Asianet Suvarna News Asianet Suvarna News

ಮನೆಯ ಸೀಫೇಸ್‌ ವೀವ್‌ಗೆ ಅಡ್ಡಿ, ಎದುರಿನ ಇಡೀ ಬಿಲ್ಡಿಂಗ್‌ ಖರೀದಿ ಮಾಡಿದ ರೇಖಾ ಜುಂಜುನ್‌ವಾಲಾ!

ತಮ್ಮ ರಾರೆ ವಿಲ್ಲಾದ ಪಕ್ಕದಲ್ಲಿಯೇ ಇರುವ ಬಿಲ್ಡಿಂಗ್‌ ಪುನರ್‌ಅಭಿವೃದ್ಧಿ ಆಗಬಹುದು. ಇದರಿಂದಾಗಿ ಮನೆಯ ಸೀಫೇಸ್‌ ವೀವ್‌ಗೆ ಅಡ್ಡಿ ಆಗಬಹುದು ಎನ್ನುವ  ಅಂದಾಜಿನಲ್ಲಿ ರೇಖಾ ಜುಂಜುನ್‌ವಾಲಾ ಮನೆಯ ಎದುರಿನ ಸಂಪೂರ್ಣ ಬಿಲ್ಡಿಂಗ್‌ ಅನ್ನೇ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.

protect homes sea view Rekha Jhunjhunwala buys next door building for Rs 118 cr san
Author
First Published Mar 23, 2024, 5:28 PM IST

ಮುಂಬೈ (ಮಾ.23): ಹೂಡಿಕೆದಾರ ರಾಕೇಶ್‌ ಜುಂಜುನ್‌ವಾಲಾ ಯಾರಿಗೆ ಗೊತ್ತಿಲ್ಲ. ದೇಶದ ಸಣ್ಣ ಸಣ್ಣ ಕಂಪನಿಗಳಲ್ಲೇ ಹೂಡಿಕೆ ಮಾಡಿಯೇ  ಶತಕೋಟ್ಯಧಿಪತಿಯಾಗಿದ್ದ ರಾಕೇಶ್‌ ಜುಂಜುನ್‌ ವಾಲಾ 2022ರ ಆಗಸ್ಟ್‌ 14 ರಂದು ನಿಧನರಾದರು. ಅಂದಿನಿಂದಲೂ ರಾಕೇಶ್‌ ಜುಂಜುನ್‌ವಾಲಾ ಅವರ ಹೂಡಿಕೆ ಸಾಮ್ರಾಜ್ಯವನ್ನು ನೋಡಿಕೊಳ್ಳುತ್ತಿರುವುದು ಅವರ ಪತ್ನಿ ರೇಖಾ ಜುಂಜುನ್‌ವಾಲಾ. ಇತ್ತೀಚೆಗೆ ರೇಖಾ ಜುಂಜುನ್‌ವಾಲಾ ಹೊಸ ಖರೀದಿ ಮಾಡಿದ್ದಾರೆ. ಹಾಗಂತ ಯಾವುದೇ ಸ್ಟಾಕ್‌ಅನ್ನು ಅವರು ಖರೀದಿ ಮಾಡಿದ್ದಲ್ಲ. ಮುಂಬೈನ ಮಲಬಾರ್‌ ಹಿಲ್‌ನಲ್ಲಿ ಅರಬ್ಬೀ ಸಮುದ್ರಕ್ಕೆ ಮುಖ ಮಾಡಿದಂತಿರುವ ತಮ್ಮ ಮನೆಯ ಸೀಫೇಸ್‌ ಲುಕ್‌ಗೆ ಸಂಭಾವ್ಯ ಅಡ್ಡಿಯಾಗಬಹುದಾಗಿದ್ದ ಎದುರಿನ ಇಡೀ ಬಿಲ್ಡಿಂಗ್‌ಅನ್ನು ಅವರು ಖರೀದಿ ಮಾಡಿದ್ದಾರೆ. ಆ ಮೂಲಕ ಮಲಬಾರ್‌ ಹಿಲ್‌ನಲ್ಲಿರುವ ರಾರೆ ವಿಲ್ಲಾದ ಸೀಫೇಸ್‌ಗೆ ಲುಕ್‌ಅನ್ನು ಹಾಗೇ ಉಳಿಸಿಕೊಳ್ಳಲು ಮುಂದಾಗಿದ್ದಾರೆ.

