Asianet Suvarna News Asianet Suvarna News

ಭಾರತದ ಷೇರು ಮಾರುಕಟ್ಟೆಯ ಟಾಪ್ 5 ಹೂಡಿಕೆದಾರರು ಯಾರು? ಇವರು ಅನುಸರಿಸುವ ತಂತ್ರಗಳೇನು? ಇಲ್ಲಿದೆ ಮಾಹಿತಿ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಯಶಸ್ಸು ಗಳಿಸೋದು ಅಂದ್ಕೊಂಡಷ್ಟು ಸುಲಭವೇನಲ್ಲ. ಆದರೆ, ಕೆಲವರು ಮಾತ್ರ ಇಲ್ಲಿನ ತಂತ್ರ-ಪ್ರತಿತಂತ್ರಗಳನ್ನು ಚೆನ್ನಾಗಿ ಅರಿತು ಯಶಸ್ಸು ಗಳಿಸಿರುತ್ತಾರೆ. ಹಾಗಾದ್ರೆ ಭಾರತದ ಷೇರು ಮಾರುಕಟ್ಟೆಯ ಟಾಪ್ ಹೂಡಿಕೆದಾರರು ಯಾರು? ರಾಧಾಕೃಷ್ಣನ್ ದಮನಿಯಿಂದ ಹಿಡಿದು ರಾಕೇಶ್ ಜುಂಜುನ್ ವಾಲಾ ತನಕ ಜನಪ್ರಿಯ ಹೂಡಿಕೆದಾರರು ಅನುಸರಿಸುತ್ತಿದ್ದ ತಂತ್ರಗಳೇನು? ಇಲ್ಲಿದೆ ಮಾಹಿತಿ. 

Radhakishan Damani To Rakesh Jhunjhunwala Top Investors In Indian Share Market Ever anu
Author
First Published Mar 21, 2023, 5:00 PM IST

Business DesK:ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರರ ಸಂಖ್ಯೆ ಹೆಚ್ಚಿದೆ. ಸಾಧಾರಣ ವೇತನ ಪಡೆಯುವ ವ್ಯಕ್ತಿ ಕೂಡ ಬೇರೆಲ್ಲೂ ಹೂಡಿಕೆ ಮಾಡುವ ಬದಲು ಒಂದಿಷ್ಟು ರಿಸ್ಕ್ ತೆಗೆದುಕೊಂಡು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾನೆ. ಆದ್ರೆ ಷೇರುಗಳ ಮೇಲೆ ಹಣ ಹೂಡುವುದು ಅಷ್ಟು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಅದಕ್ಕೊಂದಿಷ್ಟು ಮಾಹಿತಿ ಹೊಂದಿರೋದು ಅಗತ್ಯ. ಭಾರತದ ಷೇರು ಮಾರುಕಟ್ಟೆಯಲ್ಲಿ ಕೆಲವು ಹೂಡಿಕೆದಾರರು ಮಾತ್ರ ಗಮನಾರ್ಹ ಯಶಸ್ಸು ಸಾಧಿಸಿದ್ದು, ಹೂಡಿಕೆ ಮಾಡುವಾಗ ಅವರು ಅನುಸರಿಸಿದ ಹಾದಿಯನ್ನೇ ಕೆಲವು ಹೂಡಿಕೆದಾರರು ಅನುಕರಣೆ ಮಾಡುತ್ತಾರೆ ಕೂಡ. ಷೇರು ಮಾರುಕಟ್ಟೆ ಟಾಪ್ ಹೂಡಿಕೆದಾರರನ್ನು ಪೂರ್ಣ ಪ್ರಮಾಣದಲ್ಲಿ ಅನುಸರಿಸಲು ಸಾಧ್ಯವಾಗದಿದ್ರೂ ಅವರ ಹೂಡಿಕೆ ತಂತ್ರಗಳು, ನೀತಿಗಳು ಹಾಗೂ ಜೀವನಾನುಭವದಿಂದ ನಾವು ಕೆಲವು ಪಾಠಗಳನ್ನು ಕಲಿಯಬಹುದು. ಇದು ನಮ್ಮ ಹೂಡಿಕೆ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ನೆರವು ನೀಡಲಿದೆ. ಹಾಗಾದ್ರೆ ಭಾರತದ ಷೇತು ಮಾರುಕಟ್ಟೆಯ ಟಾಪ್ ಹೂಡಿಕೆದಾರರು ಯಾರು? ಅವರಿಂದ ನಾವು ಏನು ಕಲಿಯಬಹುದು? ಇಲ್ಲಿದೆ ಮಾಹಿತಿ.

