ಜನವರಿ 1, 2025ರಿಂದ ಭೂನೋಂದಣಿ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣಗೊಂಡಿದೆ. ಆನ್‌ಲೈನ್ ಮೂಲಕ ದಾಖಲೆ ಸಲ್ಲಿಕೆ, ಆಧಾರ್‌ ಜೋಡಣೆ ಕಡ್ಡಾಯ, ನೋಂದಣಿ ವೇಳೆ ವೀಡಿಯೊ ರೆಕಾರ್ಡಿಂಗ್, ಆನ್‌ಲೈನ್ ಶುಲ್ಕ ಪಾವತಿ, ರದ್ದತಿಗೆ 90 ದಿನಗಳ ಮಿತಿ ಹೊಸ ನಿಯಮಗಳ ಪ್ರಮುಖ ಅಂಶಗಳು. ಮುದ್ರಾಂಕ ಶುಲ್ಕ ಆಸ್ತಿ ಮೌಲ್ಯದ ಮೇಲೆ ಶೇ.2 ರಿಂದ 5ರವರೆಗೆ ನಿಗದಿಪಡಿಸಲಾಗಿದೆ. ನಗರ/ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುವರಿ ಶುಲ್ಕವೂ ವಿಧಿಸಲಾಗುತ್ತದೆ.

ಭೂ ನೋಂದಣಿ (Land registration) ಪ್ರಕ್ರಿಯೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಹೊಸ ನಿಯಮ (new rules) ಜನವರಿ 1, 2025 ರಿಂದ ಜಾರಿಗೆ ಬಂದಿದೆ. ಇದ್ರ ಮುಖ್ಯ ಉದ್ದೇಶ, ನೋಂದಾವಣೆಯನ್ನು ಹೆಚ್ಚು ಪಾರದರ್ಶಕ, ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ಮಾಡುವುದಾಗಿದೆ. ಸರ್ಕಾರವು ಭೂಮಿ ಖರೀದಿ (land purchase) ಮತ್ತು ಮಾರಾಟ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಿದ್ದು, ಮತ್ತಷ್ಟು ಸರಳಗೊಳಿಸಿದೆ. ನೋಂದಾವಣೆ ಪ್ರಕ್ರಿಯೆಯಲ್ಲಿ ಅನೇಕ ಬದಲಾವಣೆ ಆಗಿದ್ದು ಅದ್ರಲ್ಲಿ ಡಿಜಿಟಲೀಕರಣ (digitalization) ಅತ್ಯಂತ ಪ್ರಮುಖವಾದದ್ದು. ಡಿಜಿಟಲೀಕರಣದಿಂದಾಗಿ ಭ್ರಷ್ಟಾಚಾರ ಮತ್ತು ವಂಚನೆಗೆ ಬ್ರೇಕ್ ಬೀಳುವ ನಿರೀಕ್ಷೆ ಇದೆ.

ನೋಂದಣಿ ಪ್ರಕ್ರಿಯೆಯಲ್ಲಿ ಯಾವೆಲ್ಲ ಬದಲಾವಣೆಯಾಗಿದೆ? :

ಡಿಜಿಟಲ್ ರಿಜಿಸ್ಟ್ರೇಷನ್ : ಹೊಸ ನಿಯಮಗಳ ಅಡಿಯಲ್ಲಿ, ಭೂ ನೋಂದಣಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಆಗಿದೆ. ಅಗತ್ಯವಿರುವ ಎಲ್ಲಾ ದಾಖಲೆ ನೀಡಲು ನೀವು ನೋಂದಾವಣೆ ಕಚೇರಿಗೆ ಹೋಗ್ಬೇಕಾಗಿಲ್ಲ. ಎಲ್ಲ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ನಿಮಗೆ ನೋಂದಣಿ ನಂತ್ರ ಡಿಜಿಟಲ್ ಸಹಿ ಮತ್ತು ಪ್ರಮಾಣಪತ್ರ ತಕ್ಷಣ ಲಭ್ಯವಾಗಲಿದೆ. ತಕ್ಷಣಕ್ಕೆ ಎಲ್ಲ ಕೆಲಸ ಮುಗಿಯುವುದ್ರಿಂದ ಈ ಪ್ರಕ್ರಿಯೆಯನ್ನು ವೇಗದ ಪ್ರಕ್ರಿಯೆ ಎನ್ನಬಹುದು.