ಜುಂಜುನ್‌ವಾಲಾ ಅವರ ರಾರೆ ವಿಲ್ಲಾ ನಿವಾಸವು ಸಮುದ್ರಮುಖಿಯಾಗಿಯೇ ಇರುವ ಇನ್ನೊಂದು ಬಿಲ್ಡಿಂಗ್‌ ಆಗಿರುವ ರಾಕ್‌ಸೈಡ್‌ ಸಿಎಚ್‌ಎಸ್‌ನ ಹಿಂದೆಯೇ ಇದೆ. ಇತ್ತೀಚೆಗೆ ರಾಕ್‌ಸೈಡ್‌ ಸಿಎಚ್‌ಎಸ್‌ಅನ್ನು ಪುನರ್‌ ಅಭಿವೃದ್ಧಿ ಮಾಡಲಾಗುತ್ತದೆ ಎನ್ನುವ ಸುದ್ದಿ ಹಬ್ಬಿತ್ತು. ರಾಕ್‌ಸೈಡ್ ಮತ್ತು ವಾಲ್ಕೇಶ್ವರದಲ್ಲಿ ಇನ್ನೂ ಆರು ಕಟ್ಟಡಗಳನ್ನು ಕ್ಲಸ್ಟರ್ ಯೋಜನೆಯಡಿಯಲ್ಲಿ ಪುನರಾಭಿವೃದ್ಧಿಗೆ ನಿಗದಿ ಮಾಡಲಾಗಿತ್ತು. ಪ್ರಮುಖ ರಿಯಲ್‌ ಎಸ್ಟೇಟ್‌ ಡೆವಲಪರ್ ಶಾಪೂರ್ಜಿ ಪಲ್ಲೊಂಜಿ ಅವರು ವಾಣಿಜ್ಯ ಪ್ರಸ್ತಾವನೆ ಕೂಡ ಸಲ್ಲಿಸಿದ್ದರು, ಅದರ ಮೂಲಕ ಪ್ರತಿ ಮನೆಯ ಮಾಲೀಕರು ಪುನರಾಭಿವೃದ್ಧಿ ರೂಪದಲ್ಲಿ ಸುಮಾರು 50 ಪ್ರತಿಶತದಷ್ಟು ಹೆಚ್ಚುವರಿ ಕಾರ್ಪೆಟ್ ಪ್ರದೇಶವನ್ನು ಪಡೆಯುತ್ತಾರೆ ಎನ್ನಲಾಗಿತ್ತು.

ಹಾಗೇನಾದರೂ ರಾಕ್‌ಸೈಡ್‌ ಸಿಎಚ್‌ಎಸ್‌ ಪುನರ್‌ ಅಭಿವೃದ್ಧಿ ಕಂಡಲ್ಲಿ, ರಾರೆ ವಿಲ್ಲಾದ ಸೀಫೇಸ್‌ ವೀವ್‌ಗೆ ಅಡ್ಡಿಯಾಗಲಿದೆ ಎನ್ನುವುದನ್ನು ಅರಿತ ರೇಖಾ ಜುಂಜುನ್‌ವಾಲಾ, ರಾಕ್‌ಸೈಡ್‌ ಸಿಎಚ್‌ಎಸ್‌ನ ಪ್ರತಿ ಯುನಿಟ್‌ನೊಂದಿಗೆ ಇಡೀ ಬಿಲ್ಡಿಂಗ್‌ಅನ್ನೇ ಅವರು ಖರೀದಿ ಮಾಡಿದ್ದಾರೆ. 2023ರ ನವೆಂಬರ್‌ನಿಂದ ಜುಂಜುನ್‌ವಾಲಾ ಅವರು ತಮ್ಮ ಅನೇಕ ಕಂಪನಿಗಳ ಮೂಲಕ ರಾಕ್‌ಸೈಡ್‌ ಸಿಎಚ್‌ಎಸ್‌ನ ಎಲ್ಲಾ 9 ಅಪಾರ್ಟ್‌ಮೆಂಟ್‌ಗಳನ್ನು 118 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ ಎಂದು ಜಾಪ್‌ಕೀ ಹೇಳಿದೆ. ನೋಂದಣಿ ದಾಖಲೆಗಳೊಂದಿಗೆ ಈ ಮಾಹಿತಿಯನ್ನು ನೀಡಿದೆ. ಇನ್ನೂ ಕೆಲವು ಮೂಲಗಳ ಪ್ರಕಾರ ಈ ಬಿಲ್ಡಿಂಗ್‌ನಲ್ಲಿ ಒಟ್ಟು 24 ಅಪಾರ್ಟ್‌ಮೆಂಟ್‌ಗಳಿದ್ದು, ಇದರಲ್ಲಿ 19 ಅಪಾರ್ಟ್‌ಮೆಂಟ್‌ಗಳನ್ನು ರೇಖಾ ಜುಂಜುನ್‌ವಾಲಾ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ನನ್ನ ಅವಳಿ ಮಕ್ಕಳಿಗೆ 25 ವರ್ಷ ಆಗೋವರೆಗೆ ಬದುಕಬೇಕು, ಹಾಗಾಗಿ ಮೀನಿನ ಥರ ನೀರು ಕುಡಿತೇನೆ!

