ಪಿಎಫ್ ಹೊಂದಿದ್ದೀರಾ : ನಿಮಗಿಲ್ಲಿದೆ ಗುಡ್ ನ್ಯೂಸ್
ಉದ್ಯೋಗಸ್ಥರಿಗೆ ನಿವೃತ್ತಿ ನಿಧಿಯ ಸಂಸ್ಥೆ ಇಪಿಎಫ್‌ಒ ಮತ್ತೊಂದು ಸಿಹಿ ಸುದ್ದಿ ನೀಡಿದೆ. ನೌಕರರು ಉದ್ಯೋಗ ಕಳೆದುಕೊಂಡರೆ, ಉದ್ಯೋಗ ಕಳೆದುಕೊಂಡ ಒಂದು ತಿಂಗಳಲ್ಲಿ ತಮ್ಮ ಪಿಎಫ್ ಖಾತೆಯಿಂದ ಶೇ.75ರಷ್ಟುಹಣ ಹಿಂದಕ್ಕೆ ಪಡೆದು, ಖಾತೆಯನ್ನು ಹಾಗೇ ಉಳಿಸಿಕೊಳ್ಳಬಹುದು ಎಂದು ಇಪಿಎಫ್‌ಒ ನಿರ್ಧರಿಸಿದೆ.
ನವದೆಹಲಿ: ಉದ್ಯೋಗಸ್ಥರಿಗೆ ನಿವೃತ್ತಿ ನಿಧಿಯ ಸಂಸ್ಥೆ ಇಪಿಎಫ್‌ಒ ಮತ್ತೊಂದು ಸಿಹಿ ಸುದ್ದಿ ನೀಡಿದೆ. ನೌಕರರು ಉದ್ಯೋಗ ಕಳೆದುಕೊಂಡರೆ, ಉದ್ಯೋಗ ಕಳೆದುಕೊಂಡ ಒಂದು ತಿಂಗಳಲ್ಲಿ ತಮ್ಮ ಪಿಎಫ್ ಖಾತೆಯಿಂದ ಶೇ.75ರಷ್ಟುಹಣ ಹಿಂದಕ್ಕೆ ಪಡೆದು, ಖಾತೆಯನ್ನು ಹಾಗೇ ಉಳಿಸಿಕೊಳ್ಳಬಹುದು ಎಂದು ಇಪಿಎಫ್‌ಒ ನಿರ್ಧರಿಸಿದೆ.
ಅಲ್ಲದೆ, ಉದ್ಯೋಗ ಕಳೆದುಕೊಂಡ ಎರಡು ತಿಂಗಳ ಬಳಿಕ ಉಳಿದ ಶೇ.25 ಮೊತ್ತವನ್ನೂ ಪಡೆದು, ಖಾತೆಯನ್ನು ಅಂತಿಮವಾಗಿ ಮುಚ್ಚಬಹುದು ಎಂದು ನೌಕರರ ಪಿಂಚಣಿ ನಿಧಿ ಯೋಜನೆಯ ಹೊಸ ನಿಯಮಗಳಲ್ಲಿ ತಿಳಿಸಲಾಗಿದೆ.
ಇಪಿಎಫ್‌ಒ ಟ್ರಸ್ಟೀಗಳ ಸಭೆಯ ಬಳಿಕ, ಮಂಡಳಿಯ ಅಧ್ಯಕ್ಷರೂ ಆದ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಉದ್ಯೋಗ ಕಳೆದುಕೊಂಡ ಎರಡು ತಿಂಗಳ ಬಳಿಕ ಒಂದೇ ಬಾರಿಗೆ ಮೊತ್ತ ಹಿಂಪಡೆಯಬಹುದಾದ ವ್ಯವಸ್ಥೆಯಿತ್ತು.