Asianet Suvarna News Asianet Suvarna News

ಮೋದಿ ಕಂಡ ‘ಮೇಕ್ ಇನ್ ಇಂಡಿಯಾ’ ಕನಸು ಸಾಕಾರ: ಸ್ವಾವಲಂಬಿ ಭಾರತಕ್ಕೆ ಯೋಜನೆ, ಜೈಶಂಕರ್‌

ದೇಶ ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬನೆಯತ್ತ ಹೆಜ್ಜೆ ಇಡಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ದೇಶದ ಅಭಿವೃದ್ಧಿ ಮತ್ತು ಜನರ ರಕ್ಷಣೆಯೇ ನಮ್ಮ ಮೊದಲ ಆದ್ಯತೆ. ನಮ್ಮ ಯುವಜನರು, ವಿದ್ಯಾರ್ಥಿಗಳು ಅವುಗಳ ಉಪಯೋಗ ಪಡೆದುಕೊಂಡು ಹೊಸ ಸಂಶೋಧನೆ, ಆವಿಷ್ಕಾರಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ। ಎಸ್.ಜೈಶಂಕರ್ 

Plan for a self-reliant India Says Union Minister of External Affairs Dr S  Jaishankar grg
Author
First Published Jan 6, 2024, 4:38 AM IST

ಬೆಂಗಳೂರು(ಜ.06):  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೇಕ್‌ ಇನ್‌ ಇಂಡಿಯಾ, ಆತ್ಮಭಾರತ್‌ ಅಭಿಯಾನ, ಸ್ಕಿಲ್‌ ಇಂಡಿಯಾ ಸೇರಿದಂತೆ ಅನೇಕ ಯೋಜನೆಗಳು ಭಾರತವನ್ನು ಬಹಳಷ್ಟು ಕ್ಷೇತ್ರಗಳಲ್ಲಿ ವಿದೇಶಿ ಅವಲಂಬನೆ ಬಿಟ್ಟು ಸ್ವಾವಲಂಭಿ ರಾಷ್ಟ್ರವಾಗುವತ್ತ ಸಹಕಾರವಾಗಿವೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ। ಎಸ್.ಜೈಶಂಕರ್ ಹೇಳಿದರು.

ಪಿಇಎಸ್‌ ಶಿಕ್ಷಣ ಸಂಸ್ಥೆಗಳ ಸುವರ್ಣ ಮಹೋತ್ಸವದ ಅಂಗವಾಗಿ ವಿವಿಯ ಕ್ಯಾಂಪಸ್‌ನಲ್ಲಿ ಆಯೋಜಿಸಿರುವ ‘ಭಾರತ್‌ ಅನ್‌ಲೀಸ್ಡ್‌’ ಕಾರ್ಯಕ್ರಮದಲ್ಲಿ ‘ಭಾರತದ ಭವಿಷ್ಯತ್ತಿಗಾಗಿ ಭೂತದ ಮರುಶೋಧನೆ’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಬದಲಾದಂತೆ ದೇಶದಲ್ಲಿ ಸಾಕಷ್ಟು ಬದಲಾವಣೆ ಕೂಡ ಆಗಿದೆ. ಜನರ ಜೀವನ ಶೈಲಿ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಂಡ ‘ಮೇಕ್ ಇನ್ ಇಂಡಿಯಾ’ ಕನಸು ಸಕಾರಗೊಂಡಿದೆ. ಇದು ಸಾಧ್ಯವೇ ಇಲ್ಲವೆಂದು ಎಷ್ಟೋ ಜನರು ಮೂಗು ಮುರಿದರು. ಆದರೂ, ಇದನ್ನು ಮೋದಿ ಅವರು ಸಾದಿಸಿ ತೋರಿಸಿದರು. ಇದರ ಫಲವಾಗಿ ನಮ್ಮಲ್ಲಿ ದೇಶದಲ್ಲಿಂದು ಸೆಮಿಕಂಡಕ್ಟರ್ ಚಿಪ್‌ಗಳ ಉತ್ಪಾದನೆ ನಡೆಯುತ್ತಿದೆ. ಸ್ವದೇಶಿ ನಿರ್ಮಿತ ‘ತೇಜಸ್’ ಲಘು ಯುದ್ಧ ವಿಮಾನ ಇತರೆ ದೇಶಕ್ಕೆ ಮಾದರಿಯಾಗಿದೆ. ಇಂತಹ ಅನೇಕ ಸ್ವದೇಶಿ ನಿರ್ಮಿತ ಯೋಜನೆಗಳು ಸಾಕಾರವಾಗುತ್ತಿವೆ. ತೇಜಸ್‌ ಮೇಲೆ ಮೇಲೆ ಇತರರಿಗೆ ನಂಬಿಕೆ ಮೂಡಿಸಬೇಕೆಂಬ ಉದ್ದೇಶದಿಂದಲೇ ಮೋದಿ ಅವರು ಲಘು ಯುದ್ಧ ವಿಮಾನದಲ್ಲಿ ಹಾರಾಟವನ್ನೂ ನಡೆಸಿದರು ಎಂದು ತಿಳಿಸಿದರು.