ದಕ್ಷಿಣ ಮುಂಬೈನಲ್ಲಿರುವ ಅಲ್ಟಾ ಶ್ರೀಮಂತರ ಬೇಡಿಕೆಗಳನ್ನು ಪೂರೈಸಲು ಡೆವಲಪರ್‌ಗಳ ಮುಂದಾಗಿರುವ ಕಾರಣಕ್ಕೆ ಸಮುದ್ರಕ್ಕೆ ಎದುರಾಗಿರುವ ವಾಲ್ಕೇಶ್ವರ್‌ ಕೂಡ ಪುನರಾಭಿವೃದ್ಧಿ ಕಾಣುತ್ತಿದೆ. ಲೋಧಾ ಮಲಬಾರ್ ಕಳೆದ 18 ತಿಂಗಳುಗಳಲ್ಲಿ ದಾಖಲೆಯ ವಹಿವಾಟುಗಳೊಂದಿಗೆ ಆ ಮಾರುಕಟ್ಟೆಯಲ್ಲಿ ಹಲ್‌ಚಲ್‌ ಸೃಷ್ಟಿಸಿದೆ. ಫ್ಯಾಮಿ ಕೇರ್‌ನ ಕೈಗಾರಿಕೋದ್ಯಮಿ ಜೆಪಿ ತಪರಿಯಾ ಅವರು 369 ಕೋಟಿ ರೂಪಾಯಿಗಳಿಗೆ ಟ್ರಿಪ್ಲೆಕ್ಸ್ ಖರೀದಿಸುವ ಮೂಲಕ ಭಾರತದ ಅತ್ಯಂತ ದುಬಾರಿ ಅಪಾರ್ಟ್ಮೆಂಟ್ ವ್ಯವಹಾರವನ್ನು ಮಾಡಿದ್ದಾರೆ.

 

5 ಸಾವಿರದಿಂದ 46 ಸಾವಿರ ಕೋಟಿ ರೂಪಾಯಿಯ ಸಾಮ್ರಾಜ್ಯ ಕಟ್ಟಿದ್ದ ಬಿಗ್‌ ಬುಲ್‌ ರಾಕೇಶ್‌ ಜುಂಜುನ್‌ವಾಲಾ!

ರಾಕ್‌ಸೈಡ್‌ ಸಿಎಚ್‌ಎಸ್‌ನಲ್ಲಿನ ದೊಡ್ಡ ಪ್ರಮಾಣದ ಮಾಲೀಕರಾಗಿರುವ ರೇಖಾ ಜುಂಜುನ್‌ವಾಲಾ ಅವರ ಸ್ಪಷ್ಟತೆಗಾಗಿ ಕಾಯುತ್ತಿರುವ ಕಾರಣ ಕ್ಲಸ್ಟರ್ ಪುನರಾಭಿವೃದ್ಧಿ ಕಾರ್ಯತಂತ್ರವನ್ನು ಶಪೂರ್ಜಿ ಪಲ್ಲೊಂಜಿ ಕಂಪನಿ ಸದ್ಯ ಸ್ಥಗಿತಗೊಳಿಸಿದೆ ಎಂದು ಬ್ರೋಕರ್‌ಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios