ಬಿಟ್ ಕಾಯಿನ್ ಹಗರಣ: ರಾಜ್ ಕುಂದ್ರಾ ವಿರುದ್ಧ ಸಿಗದ ಪುರಾವೆ..!

Raj Kundra Might Get A Clean Chit In $300 Mn Bitcoin Scam
Highlights

ಬಿಟ್ ಕಾಯಿನ್ ವಂಚನೆ ಪ್ರಕರಣ

ರಾಜ್ ಕುಂದ್ರಾ ವಿರುದ್ದ ಸಿಗದ ಪುರಾವೆ

ಖುಲಾಸೆಯಾಗ್ತಾರಾ ಶಿಲ್ಪಾ ಶೆಟ್ಟಿ ಪತಿ?

ಮುಂಬೈ[ಜೂ.12]: ಬಿಟ್ ಕಾಯಿನ್ ವಂಚನೆ ಪ್ರಕರಣ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಿಂದ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಪಾರಾಗುವ ಲಕ್ಷಣ ಗೋಚರವಾಗುತ್ತಿದೆ. ಬಿಟ್ ಕಾಯಿನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ ಕುಂದ್ರಾ ವಿರುದ್ದ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಪ್ರಕರಣದಲ್ಲಿ ಪ್ರಮುಖ ಆರೋಪಿ ಗೇಯಿನ್ ಬಿಟ್ ಕಾಯಿನ್ ವೆಬ್ ಸ್ಥಾಪಕ ಅಮಿತ್ ಭಾರಾದ್ವಾಜ್ ಹಾಗೂ ಸಹೋದರ ವಿವೇಕ್ ಭಾರಾದ್ವಾಜ್ ಸೇರಿದಂತೆ 8 ಮಂದಿ ಆರೋಪಿಗಳ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕ್ರಿಮಿನಲ್ ದಾಖಲಿಸಲಾಗಿತ್ತು. 

ಸರ್ಕಾರದಿಂದ ಕಾನೂನು ಬಾಹಿರ ಎಂದು ಘೋಷಿಸಲ್ಪಟ್ಟ ವ್ಯಾಪಾರದಲ್ಲಿ, ಕುಂದ್ರಾ ಪಾತ್ರವಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಜಾರಿ ನಿರ್ದೇಶನಾಲಯ ಅವರನ್ನು ವಿಚಾರಣೆಗೊಳಪಡಿಸಿತ್ತು. ಹಗರಣದಲ್ಲಿ 8 ಸಾವಿರ ಹೂಡಿಕೆದಾರರು 2 ಸಾವಿರ ಕೋಟಿ ಹಣ ಕಳೆದುಕೊಂಡಿದ್ದಾರೆಂದು ಆರೋಪಿಸಿಲಾಗಿತ್ತು.

ಬಿಟ್ ಕಾಯಿನ್ ಅಥವಾ ಅಕ್ರಮಣ ವರ್ಗಾವಣೆಗೆ ಸಂಬಂಧಿಸಿದಂತೆ 4 ಸಾವಿರ ಕೋಟಿ ರೂ. ಅಂದರೆ ಒಟ್ಟು 433 ಬಿಟ್ ಕಾಯಿನ್‌ಗಳ ವಂಚನೆ ನಡೆಸಲಾಗಿದೆ. ಸರ್ಕಾರದಿಂದ ಹಲವು ಬಾರಿ ಎಚ್ಚರಿಕೆ ನೀಡಿದರೂ ಬಿಟ್ ಕಾಯಿನ್‌ನಲ್ಲಿ ಹಣ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ ಎಂಬುದು ಕಳವಳಕಾರಿ ಸಂಗತಿ.

loader