ರಾಧಾಕೃಷ್ಣನ್ ದಮನಿ
ಭಾರತದ ಷೇರು ಮಾರುಕಟ್ಟೆಯ ಜನಪ್ರಿಯ ಹೆಸರು ರಾಧಾಕೃಷ್ಣನ್ ದಮನಿ. ದೇಶಾದ್ಯಂತ ಜನಪ್ರಿಯತೆ ಗಳಿಸಿರುವ ಡಿಮಾರ್ಟ್ ಎಂಬ ಸೂಪರ್ ಮಾರ್ಕೆಟ್ ಸಂಸ್ಥಾಪಕರಾಗಿರುವ ರಾಧಾಕೃಷ್ಣನ್ ದಮನಿ ಷೇರು ಮಾರುಕಟ್ಟೆಯ ನಿಪುಣ ಹೂಡಿಕೆದಾರ ಕೂಡ ಹೌದು. ಯಾವುದೇ ಒಂದು ಷೇರಿನ ಮೇಲೆ ಹೂಡಿಕೆ ಮಾಡುವ ಮುನ್ನ ಆ ಕಂಪನಿಯ ನೈತಿಕ ಮೌಲ್ಯಗಳ ಬಗ್ಗೆ ಸಮರ್ಪಕವಾಗಿ ಅಧ್ಯಯನ ನಡೆಸೋದು ಅಗತ್ಯ. ಇವರ ತಂದೆ ಷೇರು ಮಾರುಕಟ್ಟೆ ದಲ್ಲಾಳಿಯಾಗಿದ್ದರು, ಅವರ ಮರಣದ ಬಳಿಕ ದಮನಿ ಷೇರು ಟ್ರೇಡಿಂಗ್ ಗೆ ವೃತ್ತಿ ಬದಲಾಯಿಸಿಕೊಂಡರು. ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ ದಮನಿ, ಷೇರು ವಹಿವಾಟಿಗೆ ಕೈ ಹಾಕುವ ಮುನ್ನ ಬಾಲ್-ಬೇರಿಂಗ್ ಕೈಗಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 1990ರಲ್ಲಿ ಷೇರು ಮಾರುಕಟ್ಟೆಯಲ್ಲಿ ಹರ್ಷದ್ ಮೆಹ್ತಾ ಪ್ರಭಾವ ಕುಸಿಯುತ್ತಿದ್ದಂತೆ ದಮನಿ ಯಶಸ್ಸಿನ ಓಟ ಪ್ರಾರಂಭವಾಗಿತ್ತು.

Starbucks ಸಾರಥ್ಯ ವಹಿಸಿದ ಭಾರತೀಯ;ಅಧಿಕೃತವಾಗಿ ಸಿಇಒ ಪಟ್ಟ ಅಲಂಕರಿಸಿದ ಲಕ್ಷ್ಮಣ್ ನರಸಿಂಹನ್

ಮೊಹ್ನೀಶ್ ಪಬ್ರೈ
ಪಬ್ರೈ ಹೂಡಿಕೆ ನಿಧಿಗಳ ಸಂಸ್ಥಾಪಕ ಮೊಹ್ನೀಶ್ ಪಬ್ರೈ, ಷೇರುಹೂಡಿಕೆದಾರರಾಗಿದ್ದು, ಹೂಡಿಕೆ ಕುರಿತು ಎರಡು ಪುಸ್ತಕಗಳನ್ನು ಕೂಡ ಬರೆದಿದ್ದಾರೆ. ಇವರು ಧಂಡೋ ಫಂಡ್ಸ್ ಸ್ಥಾಪಕರು ಕೂಡ ಹೌದು. ಟೆಲ್ಲಬ್ಸ್ ಎಂಬ ಹೈ ಸ್ಪೀಡ್ ಡೇಟಾ ನೆಟ್ ವರ್ಕಿಂಗ್ ಕಂಪನಿಯಾಗಿದ್ದು, ಇದರ ಮೂಲಕ ಮೊಹ್ನೀಶ್ ಪಬ್ರೈ ತಮ್ಮ ವೃತ್ತಿ ಪ್ರಯಾಣ ಪ್ರಾರಂಭಿಸಿದ್ದರು. ಆ ಬಳಿಕ ಇವರು ಇದೇ ಕಂಪನಿಯ ಮಾರ್ಕೆಟಿಂಗ್ ಹಾಗೂ ಮಾರಾಟ ಇಲಾಖೆಯ ವಿದೇಶಿ ವಿಭಾಗಕ್ಕೆ ವರ್ಗಾವಣೆಯಾಗಿದ್ದರು.

