ನವದೆಹಲಿ :  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಕಚ್ಚಾ ತೈಲ ದರ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸೋಮವಾರವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿದಿದೆ. 

ಸೋಮವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ದರ  31 ಪೈಸೆ ಇಳಿಕೆಯಾಗಿದ್ದು, ಇದರಿಂದ ಪ್ರತೀ ಲೀಟರ್ ಗೆ 71.93 ರು.ಗಳಾಗಿದೆ. ಇನ್ನು ಡೀಸೆಲ್ ದರ 37 ಪೈಸೆ ಇಳಿಕೆಯಾಗಿದ್ದು ಇದರಿಂದ ಪ್ರತೀ ಲೀಟರ್ ಡೀಸೆಲ್ ಬೆಲೆ 66.66 ರು.ಗಳಷ್ಟಾಗಿದೆ.  

ಬೆಂಗಳೂರಿನಲ್ಲಿಯೂ ಕೂಡ ದರ ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ಬೆಲೆ 72.49 ಹಾಗೂ ಪ್ರತೀ ಲೀಟರ್ ಡೀಸೆಲ್ ಬೆಲೆ 67 ರು.ಗಳಾಗಿದೆ. 

90ರು.ಗಳಿಗೂ ಹೆಚ್ಚಾಗಿದ್ದ ಪೆಟ್ರೋಲ್ ಬೆಲೆ ಇದೀಗ 70 ರು.ಗಳ ಆಸು ಪಾಸಿಗೆ ತಲುಪಿದೆ. ಇದರಿಂದ ಪ್ರತೀ ಲೀಟರ್ ಪೆಟ್ರೋಲ್ ಮೇಲೆ 20 ರು.ಗಳಷ್ಟು ಇಳಿಕೆ ಕಂಡಂತಾಗಿದೆ. ಪೆಟ್ರೋಲ್ ದರದೊಂದಿಗೆ ಏರಿಕೆಯಾಗುತ್ತಲೇ ಸಾಗಿದ್ದ ಡೀಸೆಲ್ ಬೆಲೆಯೂ ಕೂಡ ನಿತಂತರವಾಗಿ ಇಳಿಕೆಯತ್ತಲೇ ಸಾಗಿದೆ. 

ಸೆಪ್ಟೆಂಬರ್ ತಿಂಗಳಲ್ಲಿ ದರ ಏರಿಕೆ ಬಿಸಿಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಕಳೆದ 50 ದಿನಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿರುವ  ತೈಲ ದರವು  ರಿಲೀಫ್ ನೀಡಿದೆ.