ಅಂಚೆ ಕಚೇರಿ ಈ ಯೋಜನೆಯಲ್ಲಿ 10 ಲಕ್ಷ ರೂ. ಹೂಡಿಕೆ ಮಾಡಿ, ದುಪ್ಪಟ್ಟು ಹಣ ಗಳಿಸಿ!

ಅಂಚೆ ಕಚೇರಿಯ ಅನೇಕ ಜನಪ್ರಿಯ ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರ ಕೂಡ ಒಂದು. ಇದರಲ್ಲಿ 10 ಲಕ್ಷ ರೂ. ಹೂಡಿಕೆ ಮಾಡಿದರೆ ಈಗಿನ ಬಡ್ಡಿದರದ ಆಧಾರದಲ್ಲಿ ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಹಣ ಗಳಿಸಬಹುದು. ಹಾಗಾದ್ರೆ ಈ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು? ಬಡ್ಡಿದರ ಎಷ್ಟಿದೆ? ಇಲ್ಲಿದೆ ಮಾಹಿತಿ.

Post Office Scheme Invest Rs 10 lakh get it doubled as interest rate hiked anu

Business Desk:ಹೂಡಿಕೆಗೆ ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಆಯ್ಕೆಗಳಿವೆ. ಆದರೆ, ಬಹುತೇಕ ಹೂಡಿಕೆದಾರರು ಇಂದಿಗೂ ಬ್ಯಾಂಕ್, ಅಂಚೆ ಕಚೇರಿ ಅಥವಾ ಎಲ್ ಐಸಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಅದರಲ್ಲೂ ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುತ್ತವೆ. ಅವುಗಳಲ್ಲಿ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಕೂಡ ಒಂದು. ಇದರಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ಶೀಘ್ರದಲ್ಲೇ ದುಪ್ಪಟ್ಟು ಆಗುತ್ತದೆ. ಅಂಚೆ ಇಲಾಖೆ 1988ರಲ್ಲಿ ಈ ಯೋಜನೆಯನ್ನು ಪರಿಚಯಿಸಿತು. ಕಿಸಾನ್ ವಿಕಾಸ್ ಪತ್ರದ ಪ್ರಾರಂಭಿಕ ಗುರಿ ರೈತರಿಗೆ ಹಣ ಉಳಿತಾಯ ಮಾಡಲು ಉತ್ತೇಜಿಸುವುದು ಆಗಿತ್ತು. ಆದರೆ, ನಂತರದ ದಿನಗಳಲ್ಲಿ ಇತರ ಜನರಿಗೆ ಕೂಡ ಇದನ್ನು ಖರೀದಿಸಲು ಅವಕಾಶ ನೀಡಲಾಯಿತು. ಈ ಯೋಜನೆಯಲ್ಲಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು. ಕನಿಷ್ಠ ಹೂಡಿಕೆ ಮೊತ್ತ 1,000ರೂ. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಇನ್ನು ಈ ಯೋಜನೆ ಮೆಚ್ಯುರಿಟಿ ಅವಧಿ  10 ವರ್ಷ 4 ತಿಂಗಳು. ಮೆಚ್ಯುರಿಟಿ ಅವಧಿಯಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ ಇಮ್ಮಡಿಯಾಗುತ್ತದೆ.

ಬಡ್ಡಿ ಎಷ್ಟು?
ಕಿಸಾನ್ ವಿಕಾಸ್ ಪತ್ರ ಯೋಜನೆಯ ಬಡ್ಡಿದರವನ್ನು ಕೇಂದ್ರ ಸರ್ಕಾರ 2023 ಎಪ್ರಿಲ್ 1ರಂದು ಶೇ.7.2ರಿಂದ ಶೇ.7.4ಕ್ಕೆ ಏರಿಕೆ ಮಾಡಿತ್ತು. ಹೀಗಾಗಿ ಈ ಯೋಜನೆಯಲ್ಲಿ ಒಮ್ಮೆಗೆ ಹೂಡಿಕೆ ಮಾಡಿದ ಹಣ ಹಿಂದಿಗಿಂತ ಈಗ ಇನ್ನಷ್ಟು ಬೇಗ ದುಪ್ಟಟ್ಟು ಆಗಲಿದೆ. ಈ ಹಿಂದೆ ಹಣ ದುಪ್ಪಟ್ಟು ಆಗಲು 120 ತಿಂಗಳು ಬೇಕಿತ್ತು. ಆದರೆ, ಇನ್ನು ಮುಂದೆ ಕೇವಲ 115 ತಿಂಗಳಲ್ಲಿ ದುಪ್ಪಟ್ಟು ಆಗಲಿದೆ. 

Post Office RD:ಅಧಿಕ ರಿಟರ್ನ್ ಗಳಿಸಲು ಈ ಖಾತೆಯಲ್ಲಿ ತಿಂಗಳಿಗೆ ಎಷ್ಟು ಹೂಡಿಕೆ ಮಾಡ್ಬೇಕು?

