ರಿಲಯನ್ಸ್ ರಿಟೇಲ್ ಮುಖ್ಯಸ್ಥೆ ಇಶಾ ಅಂಬಾನಿ ಪತಿ ಆನಂದ್ ಪಿರಾಮಲ್ ಕುಟುಂಬ ಒಡೆತನದ ಪಿರಾಮಲ್ ಎಂಟರ್ ಪ್ರೈಸರ್ಸ್ ಷೇರುಗಳ ಬೈಬ್ಯಾಕ್ ಪ್ರಕ್ರಿಯೆ ಇಂದು ಆರಂಭವಾಗಿದ್ದು, ಸೆ.6ರ ತನಕ ನಡೆಯಲಿದೆ. ಇದರಲ್ಲಿ ಯಾರು ಪಾಲ್ಗೊಳ್ಳಬಹುದು? ಇಲ್ಲಿದೆ ಮಾಹಿತಿ. 

ಮುಂಬೈ (ಆ.31): ರಿಲಯನ್ಸ್ ರಿಟೇಲ್ ಮುಖ್ಯಸ್ಥೆ ಇಶಾ ಅಂಬಾನಿ ಪತಿ ಆನಂದ್ ಪಿರಾಮಲ್ ಕುಟುಂಬ ಒಡೆತನದ ಕಂಪನಿ ಪಿರಾಮಲ್ ಎಂಟರ್ ಪ್ರೈಸರ್ಸ್ ಷೇರುಗಳ ಮರುಖರೀದಿ (ಷೇರ್ ಬೈ ಬ್ಯಾಕ್) ಪ್ರಕ್ರಿಯೆ ಇಂದಿನಿಂದ (ಆ.31) ಪ್ರಾರಂಭವಾಗಿದೆ. ಇದು ಷೇರುದಾರರಿಗೆ ಪ್ರಸಕ್ತವಿರುವ ಷೇರು ಬೆಲೆಯ ಮೇಲೆ ಶೇ.18ರಷ್ಟು ಪ್ರೀಮಿಯಂ ಗಳಿಸಲು ಅವಕಾಶ ಕಲ್ಪಿಸಿದೆ. ಕಂಪನಿಯ ಅರ್ಹ ಷೇರುದಾರರಿಗೆ 2023ರ ಸೆಪ್ಟೆಂಬರ್ 6ರ ತನಕ ಈ ಆಫರ್ ಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಪಿರಾಮಲ್ ಎಂಟರ್ ಪ್ರೈಸರ್ಸ್ ಪ್ರತಿ ಷೇರನ್ನು 1250 ರೂ.ಗೆ ಬೈಬ್ಯಾಕ್ ಮಾಡುವ ಆಫರ್ ನೀಡಿದೆ. ಇನ್ನು ಈ ಬೈಬ್ಯಾಕ್ ಪ್ರಕ್ರಿಯೆಯನ್ನು ಟೆಂಡರ್ ಮೂಲಕ ಮಾಡೋದಾಗಿಯೂ ತಿಳಿಸಿದೆ. ಷೇರುಗಳ ಬೈಬ್ಯಾಕ್ ಪ್ರಕ್ರಿಯೆಗೆ ತನ್ನ ಬಂಡವಾಳ ಮೀಸಲಿನಿಂದ 1,750 ಕೋಟಿ ರೂ. ಬಳಸುವ ಗುರಿಯನ್ನು ಪಿರಾಮಲ್ ಎಂಟರ್ ಪ್ರೈಸರ್ಸ್ ಹೊಂದಿದೆ. ಷೇರುಗಳ ಬೈಬ್ಯಾಕ್ ಬಗ್ಗೆ ಪಿರಾಮಲ್ ಎಂಟರ್ ಪ್ರೈಸರ್ಸ್ ಈಗಾಗಲೇ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. 2ರೂ. ಮುಖಬೆಲೆಯ ಕಂಪನಿಯ 1,40,00,000 ಕೋಟಿ ಷೇರುಗಳನ್ನು ಬೈಬ್ಯಾಕ್ ಮಾಡಲು ಕಂಪನಿಯ ನಿರ್ದೇಶಕರುಗಳ ಮಂಡಳಿ ಈಗಾಗಲೇ ಅನುಮೋದನೆ ನೀಡಿದೆ ಎಂದು ಪಿರಾಮಲ್ ಎಂಟರ್ ಪ್ರೈಸರ್ಸ್ ತಿಳಿಸಿದೆ. 

ಟೆಂಡರ್ ಪ್ರಕ್ರಿಯೆ ಮೂಲಕ ಪ್ರತಿ ಷೇರನ್ನು 1,250ರೂ.ಗೆ ಬೈಬ್ಯಾಕ್ ಮಾಡೋದಾಗಿ ಪಿರಾಮಲ್ ಎಂಟರ್ ಪ್ರೈಸರ್ಸ್ ತಿಳಿಸಿದ್ದು, ಒಟ್ಟು ಮೊತ್ತ 1,750 ಕೋಟಿ ರೂ. ಮೀರದಂತೆ ಈ ಪ್ರಕ್ರಿಯೆ ನಡೆಸಲು ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಹೇಳಿದೆ. ಇನ್ನು ಪಿರಾಮಲ್ ಎಂಟರ್ ಪ್ರೈಸರ್ಸ್ ಷೇರುಗಳ ಬೈಬ್ಯಾಕ್ ಪ್ರಕ್ರಿಯೆಗೆ 2023ರ ಆಗಸ್ಟ್ 25 ರೆಕಾರ್ಡ್ ದಿನಾಂಕವಾಗಿದೆ. ಇದರರ್ಥ ಯಾರು 2023ರ ಆಗಸ್ಟ್ 24ರ ತನಕ ಅದಾನಿ ಎಂಟರ್ ಪ್ರೈಸರ್ಸ್ ಷೇರುಗಳನ್ನು ಖರೀದಿಸಿದ್ದಾರೋ ಹಾಗೂ 2023ರ ಆಗಸ್ಟ್ 25ರಂದು ಷೇರುಪತ್ರ (scrip) ಹೊಂದಿದ್ದಾರೋ ಅವರು ಈ ಬೈಬ್ಯಾಕ್ ಆಫರ್ ಪಡೆಯಲು ಅರ್ಹತೆ ಗಳಿಸಿದ್ದಾರೆ. 

