ನೌಕರರಿಗೆ ಗುಡ್ ನ್ಯೂಸ್..ಇಪಿಎಫ್ ಕಡ್ಡಾಯ ಮಿತಿ ಹೆಚ್ಚಳ

ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ಒಂದೆಲ್ಲಾ ಒಂದು ಬದಲಾವಣೆ ಮಾಡುತ್ತಿದ್ದು ನೌಕರರ ಪರವಾಗಿ ಸದಾ ಬ್ಯಾಟಿಂಗ್ ನಡೆಸುತ್ತಿದೆ.  ಈ ಬಾರಿ ಕಡ್ಡಾಯ ಕೂಲಿ ಮಿತಿಯನ್ನು ಏರಿಕೆ ಮಾಡಲಿ ಮುಂದಾಗಿದ್ದು ಪ್ರಸ್ತಾವವನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ.

Proposal to increase mandatory cover limit under EPFO sent to Finance Ministry

ಬೆಂಗಳೂರು[ಜು.18]  ಸರಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ)ಅಡಿಯಲ್ಲಿ ಕಡ್ಡಾಯ ಇಪಿಎಫ್ ಮಾಸಿಕ ವೇತನದ ಮಿತಿಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗಿದೆ. ವೇತನ ಮಿತಿಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಕೆಲವು ತಿದ್ದುಪಡಿಗಳೊಂದಿಗೆ ಹಣಕಾಸು ಸಚಿವಾಲಯಕ್ಕೆ ಮರು ಕಳುಹಿಸಲಾಗಿದ್ದು  ಸರಕಾರಿ ನೌಕರರಿಗೆ ಶುಭಸುದ್ದಿ ಇದೆ.

ಹೊಸ ಪ್ರಸ್ತಾಪದ ಅನುಸಾರ ರೂ. 15,000 ದಿಂದ ರೂ. 21,000 ಸಾವಿರಕ್ಕೆ ಕಡ್ಡಾಯ ಕೂಲಿ ಮಿತಿಯನ್ನು  ಹೆಚ್ಚಿಸಬೇಕೆಂದು ತಿಳಿಸಿದೆ. ಹಣಕಾಸು ಸಚಿವಾಲಯವು ಈ ತಿದ್ದುಪಡಿಗಳನ್ನು ಒಪ್ಪಿದ್ದು, ಪ್ರಸ್ತಾಪವನ್ನು ಶೀಘ್ರದಲ್ಲೇ ಅಂಗೀಕರಿಸಬಹುದು.

ಪಿಎಫ್ ಖಾತೆ ಹೊಂದಿದವರಿಗೆ ಶುಭ ಸುದ್ದಿ

ಸಂಘಟಿತ ವಲಯ ನೌಕರರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಿಸಲು ಹಿಂದೆ ಚರ್ಚಿಸಲಾಗಿದೆ. ಆದರೆ ಹಣಕಾಸು ಸಚಿವಾಲಯ ಕೆಲವು ಕಾರಣಗಳಿಂದಾಗಿ ಅದನ್ನು ನಿರಾಕರಿಸಿದೆ.ಪಿಎಫ್, ಪಿಂಚಣಿ ಪ್ರಯೋಜನ ಕಡ್ಡಾಯ ವೇತನದ ಮಿತಿ (ನಿರ್ಧರಿಸಿದ ಮಿತಿ) ಅಡಿಯಲ್ಲಿ ಬರುವ ನೌಕರರು ಇಪಿಎಫ್ಓ ಅಡಿಯಲ್ಲಿ ಕಡ್ಡಾಯವಾಗಿ ಒಳಪಡಲಿದ್ದು, ಪಿಎಫ್ ಮತ್ತು ಪಿಂಚಣಿ ಎರಡನ್ನು ಆನಂದಿಸಲಿದ್ದಾರೆ. ನಿರ್ಧರಿಸಿದ ಮಿತಿಗಿಂತ ಹೆಚ್ಚು ಹಣವನ್ನು ಗಳಿಸುವವರು ಇದನ್ನು ಬೇಕಾದರೆ ಪಡೆದುಕೊಳ್ಳಬಹುದು. ಅಂದರೆ ಅವರಿಗೆ ಆಯ್ಕೆಗೆ ಅವಕಾಶ ನೀಡಲಾಗಿದೆ.

Latest Videos
Follow Us:
Download App:
  • android
  • ios