ತೆರಿಗೆ ಉಳಿತಾಯದ ಹೂಡಿಕೆಗಳಲ್ಲಿ ಪಿಪಿಎಫ್ ಕೂಡ ಒಂದು. ಪಿಪಿಎಫ್ ನಲ್ಲಿ ಕ್ರಮಬದ್ಧವಾಗಿ ಹೂಡಿಕೆ ಮಾಡಿದ್ರೆ ಉತ್ತಮ ರಿಟರ್ನ್ ಗಳಿಸಬಹುದು. ಹಾಗಾದ್ರೆ1 ಕೋಟಿ ರೂ. ರಿಟರ್ನ್ ಗಳಿಸಲು ಪಿಪಿಎಫ್ ನಲ್ಲಿ ತಿಂಗಳಿಗೆ ಎಷ್ಟು ಹೂಡಿಕೆ ಮಾಡ್ಬೇಕು? ಇಲ್ಲಿದೆ ಮಾಹಿತಿ.
Business Desk: ಭಾರತದಲ್ಲಿ ವೇತನ (Salary) ತೆರಪಡೆಯೋ ವರ್ಗಕ್ಕೆ ತೆರಿಗೆ ಭಾರ ತಪ್ಪಿದ್ದಲ್ಲ. ಹೀಗಿರೋವಾಗ ತೆರಿಗೆ (Tax) ಉಳಿಸುವ ಆಯ್ಕೆಗಳ ಬಗ್ಗೆ ಯೋಚಿಸೋದು ಅನಿವಾರ್ಯ. ತೆರಿಗೆ ಉಳಿತಾಯಕ್ಕೆ ಇರುವ ಬೆರಳೆಣಿಕೆ ಆಯ್ಕೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF) ಕೂಡ ಒಂದು. ಪಿಪಿಎಫ್ ನಲ್ಲಿ (PPF) ಹೂಡಿಕೆ (Investment) ಮಾಡಿ 1 ಕೋಟಿ ರೂ. ರಿಟರ್ನ್ (Return) ಗಳಿಸಲು ಕೂಡ ಸಾಧ್ಯವಿದೆ. ಅದು ಹೇಗೆ? 1 ಕೋಟಿ ರಿಟರ್ನ್ಸ್ ಪಡೆಯಲು ತಿಂಗಳಿಗೆ ಎಷ್ಟು ಹೂಡಿಕೆ (Invest) ಮಾಡಬೇಕು? ಇಲ್ಲಿದೆ ಮಾಹಿತಿ.
ಭಾರತದಲ್ಲಿ PPF ಯೋಜನೆಯನ್ನು 1968ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ರಾಷ್ಟ್ರೀಯ ಉಳಿತಾಯ ಸಂಸ್ಥೆ (National Savings Organization) ಈ ಯೋಜನೆ ಘೋಷಿಸಿತು. ಇದರ ಮುಖ್ಯ ಉದ್ದೇಶ ಸಣ್ಣ ಉಳಿತಾಯವನ್ನು (Small Saving) ಲಾಭದಾಯಕವಾಗಿ ಪರಿವರ್ತಿಸುವುದಾಗಿದೆ. ಪಿಪಿಎಫ್ (PPF) ಹೂಡಿಕೆಯಲ್ಲಿ ಅಪಾಯ ಕಡಿಮೆ. ಏಕೆಂದ್ರೆ ಇದು ಕೇಂದ್ರ ಸರ್ಕಾರ ಬೆಂಬಲಿತ ಉಳಿತಾಯ ಯೋಜನೆಯಾಗಿದೆ. ಇನ್ನು ತೆರಿಗೆ ಉಳಿತಾಯಕ್ಕೆ ಅವಕಾಶವಿರುವ ಕೆಲವೇ ಯೋಜನೆಗಳಲ್ಲಿ ಇದೂ ಒಂದು. ಪಿಪಿಎಫ್ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ (Income Tax Act) ಅಡಿಯಲ್ಲಿ ತೆರಿಗೆ ವಿನಾಯ್ತಿ ಇದೆ. ಹೀಗಾಗಿ ವೇತನ (Salary) ಪಡೆಯೋ ವರ್ಗಕ್ಕೆ ಹೂಡಿಕೆಗೆ (Investment) ಇದು ಮೆಚ್ಚಿನ ಆಯ್ಕೆ.