ಮೇಕ್‌ ಇನ್‌ ಇಂಡಿಯಾ ಇಂಪ್ಯಾಕ್ಟ್‌, 1.24 ಲಕ್ಷ ಕೋಟಿ ದಾಟಲಿದೆ ಭಾರತದ ಮೊಬೈಲ್‌ ಫೋನ್‌ ರಫ್ತು!

ಇದೇ ರೀತಿ ದೇಶ ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬನೆಯತ್ತ ಹೆಜ್ಜೆ ಇಡಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ದೇಶದ ಅಭಿವೃದ್ಧಿ ಮತ್ತು ಜನರ ರಕ್ಷಣೆಯೇ ನಮ್ಮ ಮೊದಲ ಆದ್ಯತೆ. ನಮ್ಮ ಯುವಜನರು, ವಿದ್ಯಾರ್ಥಿಗಳು ಅವುಗಳ ಉಪಯೋಗ ಪಡೆದುಕೊಂಡು ಹೊಸ ಸಂಶೋಧನೆ, ಆವಿಷ್ಕಾರಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ। ಜೈಶಂಕರ್ ಅವರು, ರಾಮಮಂದಿರ ಉದ್ಘಾಟನೆಯ ಸಂಭ್ರಮ ಇತರ ದೇಶಗಳಿಗೂ ಉತ್ತೇಜನಕಾರಿಯಾಗಿದೆ. ಏಕೆಂದರೆ ಈ ದೇಶಗಳ ನಡುವೆಯೂ ಸಾಂಪ್ರದಾಯಿಕ-ಸಾಂಸ್ಕೃತಿಕ ಸಂಬಂಧವಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಅವರ ಆರ್ಥಿಕ ಸಲಹಾ ಮಂಡಳಿ ಸದಸ್ಯ ಸಂಜೀವ್ ಸನ್ಯಾಲ್ ಮಾತನಾಡಿ, 800 ವರ್ಷಗಳ ಅವನತಿಯ ನಂತರ ಭಾರತವು ನಾಗರಿಕತೆಯ ಪ್ರಯಾಣವನ್ನು ಪುನರುಜ್ಜೀವನಗೊಳಿಸುವ ಮೂಲಕ ಜ್ಞಾನ ಮತ್ತು ಸಂಪನ್ಮೂಲಗಳ ಜಾಗತಿಕ ಶಕ್ತಿ ಕೇಂದ್ರದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಿದೆ ಎಂದರು.

ರಕ್ಷಣಾ ವಲಯದಲ್ಲಿ ಭಾರತದ ಮಹತ್ತರ ಸಾಧನೆ: ಮೇಕ್ ಇನ್ ಇಂಡಿಯಾಗೆ ಮೆಗಾ ಸಕ್ಸಸ್..!

ಇದೇ ವೇಳೆ ಡಾ। ಎಸ್.ಜೈಶಂಕರ್ ಅವರು ವಿದೇಶಾಂಗ ನೀತಿ ಕುರಿತು ಬರೆದಿರುವ ‘ವೈ ಭಾರತ್ ಮ್ಯಾಟರ್ಸ್‌’ ಪುಸ್ತಕವನ್ನು ಪಿಇಎಸ್‌ ವಿವಿ ಕುಲಾಧಿಪತಿ ಡಾ। ಎಂ.ಆರ್‌.ದೊರೆಸ್ವಾಮಿ ಬಿಡುಗಡೆ ಮಾಡಿದರು. ಅಲ್ಲದೆ, ಪಿಇಎಸ್ ಸಂಸ್ಥೆಯ ಐವರು ಹಳೆಯ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದ ಗಮನಾರ್ಹ ಕೊಡುಗೆಗಾಗಿ ಪಿಇಎಸ್ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಅಜೋಯ್ ಕುಮಾರ್ ಅವರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ತುಘಲಕ್‌ ಪತ್ರಿಕೆ ಸಂಪಾದಕ ಸ್ವಾಮಿನಾಥನ್‌ ಗುರುಮೂರ್ತಿ, ಅಗಾಮಿಯ ಸಹ ಸಂಸ್ಥಾಪಕ ಸಚಿನ್ ಮಲ್ಹಾನ್, ಪಿಇಎಸ್‌ ಸಮ ಕುಲಾಧಿಪತಿ ಜವಹಾರ್ ದೊರೆಸ್ವಾಮಿ ಉಪಸ್ಥಿತರಿದ್ದರು.

Follow Us:
Download App:
  • android
  • ios