ರಷ್ಯಾಗೆ 7 ಸಾವಿರ ಕೋಟಿ ಸಾಲ ಘೋಷಿಸಿದ ಪ್ರಧಾನಿ| 5ನೇ ಪೂರ್ವ ಆರ್ಥಿಕ ವೇದಿಕೆ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಮೋದಿ| ರಷ್ಯಾದ ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಯುಎಸ್ ಡಾಲರ್ ಸಾಲ| ಆ್ಯಕ್ಟ್ ಫಾರ್ ಈಸ್ಟ್ ನೀತಿ ಬಿಡುಗಡೆಗೊಳಿಸಿದ ಪ್ರಧಾನಿ| ಆರ್ಥಿಕ ರಾಜತಾಂತ್ರಿಕತೆಗೆ ಹೊಸ ಆಯಾಮ ನೀಡಿದ ಮೋದಿ| 

ವ್ಲಾದಿವೋಸ್ಟೋಕ್(ಸೆ.05): ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಅಲ್ಲಿನ ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಯುಎಸ್ ಡಾಲರ್ (ಸುಮಾರು 7 ಸಾವಿರ ಕೋಟಿ ರೂ.) ಸಾಲ ನೀಡುವುದಾಗಿ ಘೋಷಿಸಿದ್ದಾರೆ.

Scroll to load tweet…

5ನೇ ಪೂರ್ವ ಆರ್ಥಿಕ ವೇದಿಕೆ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಷ್ಯಾದ ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಯುಎಸ್ ಡಾಲರ್ ಸಾಲ ನೀಡುವುದಾಗಿ ಘೋಷಿಸಿದರು.

Scroll to load tweet…

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಫಾರ್ ಈಸ್ಟ್ ಪ್ರದೇಶದೊಂದಿಗೆ ಭಾರತದ ಸಹಭಾಗಿತ್ವ ವೃದ್ಧಿಗೆ ಸಂಬಂಧಿಸಿದ ಆ್ಯಕ್ಟ್ ಫಾರ್ ಈಸ್ಟ್ ನೀತಿಗಳನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದರು.

Scroll to load tweet…

ಭಾರತ-ರಷ್ಯಾ ಸ್ನೇಹ ಕೇವಲ ಸರ್ಕಾರದ ಸಂವಹನ, ರಾಜಧಾನಿಗಳಿಗೆ ಸೀಮಿತವಾಗದೇ, ಜನತೆ ಹಾಗೂ ಉದ್ಯಮಕ್ಕೂ ವಿಸ್ತರಿಸಿದೆ ಎಂದು ಪ್ರಧಾನಿ ಮೋದಿ ಈ ವೇಳೆ ಅಭಿಪ್ರಾಯಪಟ್ಟರು.

Scroll to load tweet…

ರಷ್ಯಾದ ಫಾರ್ ಈಸ್ಟ್ ಪ್ರದೇಶಕ್ಕೆ ಭೇಟಿ ನೀಡಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದು, ಇದು ನಮ್ಮ ಆರ್ಥಿಕ ರಾಜತಾಂತ್ರಿಕತೆಗೆ ಹೊಸ ಆಯಾಮ ನೀಡಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.