Asianet Suvarna News Asianet Suvarna News

ಅಂಚೆ ಕಚೇರಿ ಈ ಯೋಜನೆಯಲ್ಲಿ ತಿಂಗಳಿಗೆ 10 ಸಾವಿರ ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 7ಲಕ್ಷ ರೂ. ರಿಟರ್ನ್!

ಅಂಚೆ ಕಚೇರಿ ರಿಕರಿಂಗ್ ಡೆಫಾಸಿಟ್ (ಆರ್ ಡಿ) ಯೋಜನೆಯಲ್ಲಿ ತಿಂಗಳಿಗೆ 10 ಸಾವಿರ ರೂ. ಹೂಡಿಕೆ ಮಾಡಿದ್ರೆ ಐದು ವರ್ಷಗಳ ಬಳಿಕ 7ಲಕ್ಷ ರೂ. ರಿಟರ್ನ್ ಗಳಿಸಬಹುದು. 

Post Office Scheme Invest 10000 rupees in the post office scheme and get 7 lakh rupees know the details anu
Author
First Published Jul 22, 2023, 12:19 PM IST

Business Desk:ಉಳಿತಾಯದ ವಿಷಯ ಬಂದಾಗ ಭಾರತೀಯರಿಗೆ ಮೊದಲು ನೆನಪಾಗುವುದೇ ಅಂಚೆ ಕಚೇರಿ. ಇದಕ್ಕೆ ಕಾರಣ ಅಂಚೆ ಕಚೇರಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾದ ಕಾರಣ ಇಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ. ಇನ್ನು ಈ ಉಳಿತಾಯ ಯೋಜನೆಗಳು ಉತ್ತಮ ರಿಟರ್ನ್ ಕೂಡ ನೀಡುತ್ತವೆ. ಹೀಗಾಗಿ ಹೂಡಿಕೆ ಅಥವಾ ಉಳಿತಾಯದ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಬಯಸದವರು ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ದೇಶದ ಕೋಟ್ಯಂತರ ಜನರು ಅಂಚೆ ಕಚೇರಿ ಉಳಿತಾಯ ಯೋಜನೆಗಳನ್ನು ನೆಚ್ಚಿಕೊಂಡಿದ್ದಾರೆ. ಈ ತ್ರೈಮಾಸಿಕದಲ್ಲಿ ಸರ್ಕಾರ ಅಂಚೆ ಕಚೇರಿಯ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಹೆಚ್ಚಳ ಮಾಡಿದೆ. ಇದರಿಂದ ಈ ಉಳಿತಾಯ ಯೋಜನೆಗಳು ಹೂಡಿಕೆದಾರರನ್ನು ಸೆಳೆಯುತ್ತಿವೆ. ಅದರಲ್ಲೂ ಶೇ.6.5 ಬಡ್ಡಿದರ ಹೊಂದಿರುವ ಅಂಚೆ ಕಚೇರಿಯ ರಿಕರಿಂಗ್ ಡೆಫಾಸಿಟ್ (ಆರ್ ಡಿ) ದೊಡ್ಡ ಪ್ರಮಾಣದಲ್ಲಿ ಹೂಡಿಕೆದಾರರನ್ನು ಸೆಳೆಯುತ್ತಿದೆ. ಹೀಗಿರುವಾಗ ಆರ್ ಡಿ ಯೋಜನೆಯಲ್ಲಿ ಪ್ರತಿ ತಿಂಗಳು 10 ಸಾವಿರ ರೂ. ಹೂಡಿಕೆ ಮಾಡುವ ಮೂಲಕ ಐದು ವರ್ಷಗಳ ಬಳಿಕ 7,10,000 ರೂ. ರಿಟರ್ನ್ಸ್ ಪಡೆಯಬಹುದು. ಅದು ಹೇಗೆ? ನೋಡೋಣ ಬನ್ನಿ.

ಎಷ್ಟು ಹೂಡಿಕೆ ಮಾಡಬಹುದು?
ಅಂಚೆ ಕಚೇರಿಯ ಆರ್ ಡಿ ಯೋಜನೆಯನ್ನು ಕನಿಷ್ಠ 100 ರೂ. ಹೂಡಿಕೆಯಿಂದ ಪ್ರಾರಂಭಿಸಬಹುದು. ಹಾಗೆಯೇ ಗರಿಷ್ಠ ಇಷ್ಟೇ ಹೂಡಿಕೆ ಮಾಡಬೇಕೆಂಬ ನಿರ್ಬಂಧವಿಲ್ಲ. ಈ ಖಾತೆಯ ಅವಧಿ ಐದು ವರ್ಷಗಳು. ಹಾಗೆಯೇ ಪ್ರಸಕ್ತ ತ್ರೈಮಾಸಿಕದಲ್ಲಿ ಸರ್ಕಾರ ಆರ್ ಡಿ ಖಾತೆಗೆ ಶೇ.6.5 ಬಡ್ಡಿದರ ನಿಗದಿಪಡಿಸಿದೆ.

