ದೋಹಾ(ಡಿ.03) ಒಪೆಕ್ ರಾಷ್ಟ್ರಗಳ ಪಟ್ಟಿಯಿಂದ ತಾನು ಹೊರನಡೆಯುತ್ತೇನೆ ಎಂದು ಕತಾರ್ ಹೇಳಿದೆ.2019 ರ ಜನವರಿಯಲ್ಲಿ ಕತಾರ್ ಸದಸ್ಯತ್ವ ಕೊನೆ ಮಾಡಲಿದೆ.

ಹೊರನಡೆಯುವುದಕ್ಕೆ ಯಾವುದೆ ರಾಜಕಾರಣವಿಲ್ಲ ಎಂದು ಕತಾರ್ ಇಂಧನ ಸಚಿವ ಸಾದ್ ಅಲ್ ಕಾಬಿ ತಿಳಿಸಿದ್ದಾರೆ. ಒಪೆಕ್ ರಾಷ್ಟ್ರಗಳ ಪಟ್ಟಿಯಲ್ಲಿ ಇದ್ದರೂ ನೀತಿ-ನಿಯಮ ರೂಪಣೆಯಲ್ಲಿ ಕತಾರ್ ಪಾತ್ರ ಏನೂ ಇಲ್ಲದ ಸ್ಥಿತಿ ಇದೆ. ತೈಲೋದ್ಯಮದ ಕಡೆ ಇನ್ನಷ್ಟು ಗಮನ ನೀಡಿ ದೇಶದಲ್ಲಿ ನಿಸರ್ಗದತ್ತವಾಗಿ ದೊರೆಯುತ್ತಿರುವ ನಿಕ್ಷೇಪಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಇಂಥ ಹೆಜ್ಜೆ ಇಡುತ್ತಿದ್ದೇವೆ ಎಂದು ಕತಾರ್ ಹೇಳಿದೆ.

20 ರು. ಇಳಿದಂಗಾಯ್ತು ಪೆಟ್ರೋಲ್ ಬೆಲೆ!

ಹೆಸರಿಗೆ ಮಾತ್ರ ಒಪೆಕ್ ಒಕ್ಕೂಟದಲ್ಲಿ ಇದ್ದಂತೆ ಕಾಣುತ್ತಿದೆ. ಬೇರೆ ರಾಷ್ಟ್ರಗಳೇ ಒಕ್ಕೂಟದಲ್ಲಿ ಪ್ರಭುತ್ವ ಸಾಧಿಸಿವೆ. ಸೌದಿ ಅರೆಬಿಯಾದಂತಹ ಅತಿದೊಡ್ಡ ತೈಲ ಉತ್ಪಾದಕ ದೇಶವೆ ಎಲ್ಲ ತೀರ್ಮಾನ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ಕತಾರ್ ಹೇಳಿದೆ. ವಾರ್ಷಿಕ 77 ದಶಲಕ್ಷ ಟನ್ ಇರುವ ತೈಲ ಉತ್ಪಾದಮೆಯನ್ನು 110 ದಶಲಕ್ಷ ಟನ್‌ಗೆ ಏರಿಕೆ ಮಾಡುವ ಗುರಿ ಇದೆ ಎಂದು ತಿಳಿಸಿದೆ.