ಇಶಾ ಅಂಬಾನಿಯಲ್ಲಿದೆ ಅಪರೂಪದ ಅನ್‌ಕಟ್‌ ಡೈಮಂಡ್‌ ನೆಕ್ಲೇಸ್‌, ಬೆಲೆ ಕೇಳಿದ್ರೆ ತಲೆಸುತ್ತಿ ಬೀಳ್ತೀರಾ!

ಸ್ವೀಕಾರ ಅನುಪಾತ
ಇಂದು ಪಿರಾಮಲ್ ಎಂಟರ್ ಪ್ರೈಸರ್ಸ್ ಪ್ರತಿ ಷೇರಿನ ಬೆಲೆ 1,060ರೂ. ಆಸುಪಾಸಿನಲ್ಲಿದೆ. ಅಂದರೆ ಬೈಬ್ಯಾಕ್ ಆಫರ್ ಶೇ.18ರ ಪ್ರೀಮಿಯಂನಲ್ಲಿ ಸಿಗಲಿದೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷಯಿದೆ. ಹೀಗಾಗಿ ಸ್ವೀಕಾರ ಅನುಪಾತ ಕಡಿಮೆ ಇರುವ ನಿರೀಕ್ಷೆಯಿದೆ. 

ರಿಟೇಲ್ ಹೂಡಿಕೆದಾರರು ಏನ್ ಮಾಡ್ಬೇಕು?
188 ಅಥವಾ ಅದಕ್ಕಿಂತ ಕಡಿಮೆ ಷೇರುಗಳನ್ನು ಹೊಂದಿರುವ ಹೂಡಿಕೆದಾರರು ಬೈಬ್ಯಾಕ್ ಪ್ರಕ್ರಿಯೆಯಲ್ಲಿ ಷೇರುಗಳನ್ನು ಟೆಂಡರ್ ಮಾಡುವಂತೆ ಐಸಿಐಸಿಐ ಸೆಕ್ಯುರಿಟೀಸ್ ಸಲಹೆ ನೀಡಿದೆ. ಪ್ರೀಮಿಯಂ ಹಾಗೂ ಅಧಿಕ ಸ್ವೀಕಾರ ಅನುಪಾತದ ನಿರೀಕ್ಷೆಯಲ್ಲಿ ಗಳಿಕೆ ಮಾಡಲು ಇದು ನೆರವು ನೀಡಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಅಂದ ಹಾಗೇ ಬೈಬ್ಯಾಕ್ ಪ್ರಕ್ರಿಯೆ ಸೆಪ್ಟೆಂಬರ್ 6ಕ್ಕೆ ಅಂತ್ಯವಾಗಲಿದೆ. 

ಅಪ್ಪನನ್ನೇ ಮೀರಿಸಿದ ಮಗಳು: ರಿಲಯನ್ಸ್‌ನ ಎಲ್ಲ ಕಂಪನಿಗಳಿಗಿಂತ ರಿಲಯನ್ಸ್‌ ರೀಟೇಲ್‌ ಮೌಲ್ಯವೇ ಹೆಚ್ಚು!

ಕಂಪನಿ ಬಿಡುಗಡೆಗೊಳಿಸಿರುವ ಇತ್ತೀಚಿನ ಷೇರುದಾರರ ಪ್ಯಾಟರ್ನ್ ಗಮನಿಸಿದರೆ ರಿಟೇಲ್ ಗ್ರಾಹಕರಿಗೆ ಸ್ವೀಕಾರ ಅನುಪಾತ ಶೇ.30ರಷ್ಟು ಇರುವ ನಿರೀಕ್ಷೆಯಿದೆ. ಇನ್ನು ಪ್ರಮೋಟರ್ಸ್ ಬೈಬ್ಯಾಕ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಇತರ ವಿಭಾಗದವರಿಗೆ ಸ್ವೀಕಾರ ಅನುಪಾತ ಸರಿಸುಮಾರು ಶೇ.10ಷ್ಟು ಹೆಚ್ಚಿರುವ ವಿಶ್ವಾಸವಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ವಿಶ್ಲೇಷಕರು ತಿಳಿಸಿದ್ದಾರೆ. ಮಧ್ಯಾಹ್ನದ ಬಳಿಕ ಎನ್ ಎಸ್ ಇಯಲ್ಲಿ ಪಿರಾಮಲ್ ಎಂಟರ್ ಪ್ರೈಸರ್ಸ್ ಷೇರು 1054.60ರೂ.ಗೆ ಟ್ರೇಡ್ ಆಗುತ್ತಿದೆ. ಕಳೆದ ಆರು ತಿಂಗಳಲ್ಲಿ ಈ ಸಂಸ್ಥೆ ಷೇರುಗಳು ಶೇ.37ರಷ್ಟು ಗಳಿಕೆ ಮಾಡಿವೆ. ಹೀಗಾಗಿ ಬೈಬ್ಯಾಕ್ ಆಫರ್ ರಿಟೇಲ್ ಗ್ರಾಹಕರಿಗೆ ಲಾಭ ತರುವ ನಿರೀಕ್ಷೆಯಿದೆ.