ಕೇಂದ್ರ ಬಜೆಟ್ ಮಂಡನೆ ಬಳಿಕ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ ಸಾಧ್ಯತೆ?

ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ :  ಸರ್ಕಾರವು ಭೂ ನೋಂದಣಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇಲ್ಲಿ ಬಯೋಮೆಟ್ರಿಕ್ ಪರಿಶೀಲನೆ ನಡೆಯುವ ಕಾರಣ ವಂಚನೆಯನ್ನು ಸುಲಭವಾಗಿ ತಡೆಗಟ್ಟಬಹುದು. ಎಲ್ಲಾ ಆಸ್ತಿಗಳ ದಾಖಲೆಗಳನ್ನು ಆಧಾರ್‌ಗೆ ಲಿಂಕ್ ಮಾಡಬೇಕಾಗುತ್ತದೆ. ಹಾಗಾಗಿ ಬೇನಾಮಿ ಆಸ್ತಿಗಳ ಗುರುತು ಸುಲಭವಾಗಿ ಸಿಗಲಿದೆ. ಆಧಾರ್ ಲಿಂಕ್ ಮಾಡುವುದರಿಂದ ಆಸ್ತಿ ವಿವಾದಗಳು ಮತ್ತು ನಕಲಿ ನೋಂದಣಿಗೆ ಬ್ರೇಕ್ ಬೀಳಲಿದೆ. 

ನೋಂದಾವಣೆಯ ವೀಡಿಯೊ ರೆಕಾರ್ಡಿಂಗ್ : ಹೊಸ ನಿಯಮಗಳ ಅಡಿಯಲ್ಲಿ, ನೋಂದಣಿ ಪ್ರಕ್ರಿಯೆಯ ವೀಡಿಯೊ ರೆಕಾರ್ಡಿಂಗ್ ಕಡ್ಡಾಯಗೊಳಿಸಲಾಗಿದೆ. ಯಾವುದೇ ವಿವಾದದ ಸಂದರ್ಭದಲ್ಲಿ ಈ ವೀಡಿಯೊ ರೆಕಾರ್ಡಿಂಗ್ ಸಾಕ್ಷಿಯಾಗಿ ಕಾರ್ಯನಿರ್ವಹಿಸಲಿದೆ. ಅಲ್ಲದೆ, ನೋಂದಣಿ ಸಮಯದಲ್ಲಿ ಯಾವುದೇ ಒತ್ತಡ ಮತ್ತು ಬಲವಂತಕ್ಕೆ ಇಲ್ಲಿ ಆಸ್ಪದ ಇರೋದಿಲ್ಲ.

ಆನ್‌ಲೈನ್ ಪಾವತಿ :  ನೋಂದಣಿ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ ಆಗಿರುವ ಕಾರಣ ಎಲ್ಲಾ ನೋಂದಣಿ ಶುಲ್ಕಗಳು ಮತ್ತು ತೆರಿಗೆಗಳನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕಾಗುತ್ತದೆ. ನಗದು ವಹಿವಾಟಿನ ಬದಲಿಗೆ ಆನ್‌ಲೈನ್ ವಹಿವಾಟು ಪಾರದರ್ಶಕವಾಗಿಸುತ್ತದೆ. ಅಲ್ಲದೆ ವೇಗವಾಗಿ ಮತ್ತು ಸುಲಭವಾಗಿ ಪಾವತಿ ಮಾಡಲು ಇಲ್ಲಿ ಅವಕಾಶ ಸಿಗುತ್ತದೆ,