Business Ideas : 8ನೇ ತರಗತಿ ಪಾಸಾದ್ರೆ ಸಾಕು, ಲಕ್ಷಾಂತರ ರೂ. ಗಳಿಸ್ಬಹುದು
ಬಡ್ಡಿದರ ಹಾಗೂ ಮೆಚ್ಯುರಿಟಿ ಅವಧಿ
ಪ್ರಸ್ತುತ ಪಿಪಿಎಫ್ ಹೂಡಿಕೆ ಮೇಲೆ ವಾರ್ಷಿಕ ಶೇ.7.1 ಬಡ್ಡಿದರ (Interest rate) ಇದೆ. ಇನ್ನು ಬಡ್ಡಿಯನ್ನು ತಿಂಗಳಿಗೊಮ್ಮೆ ಲೆಕ್ಕ ಹಾಕಲಾಗುತ್ತದೆ. ಮಾರ್ಗಸೂಚಿಗಳ ಪ್ರಕಾರ ಹೂಡಿಕೆದಾರರು ಪಿಪಿಎಫ್ ನಲ್ಲಿ ನಿರಂತರ ಗರಿಷ್ಠ 15 ವರ್ಷಗಳ ಕಾಲ ಹಣವನ್ನು ಹೂಡಿಕೆ (Invest) ಮಾಡಬಹುದು. ಒಂದು ವೇಳೆ 15 ವರ್ಷಗಳು ಪೂರ್ಣಗೊಂಡ ಬಳಿಕವೂ ಹಣದ ಅಗತ್ಯವಿಲ್ಲದಿದ್ದರೆ ಪಿಪಿಎಫ್ ಖಾತೆಯ ಅವಧಿಯನ್ನು ಎಷ್ಟು ವರ್ಷ ಬೇಕೋ ಅಷ್ಟು ವರ್ಷಗಳ ಕಾಲ ವಿಸ್ತರಿಸಬಹುದು. ಪಿಪಿಎಫ್ ಖಾತೆ ವಿಸ್ತರಣೆ ಅರ್ಜಿ ಸಲ್ಲಿಕೆ ಮಾಡುವ ಮೂಲಕ 5 ವರ್ಷಗಳ ಕಾಲ ಮುಂದೂಡುತ್ತಲೇ ಹೋಗಬಹುದು.
1 ಕೋಟಿ ರೂ. ರಿಟರ್ನ್ಸ್ ಗಳಿಸೋದು ಹೇಗೆ?