ಯಾರು ಹೂಡಿಕೆ ಮಾಡಬಹುದು?
ಕನಿಷ್ಠ 18 ವರ್ಷ ವಯಸ್ಸಿನ ಭಾರತದ ಯಾವುದೇ ನಾಗರಿಕ ಸಮೀಪದ ಅಂಚೆ ಕಚೇರಿಯಲ್ಲಿ ಕಿಸಾನ್ ವಿಕಾಸ್ ಪತ್ರವನ್ನು ಖರೀದಿಸಬಹುದು. ಯಾವುದೇ ವಯಸ್ಕ ವ್ಯಕ್ತಿ ಕೆವಿಪಿಯಲ್ಲಿ ತನ್ನ ಹೆಸರಿನಲ್ಲಿ ಅಥವಾ ಅಪ್ರಾಪ್ತರ ಪರವಾಗಿ ಹೂಡಿಕೆ ಮಾಡಬಹುದು. ಮೂವರು ವಯಸ್ಕರು ಜಂಟಿಯಾಗಿ ಕೂಡ ಕೆವಿಪಿಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಸಮೀಪದ ಅಂಚೆ ಕಚೇರಿ ಶಾಖೆಗೆ ಭೇಟಿ ನೀಡಿ ಅಥವಾ ಆನ್ ಲೈನ್ ಮೂಲಕ ಈ ಯೋಜನೆಗೆ ಸೇರ್ಪಡೆಗೊಳ್ಳಬಹುದು. ಆನ್ ಲೈನ್ ನಲ್ಲಿ ಸೇರ್ಪಡೆಗೊಳ್ಳಲು ಅಂಚೆ ಇಲಾಖೆ ವೆಬ್ ಸೈಟ್ ಗೆ ಭೇಟಿ ನೀಡಬೇಕು ಅಥವಾ  ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಕೂಡ ಹೂಡಿಕೆ ಮಾಡಲು ಅವಕಾಶವಿದೆ. 'ಕಿಸಾನ್ ವಿಕಾಸ್ ಪತ್ರ (ಕೆವಿಪಿ)  ಆಯ್ಕೆ ಮಾಡಿ ಹಾಗೂ ಕೆವಿಪಿ ಅರ್ಜಿ ಎ ಡೌನ್ ಲೋಡ್ ಮಾಡಬೇಕು. ಇದನ್ನು ಭರ್ತಿ ಮಾಡಿದ ಬಳಿಕ ಅಗತ್ಯ ಕೆವೈಸಿ ದಾಖಲೆಗಳ ಜೊತೆಗೆ ಅಂಚೆ ಕಚೇರಿಗೆ ಸಲ್ಲಿಕೆ ಮಾಡಬೇಕು. 

10ಲಕ್ಷ ರೂ. ಹೂಡಿಕೆ ಮಾಡಿದ್ರೆ ಹಣ ದುಪ್ಪಟ್ಟು
ಕಿಸಾನ್ ವಿಕಾಸ್ ಪತ್ರದಲ್ಲಿ ಈಗಿನ ಬಡ್ಡಿದರದ ಆಧಾರದಲ್ಲಿ ಲೆಕ್ಕ ಹಾಕಿದರೆ ನೀವು  10 ಲಕ್ಷ ರೂ. ಹೂಡಿಕೆ ಮಾಡಿದರೆ 115 ತಿಂಗಳ ಬಳಿಕ ನಿಮಗೆ 20 ಲಕ್ಷ ರೂ. ಸಿಗಲಿದೆ.

SBI Vs Post Office: ಯಾವ ಎಫ್ ಡಿಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ರಿಟರ್ನ್ಸ್ ಸಿಗುತ್ತೆ?

ವರ್ಗಾವಣೆ ಸಾಧ್ಯ
ಕಿಸಾನ್ ವಿಕಾಸ್ ಪತ್ರದ ((KVP)ಪ್ರಮಾಣಪತ್ರಗಳನ್ನು ವ್ಯಕ್ತಿಯಿಂದ ವ್ಯಕ್ತಿಗೆ ವರ್ಗಾಯಿಸಲು ಅವಕಾಶವಿದೆ. ಹಾಗೆಯೇ ಭಾರತದಲ್ಲಿ ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿ ಶಾಖೆಗೆ ವರ್ಗಾಯಿಸಲು ಕೂಡ ಅವಕಾಶವಿದೆ.

ತೆರಿಗೆ ಪ್ರಯೋಜನವಿಲ್ಲ
ಕಿಸಾನ್ ವಿಕಾಸ್ ಪತ್ರದಲ್ಲಿ ((KVP)) ಹೂಡಿಕೆ (Invest) ಮಾಡಿದ್ರೆ ಯಾವುದೇ ಆದಾಯ ತೆರಿಗೆ (Income tax) ಪ್ರಯೋಜನ ಸಿಗೋದಿಲ್ಲ. ಆದರೂ ವಿತ್ ಡ್ರಾ (withdraw) ಸಮಯದಲ್ಲಿ ಠೇವಣಿ ಟಿಡಿಎಸ್ ನಿಂದ (TDS) ಮುಕ್ತವಾಗಿರುತ್ತದೆ. ಈ ಯೋಜನೆ 124 ತಿಂಗಳುಗಳ ಮೆಚ್ಯುರಿಟಿ (Maturity) ಅವಧಿ ಹೊಂದಿದ್ದರೂ, ಪ್ರಮಾಣಪತ್ರ (Certificate) ಪಡೆದ ಎರಡೂವರೆ ವರ್ಷಗಳು (30 ತಿಂಗಳುಗಳ) ಬಳಿಕ ನಗದೀಕರಣಗೊಳಿಸಲು ಅವಕಾಶವಿದೆ. 

Latest Videos
Follow Us:
Download App:
  • android
  • ios