ನೋಂದಣಿ ರದ್ದುಗೊಳಿಸಲು ಹೊಸ ನಿಯಮಗಳು : ಭೂ ನೋಂದಣಿಯನ್ನು ರದ್ದುಗೊಳಿಸುವ ಪ್ರಕ್ರಿಯೆಯಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ. 
• ನೋಂದಣಿಯನ್ನು ರದ್ದುಗೊಳಿಸಲು ಗರಿಷ್ಠ 90 ದಿನಗಳ ಮಿತಿಯನ್ನು ನಿಗದಿಪಡಿಸಲಾಗಿದೆ.
• ನೋಂದಣಿಯನ್ನು ರದ್ದುಗೊಳಿಸಲು ಸರಿಯಾದ ಕಾರಣವನ್ನು ನೀಡಬೇಕು. ಅಕ್ರಮ ನೋಂದಣಿ, ಕೌಟುಂಬಿಕ ವಿವಾದ ಅಥವಾ ಹಣಕಾಸಿನ ಕಾರಣಗಳನ್ನು ಸರಿಯಾದ ಕಾರಣಗಳೆಂದು ಪರಿಗಣಿಸಲಾಗುತ್ತದೆ.
• ಕೆಲವು ರಾಜ್ಯಗಳಲ್ಲಿ, ನೋಂದಣಿ ರದ್ದತಿ ಪ್ರಕ್ರಿಯೆಯನ್ನು ಆನ್ಲೈನ್ ನಲ್ಲಿ ಶುರು ಮಾಡಿದ್ದು, ಕೆಲಸ ಇನ್ನಷ್ಟು ಸುಲಭವಾಗಿದೆ. 

ಭೂ ನೋಂದಣಿಗೆ ಅಗತ್ಯವಿರುವ ದಾಖಲೆಗಳು : ಭೂ ನೋಂದಣಿಗೆ ಕೆಲವು ದಾಖಲೆಗಳು ಅಗತ್ಯವಾಗುತ್ತವೆ. 
• ಆಸ್ತಿಯ ಕಾನೂನುಬದ್ಧ ಮಾಲೀಕತ್ವ ತೋರಿಸುವ ದಾಖಲೆ
• ಖರೀದಿ ಮತ್ತು ಮಾರಾಟ ಒಪ್ಪಂದ.
• ಆಸ್ತಿ ತೆರಿಗೆ ರಶೀದಿ.
• ಖರೀದಿದಾರ ಮತ್ತು ಮಾರಾಟಗಾರ ಇಬ್ಬರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್‌ನಂತಹ ಗುರುತಿನ ಪುರಾವೆ.

ಬ್ಯಾಂಕಲ್ಲಿ ಸಾಲ ಮಾಡಿ ಸತ್ತರೆ ಏನಾಗುತ್ತೆ?

 ನೋಂದಣಿ ಶುಲ್ಕದಲ್ಲಿ ಬದಲಾವಣೆ : ಸರ್ಕಾರ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕದಲ್ಲೂ ಬದಲಾವಣೆ ಮಾಡಿದೆ. ಸ್ಟ್ಯಾಂಪ್ ಡ್ಯೂಟಿ ದರಗಳು ಹೀಗಿವೆ
1. 20 ಲಕ್ಷ ರೂಪಾಯಿವರೆಗಿನ ಆಸ್ತಿಗಳಿಗೆ 2%
2. 21 ಲಕ್ಷ ರೂಪಾಯಿಯಿಂದ 45 ಲಕ್ಷ ರೂಪಾಯಿವರೆಗಿನ ಆಸ್ತಿಗಳಿಗೆ 3%
3. 45 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಆಸ್ತಿಗೆ 5%

ಹೆಚ್ಚುವರಿ ಶುಲ್ಕ : ನಗರ ಪ್ರದೇಶಗಳಲ್ಲಿ ಸೆಸ್ ಶೇಕಡಾ 10 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರ್ಚಾರ್ಜ್ ಶೇಕಡಾ 2-3 ರಷ್ಟು ಹೆಚ್ಚಾಗಿದೆ.