರತೆ ಹಾಗೂ ಸುರಕ್ಷತೆ ನೀಡಲು ಬಯಸಿದ್ದರೆ ಎಲ್ ಐಸಿ ಪಾಲಿಸಿಗಳು ಅತ್ಯುತ್ತಮ ಆಯ್ಕೆಗಳಾಗಿವೆ. ನೀವು ನಿಮ್ಮ ಸಹೋದರಿಗೆ ಉಡುಗೊರೆಯಾಗಿ ನೀಡಬಹುದಾದ ಕೆಲವು ಪಾಲಿಸಿಗಳೆಂದರೆ ಎಲ್ ಐಸಿ ಬಿಮಾ ಜ್ಯೋತಿ ಪಾಲಿಸಿ, ಎಲ್ ಐಸಿ ಬಿಮಾ ರತ್ನ, ಎಲ್ ಐಸಿ ನ್ಯೂ ಆನಂದ್ .

ವಿವಾಹ ಸಮಯದಲ್ಲಿ ಸ್ವೀಕರಿಸುವ ಸ್ತ್ರೀಧನಕ್ಕೆ ತೆರಿಗೆ ಇದೆಯಾ? ಪ್ರತಿಯೊಬ್ಬ ಮಹಿಳೆಗೂ ಈ ವಿಷಯ ತಿಳಿದಿರಲೇಬೇಕು

5.ಡಿಜಿಟಲ್ ಗೋಲ್ಡ್: ಭಾರತದ ಸಂಪ್ರದಾಯದಲ್ಲಿ ಚಿನ್ನಕ್ಕೆ ಮಹತ್ವದ ಸ್ಥಾನವಿದೆ. ಹಬ್ಬಗಳು ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಚಿನ್ನವನ್ನು ಉಡುಗೊರೆಯಾಗಿ ನೀಡುವ ಪದ್ಧತಿಯಿದೆ. ಹೀಗಿರುವಾಗ ನೀವು ನಿಮ್ಮ ಸಹೋದರಿಗೆ ಡಿಜಿಟಲ್ ಗೋಲ್ಡ್ ಅನ್ನು ಉಡುಗೊರೆಯಾಗಿ ನೀಡಬಹುದು. ಇದು ನಿಮ್ಮ ಸಹೋದರಿ ಪಾಲಿಗೆ ಉತ್ತಮ ಹೂಡಿಕೆಯೂ ಹೌದು. 

ರಕ್ಷಾ ಬಂಧನದಂದು ಇಂಥ ಹಣಕಾಸಿನ ಉಡುಗೊರೆಗಳನ್ನು ನೀಡುವ ಮೂಲಕ ನಿಮ್ಮ ಸಹೋದರಿಯನ್ನು ಖುಷಿಪಡಿಸಬಹುದು. ಇಂಥ ಉಡುಗೊರೆಗಳು ದೀರ್ಘಕಾಲದ ತನಕ ಅವರ ನೆರವಿಗೆ ಬರಬಲ್ಲವು ಕೂಡ. 
 

Follow Us:
Download App:
  • android
  • ios