ಅಶೀಶ್ ಧವನ್ 
ಹಾರ್ವರ್ಡ್ ಎಂಬಿಎ ಪದವೀಧರರಾಗಿರುವ ಅಶೀಶ್ ಧವನ್ ಪ್ರಮುಖ ಖಾಸಗಿ ಈಕ್ವಿಟಿ ಫೈನಾನ್ಸಿಯರ್ ಗಳಲ್ಲಿ ಒಬ್ಬರು. ಭಾರತದ ಅತ್ಯಂತ ಸಂಪದ್ಭರಿತ ಖಾಸಗಿ ಈಕ್ವಿಟಿ ಸಂಸ್ಥೆ ಕ್ರಿಸ್ ಕ್ಯಾಪಿಟಲ್ ಸಹಸಂಸ್ಥಾಪಕರು ಕೂಡ. ಇವರು ಕ್ರಿಸ್ ಕ್ಯಾಪಿಟಲ್ ಸಂಸ್ಥೆಯಲ್ಲಿ 20ಕ್ಕೂ ಅಧಿಕ ವರ್ಷಗಳ ಕಾಲ ಕಾರ್ಯನಿರ್ವಹಿಸಿ, 2012ರಲ್ಲಿ ಉದ್ಯೋಗ ತೊರೆದಿದ್ದರು.

ನೆಮಿಶ್ಎಸ್. ಶಾ
ನೆಮಿಶ್ ಎಸ್. ಶಾ ಹಣಕಾಸು ಸಲಹೆಗಾರರಾಗಿ 15ಕ್ಕೂ ಅಧಿಕ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರು ಗ್ರಾಹಕರಿಗೆ ಸುದೀರ್ಘ ಅವಧಿಯ ಲಾಭದಾಯಕ ಪೋರ್ಟ್ ಫೋಲಿಯೋ ಸೃಷ್ಟಿಸಲು ನೆರವು ನೀಡಿದ್ದಾರೆ ಕೂಡ. ಇವರು ಹೂಡಿಕೆದಾರರಿಗೆ ಅತ್ಯುತ್ತಮ ಹಣಕಾಸು ಸಲಹೆ ನೀಡುವ ಜೊತೆಗೆ ಸಮಸ್ಯೆಗಳಿಗೆ ವಾಸ್ತವಕ್ಕೆ ಹತ್ತಿರವಾದ ಪರಿಹಾರಗಳನ್ನು ಕೂಡ ನೀಡುತ್ತಿದ್ದಾರೆ.  

'ಇದೇ ಲಾಸ್ಟು..' ಅಂದ್ಕೊಂಡು 92ನೇ ವರ್ಷದಲ್ಲಿ ಐದನೇ ಬಾರಿ ಮದುವೆಯಾದ ರುಪರ್ಟ್‌ ಮುರ್ಡೋಕ್‌!

ರಾಕೇಶ್ ಜುಂಜುನ್ ವಾಲಾ
ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಜನಪ್ರಿಯ ಹೆಸರು ರಾಕೇಶ್ ಜುಂಜುನ್ ವಾಲಾ. ಇವರನ್ನು 'ದಿ ಬಿಗ್ ಬುಲ್' ಎಂದು ಕೂಡ ಕರೆಯಲಾಗುತ್ತದೆ. ಭಾರತದ ವಾರನ್ ಬಫೆಟ್ ಎಂದೇ ಕರೆಯಲಾಗುವ ಜುಂಜುನ್ ವಾಲಾ, ಕೇವಲ  5,000ರೂ. ಜೊತೆಗೆ ತಮ್ಮ ಈಕ್ವಿಟಿ ಹೂಡಿಕೆ ಪ್ರಯಾಣ ಪ್ರಾರಂಭಿಸಿದ್ದರು. ಷೇರು ಮಾರುಕಟ್ಟೆಯಲ್ಲಿ ಬಹುಬೇಗ ಯಶಸ್ಸು ಕಂಡ ಜುಂಜುನ್ ವಾಲಾ, ಅಪ್ಟೆಕ್ ಲಿ. ಹಾಗೂ ಹಂಗಾಮ ಡಿಜಿಟಲ್ ಮೀಡಿಯಾ ಎಂಟರ್ ಟೈನ್ ಮೆಂಟ್ ನಲ್ಲಿ ಕಾರ್ಯನಿರ್ವಾಹಕ ಹುದ್ದೆ ಕೂಡ ನಿಭಾಯಿಸಿದ್ದರು. ರೇರ್ ಎಂಟರ್ ಪ್ರೈಸಸ್ ಎಂಬ ಹೂಡಿಕೆ ಸಂಸ್ಥೆಯ ಮುಖ್ಯಸ್ಥರಾಗಿದ್ದ ಜುಂಜುನ್ ವಾಲಾ ಕಳೆದ ವರ್ಷ ಆಕಾಶ್ ಏರ್ ಲೈನ್ಸ್ ಪ್ರಾರಂಭಿಸಿದ್ದರು ಕೂಡ. ಆದರೆ, ಇದು ಪ್ರಾರಂಭಗೊಂಡ ಕೆಲವೇ ದಿನಗಳಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. 


 

Follow Us:
Download App:
  • android
  • ios