Asianet Suvarna News Asianet Suvarna News

ಭಯ ಬೇಡ: ಖಾಸಗಿ ಬ್ಯಾಂಕ್‌ನ ಹಣ ಹಿಂಪಡೆಯದಂತೆ ಆರ್‌ಬಿಐ ಸೂಚನೆ

ಖಾಸಗಿ ಬ್ಯಾಂಕೂ ಸೇಫ್‌: ರಾಜ್ಯಗಳಿಗೆ ಆರ್‌ಬಿಐ ಪತ್ರ | ಹಣ ಹಿಂಪಡೆಯದಂತೆ ಸೂಚನೆ | ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಆರ್‌ಬಿಐ ಪತ್ರ 

Private banks safe RBI asks state govt not to move deposits out of Private banks
Author
Bengaluru, First Published Mar 13, 2020, 9:06 AM IST

ನವದೆಹಲಿ (ಮಾ. 13): ಯಸ್‌ ಬ್ಯಾಂಕ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಖಾಸಗಿ ಬ್ಯಾಂಕುಗಳಿಂದ ತಮ್ಮ ಠೇವಣಿ ಹಿಂಪಡೆಯಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿರುವ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ), ಖಾಸಗಿ ಬ್ಯಾಂಕಲ್ಲಿರುವ ಠೇವಣಿಯನ್ನು ಹಿಂದೆ ಪಡೆಯಬೇಡಿ. ಆ ಬ್ಯಾಂಕುಗಳಲ್ಲಿ ಹಣ ಇಡುವ ಕುರಿತು ಇರುವ ಆತಂಕ ತಪ್ಪು ಕಲ್ಪನೆಗಳಿಂದ ಕೂಡಿದೆ ಎಂದು ಸಲಹೆ ಮಾಡಿದೆ.

3000 ಅಂಕ ಕುಸಿದ ಸೆನ್ಸೆಕ್ಸ್‌! ಇತಿಹಾಸದ ಗರಿಷ್ಠ ಕುಸಿತ

ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಆರ್‌ಬಿಐ, ಖಾಸಗಿ ಬ್ಯಾಂಕುಗಳಿಂದ ಠೇವಣಿಯನ್ನು ಹೊರತೆಗೆಯುವುದರಿಂದ ಬ್ಯಾಂಕಿಂಗ್‌ ಹಾಗೂ ಹಣಕಾಸು ವಲಯದ ಸ್ಥಿರತೆ ಮೇಲೆ ಪರಿಣಾಮ ಉಂಟಾಗಬಹುದು ಎಂದು ಹೇಳಿದೆ.

ಯಸ್‌ ಬ್ಯಾಂಕ್‌ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯ ಸರ್ಕಾರಗಳು ಖಾಸಗಿ ಬ್ಯಾಂಕುಗಳಲ್ಲಿ ಹಣ ಇಡದಂತೆ ಇಲಾಖೆಗಳಿಗೆ ಸೂಚನೆ ನೀಡಿದ್ದವು. ಖಾಸಗಿ ಬ್ಯಾಂಕಿನಲ್ಲಿರುವ ಹಣವನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಗೆ ವರ್ಗಾಯಿಸುವಂತೆ ಸಲಹೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಆರ್‌ಬಿಐ ಬರೆದಿರುವ ಪತ್ರ ಮಹತ್ವ ಪಡೆದುಕೊಂಡಿದೆ.

Follow Us:
Download App:
  • android
  • ios