200 ರೂ. ಸಾಲ ಮಾಡಿ ಲಾಟರಿ ಕೊಂಡ: 1.2 ಕೋಟಿ ರೂ ಗೆದ್ದ ಭಂಡ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Sep 2018, 1:30 PM IST
Punjab labourer borrows Rs 200 to buy lottery, wins Rs 1.5 crore!
Highlights

ಸಾಲಮಾಡಿ ಕೊಂಡ ಲಾಟರಿಗೆ ಹೋಡಿತು ಬಂಪರ್ ಬಹುಮಾನ! ಬರೋಬ್ಬರಿ 1.2 ಕೋಟಿ ರೂ. ಬಹುಮಾನ ಗೆದ್ದ ಮನೋಜ್ ಕುಮಾರ್! ಪಂಜಾಬ್ ಸ್ಟೇಲ್ ಲಾಟರಿಯಲ್ಲಿ ಬಹುಮಾನ ಗೆದ್ದ ಮನೋಜ್ ಕುಮಾರ್! ಸ್ನೇಹಿತನ ಬಳಿ 200 ರೂ. ಸಾಲ ಮಾಡಿ ಲಾಟರಿ ಕೊಂಡಿದ್ದ ಮನೋಜ್

ಲುಧಿಯಾನ(ಸೆ.6): ಲಾಟರಿ ಕೊಳ್ಳಲು ಹಣವಿಲ್ಲದೇ ಪರದಾಡುತ್ತಿದ್ದ ವ್ಯಕ್ತಿಯೋರ್ವ, ಕಡೆಗೆ 200 ರೂ. ಸಾಲ ಮಾಡಿ ಲಾಟರಿ ಕೊಂಡ. ಅವನ ಅದೃಷ್ಟ ಎಂತಾದ್ದು ನೋಡಿ, ಆತನ ಲಾಟರಿ ನಂಬರ್ ಗೆದ್ದ ನಂಬರ್‌ಗೆ ಮ್ಯಾಚ್ ಆಗಿ ಆತ ಇದೀಗ ಬರೋಬ್ಬರಿ 1.2 ಕೋಟಿ ರೂ.ಗಳ ಒಡೆಯ.

ಹೌದು, ಪಂಜಾಬ್ ಸರ್ಕಾರದ ಪಂಜಾಬ್ ಸ್ಟೇಟ್ ಲಾಟರಿಯನ್ನು ೨೦೦ ರೂ. ಸಾಲ ಮಾಡಿ ಕೊಂಡಿದ್ದ ಮನೋಜ್ ಕುಮಾರ್ ಎಂಬ ವ್ಯಕ್ತಿಗೆ ಬಂಪರ್ ಬಹುಮಾನ ಲಭಿಸಿದ್ದು, ಮನೋಜ್ ಕುಮಾರ್ ಬರೋಬ್ಬರಿ 1.2 ಕೋಟಿ ರೂ. ಗೆದ್ದಿದ್ದಾನೆ. ಸಾಮಾನ್ಯ ಕಾರ್ಮಿಕನಾಗಿರುವ ಮನೋಜ್ ಕುಮಾರ್, ಲಾಟರಿ ಕೊಳ್ಳಲು ದುಡ್ಡಿಲ್ಲದೇ ಸ್ನೇಹಿತನ ಬಳಿ 200 ರೂ. ಸಾಲ ಮಾಡಿ ಲಾಟರಿ ಪಡೆದಿದ್ದ.

ಸದ್ಯ ಮನೋಜ್ ಕುಮಾರ್‌ಗೆ 1.2 ಕೋಟಿ ರೂ ಲಾಟರಿ ಬಹುಮಾನ ಲಭಿಸಿದ್ದು, ಆದಷ್ಟು ಶೀಘ್ರವಾಗಿ ಈ ಹಣವನ್ನು ಮನೋಜ್ ಕುಮಾರ್‌ಗೆ ನೀಡುವುದಾಗಿ ಪಂಜಾಬ್ ಸ್ಟೇಟ್ ಲಾಟರಿ ನಿರ್ದೇಶಕ ಟಿಪಿಎಸ್ ಫೂಲ್ಕಾ ಸ್ಪಷ್ಟಪಡಿಸಿದ್ದಾರೆ.

 

loader