Post Office Schemes: ಪ್ರತಿದಿನ 133 ರೂಪಾಯಿ ಹೂಡಿಕೆ ಮಾಡಿ ಲಕ್ಷಾಧಿಪತಿಗಳಾಗಿ

ಯಾರು ಈ ಖಾತೆ ತೆರೆಯಬಹುದು?
ಯಾವುದೇ ಭಾರತೀಯ ಒಂದು ಪ್ರತ್ಯೇಕ ಅಥವಾ ಜಂಟಿ ಆರ್ ಡಿ ಖಾತೆ ತೆರೆಯಬಹುದು. ಅಲ್ಲದೆ, ಅಪ್ರಾಪ್ತರ ಹೆಸರಿನಲ್ಲಿ ಅವರ ಪೋಷಕರು ಖಾತೆ ತೆರೆಯಲು ಅವಕಾಶವಿದೆ. ಹಾಗೆಯೇ 10 ವರ್ಷ ಮೇಲ್ಪಟ್ಟ ಅಪ್ರಾಪ್ತರಿಗೆ ಅವರ ಹೆಸರಿನಲ್ಲೇ ಆರ್ ಡಿ ಖಾತೆ ತೆರೆಯಲು ಅವಕಾಶವಿದೆ. 

10 ಸಾವಿರ ಹೂಡಿಕೆ ಮಾಡಿ 7ಲಕ್ಷ ರೂ. ಗಳಿಸೋದು ಹೇಗೆ?
ಒಂದು ವೇಳೆ ಒಬ್ಬ ಹೂಡಿಕೆದಾರ ಈ ಯೋಜನೆಯಲ್ಲಿ ಪ್ರತಿ ತಿಂಗಳು 10 ಸಾವಿರ ರೂ. ಹೂಡಿಕೆ ಮಾಡಿದರೆ ಐದು ವರ್ಷಗಳ ಬಳಿಕ ಆತ 7,10,000ರೂ. ಗಳಿಸುತ್ತಾನೆ. ಇನ್ನು ಆತ ಐದು ವರ್ಷಗಳಲ್ಲಿ 6 ಲಕ್ಷ ರೂ. ಹೂಡಿಕೆ ಮಾಡಿರುತ್ತಾನೆ ಹಾಗೂ 1ಲಕ್ಷ 10 ಸಾವಿರ ರೂ. ಅನ್ನು ಬಡ್ಡಿ ರೂಪದಲ್ಲಿ ಪಡೆದಿರುತ್ತಾನೆ. ಇನ್ನು ನೀವು ಅಂಚೆ ಕಚೇರಿಯಲ್ಲಿ ತಿಂಗಳ 1ರಿಂದ15ನೇ ದಿನಾಂಕದ ನಡುವೆ ಖಾತೆ ತೆರೆದಿದ್ದರೆ ಪ್ರತಿ ತಿಂಗಳ 15ರಂದು ಹೂಡಿಕೆ ಮಾಡಬೇಕು. ಇನ್ನು ನೀವು 15ನೇ ದಿನಾಂಕದಂದು ಖಾತೆ ತೆರೆದರೆ ಆ ತಿಂಗಳ ಕೊನೆಯಲ್ಲಿ ಹಣ ಹೂಡಿಕೆ ಮಾಡಬೇಕು. 

ಅಂಚೆ ಕಚೇರಿ ಯಾವೆಲ್ಲ ಯೋಜನೆಗಳಿಗೆ ಟಿಡಿಎಸ್ ಅನ್ವಯಿಸುತ್ತದೆ? ತೆರಿಗೆ ವಿನಾಯ್ತಿಯಾವುದಕ್ಕಿದೆ?

ತಿಂಗಳ ಕಂತು ಮಿಸ್ ಆದ್ರೆ?
ಅಂಚೆ ಕಚೇರಿಯಲ್ಲಿ ಆರ್ ಡಿ ಖಾತೆ ತೆರೆದ ಮೇಲೆ ನೀವು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಹೂಡಿಕೆ ಮಾಡಬೇಕು. ಒಂದು ವೇಳೆ ನೀವು ಒಂದು ತಿಂಗಳ ಪಾವತಿಯನ್ನು ಮಿಸ್ ಮಾಡಿದ್ರೆ ಆಗ ಪ್ರತಿ ತಿಂಗಳು ಶೇ.1ರಷ್ಟು ಹೆಚ್ಚುವರಿ ಮೊತ್ತವನ್ನು ದಂಡವಾಗಿ ಪಾವತಿಸಬೇಕು. ಒಂದು ವೇಳೆ ನೀವು ನಿರಂತರ 4 ತಿಂಗಳ ಪಾವತಿ ಕಂತುಗಳನ್ನು ಮಿಸ್ ಮಾಡಿದ್ರೆ ನಿಮ್ಮ ಆರ್ ಡಿ ಖಾತೆ ಮುಚ್ಚಲ್ಪಡುತ್ತದೆ. ಇಲ್ಲೂ ಕೂಡ ಖಾತೆಯನ್ನು ಮತ್ತೆ ಕ್ರಿಯಾಶೀಲಗೊಳಿಸಲು 2 ತಿಂಗಳ ಕಾಲಾವಕಾಶವಿರುತ್ತದೆ. ಆದ್ರೆ ಈ ಸಮಯಾವಕಾಶದಲ್ಲೂ ಸುಮ್ಮನಿದ್ರೆ ಆರ್ ಡಿ ಖಾತೆ ಕಾಯಂ ಆಗಿ ಮುಚ್ಚಲ್ಪಡುತ್ತದೆ. ಈ ಯೋಜನೆಯ ಇನ್ನೊಂದು ವಿಶೇಷ ಏನಂದ್ರೆ ಖಾತೆ ತೆರೆದ ಒಂದು ವರ್ಷದ ಬಳಿಕ ಅದರಲ್ಲಿರೋ ಒಟ್ಟು ಹಣದ ಶೇ.50ರಷ್ಟನ್ನು ವಿತ್ ಡ್ರಾ ಮಾಡಲು ಖಾತೆದಾರನಿಗೆ ಅವಕಾಶ ನೀಡಲಾಗಿದೆ. 
 

Follow Us:
Download App:
  • android
  • ios