ಮತ್ತೆ ಮೋದಿ ಟೀಕಿಸಿದ ರಾಜನ್: ಈ ಬಾರಿಯ ಟೀಕೆ ಏನು?
ಮೋದಿ ಸರ್ಕಾರದ ಮತ್ತೊಂದು ನಿರ್ಧಾರ ಟೀಕಸಿದ ರಘುರಾಮ್ ರಾಜನ್| ವಿದೇಶಿ ಕರೆನ್ಸಿ ರೂಪದಲ್ಲಿ ಸಾಲ ನೀಡುವ ಭಾರತದ ಯೋಜನೆಗೆ ವಿರೋಧ| 7.1 ಟ್ರಿಲಿಯನ್ ರೂ. ಎರವಲು ಪಡೆಯುವ ನಿರ್ಧಾರ ವಿರೋಧಿಸಿದ ರಾಜನ್| ರಿಸರ್ವ್ ಬ್ಯಾಂಕ್ ಮಾಜಿ ಗರ್ವನರ್ ರಘುರಾಮ್ ರಾಜನ್|
ನವದೆಹಲಿ(ಜು.13): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸುತ್ತಲೇ ಇರುವ RBI ಮಾಜಿ ಗರ್ವನರ್ ರಘುರಾಮ್ ರಾಜನ್, ಇದೀಗ ಮೋದಿ ಸರ್ಕಾರದ ಮತ್ತೊಂದು ನಿರ್ಧಾರವನ್ನು ವಿಶ್ಲೇಷಿಸಿದ್ದಾರೆ.
ವಿದೇಶಿ ಕರೆನ್ಸಿ ರೂಪದಲ್ಲಿ ಸಾಲ ನೀಡುವ ಭಾರತದ ಯೋಜನೆ ಅಪಾಯದಿಂದ ಕೂಡಿದೆ ಎಂದು ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಬಾಂಡ್ ಮಾರಾಟ ಸ್ಥಳೀಯ ಮಾರುಕಟ್ಟೆಯಲ್ಲಿನ ದೇಶೀಯ ಸರ್ಕಾರಿ ಬಾಂಡ್‌ಗಳ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ ಎಂದು ರಾಜನ್ ಹೇಳಿದ್ದಾರೆ.
ನಿಧಾನಗತಿಯ ಆರ್ಥಿಕತೆ ತೆರಿಗೆ ಆದಾಯವನ್ನು ಕುಂಠಿತಗೊಳಿಸುವುದರಿಂದ, ಮೋದಿ ಸರ್ಕಾರ ಹಣ ಸಂಗ್ರಹಿಸಲು ದೇಶದಲ್ಲಿ ಬಾಂಡ್ ಮಾರಾಟಕ್ಕೆ ಸಿದ್ದವಾಗುತ್ತಿದೆ ಎಂದು ರಾಜನ್ ನುಡಿದಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ 7.1 ಟ್ರಿಲಿಯನ್ ರೂ. ಎರವಲು ಪಡೆಯುವ ಹಣಕಾಸು ಸಚಿವೆ ರ್ಮಲಾ ಸೀತಾರಾಮನ್ ನಿರ್ಧಾರವನ್ನು ರಾಜನ್ ಕಟು ಶಬ್ಧಗಳಲ್ಲಿ ಟೀಕಿಸಿದ್ದಾರೆ.