ಉತ್ತಮ ಬಡ್ಡಿದರ ಹಾಗೂ ರಿಟರ್ನ್ಸ್ (Returns), ಜನಪ್ರಿಯತೆ, ಕಡಿಮೆ ಅಪಾಯ ಹಾಗೂ ತೆರಿಗೆಮುಕ್ತ ಗುಣಲಕ್ಷಣಗಳ ಕಾರಣಕ್ಕೆ ಪಿಪಿಎಫ್ ಹೂಡಿಕೆದಾರರಿಗೆ 1 ಕೋಟಿ ರೂ. ತನಕ ರಿಟರ್ನ್ಸ್ ಗಳಿಸಲು ನೆರವು ನೀಡುತ್ತದೆ. ಆದರೆ, ಸಮರ್ಪಕವಾಗಿ ಹೂಡಿಕೆ ಮಾಡಬೇಕು ಅಷ್ಟೆ. ಒಂದು ವೇಳೆ ನೀವು ಪಿಪಿಎಫ್ ಖಾತೆಯಲ್ಲಿ ದಿನಕ್ಕೆ 417ರೂ. ಹೂಡಿಕೆ ಮಾಡಿದ್ರೆ, ಮಾಸಿಕ ಹೂಡಿಕೆ ಮೊತ್ತ ಸುಮಾರು 12,500ರೂ. ಆಗಿರುತ್ತದೆ. ಅದರರ್ಥ ವರ್ಷಕ್ಕೆ ನೀವು ನಿಮ್ಮ ಪಿಪಿಎಫ್ ಖಾತೆಯಲ್ಲಿ 1,50,000ರೂ.ಗಿಂತ ತುಸು ಹೆಚ್ಚು ಹೂಡಿಕೆ ಮಾಡುತ್ತೀರಿ. ಇದು ಗರಿಷ್ಠ ಮಿತಿ ಕೂಡ. 15 ವರ್ಷಗಳಲ್ಲಿ ಸಂಗ್ರಹಿಸಿದ ಒಟ್ಟು ಮೊತ್ತ 40.58 ಲಕ್ಷ ರೂ. ಆ ಬಳಿಕ ನೀವು ಈ ಅವಧಿಯನ್ನು 5 ವರ್ಷಕ್ಕೊಮ್ಮೆ ಎನ್ನುವಂತೆ ಎರಡು ಬಾರಿ ವಿಸ್ತರಿಸಬೇಕು.
ಒಂದು ವೇಳೆ ನೀವು 25 ವರ್ಷಗಳಿಂದ 50 ವರ್ಷಗಳ ತನಕ ಅಂದ್ರೆ 25 ವರ್ಷಗಳವರೆಗೆ ವಿಸ್ತರಿಸುತ್ತ ಹೋದ್ರೆ ಮೆಚ್ಯುರಿಟಿ (Maturity) ಅವಧಿ ಮುಗಿಯುವ ಹೊತ್ತಿಗೆ 1.03 ಕೋಟಿ ರೂ. ಗಳಿಸುತ್ತೀರಿ. ಈ ಮೊತ್ತ ಸಂಪೂರ್ಣವಾಗಿ ತೆರಿಗೆಮುಕ್ತ. ಇನ್ನು ಒಟ್ಟು ಬಡ್ಡಿ (Interest) ಗಳಿಕೆ ಸುಮಾರು 66 ಲಕ್ಷ ರೂ. ಆಗಿರುತ್ತದೆ. 25 ವರ್ಷಗಳಲ್ಲಿ ನೀವು ಠೇವಣಿಯಿಟ್ಟ ಒಟ್ಟು ಮೊತ್ತ ಸುಮಾರು 37ಲಕ್ಷ ರೂ. ಆಗಿರುತ್ತದೆ.
Property Tips : ಮನೆ ಗಿಫ್ಟ್ ನೀಡೋ ಪ್ಲಾನ್ ಇದ್ದರೆ ಈ ಬಗ್ಗೆ ಗೊತ್ತು ಮಾಡಿಕೊಳ್ಳಿ
ನಿಮ್ಮ ಹೂಡಿಕೆ (Investment) ಮೇಲೆ ಉತ್ತಮ ರಿಟರ್ನ್ಸ್ ಗಳಿಸಲು ಪ್ರತಿ ತಿಂಗಳು 1ರಿಂದ 5 ದಿನಾಂಕದ ನಡುವೆ ಹಣವನ್ನು ಠೇವಣಿಯಿಡಬೇಕು. ಏಕೆಂದ್ರೆ ಬಡ್ಡಿಯನ್ನು ಮಾಸಿಕವಾಗಿ ಲೆಕ್ಕ ಹಾಕುವ ಕಾರಣ ಉತ್ತಮ ರಿಟರ್ನ್ಸ್ (Returns) ಸಿಗುವ ಸಾಧ್ಯತೆಯಿರುತ್ತದೆ.
