Asianet Suvarna News Asianet Suvarna News

ಅಡುಗೆ ಗ್ಯಾಸ್‌ ಬೆಲೆ ಮತ್ತೆ ಏರಿಕೆ: ಯೂನಿಟ್‌ಗೆ ರೂ. 2.63 ರಷ್ಟು ಹೆಚ್ಚಳ ಕಂಡ ನೈಸರ್ಗಿಕ ಅನಿಲ

ದೇಶದ ಹಲವು ನಗರಗಳಲ್ಲೀಗ ಅಡುಗೆ ಅನಿಲದ ಬೆಲೆಯಲ್ಲಿ ಹೆಚ್ಚಳವಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಇದರಿಂದ ಮತ್ತೊಂದು ಶಾಕ್‌ ತಗುಲಿದೆ. 

piped cooking gas price hiked in delhi uttar pradesh and mumbai ash
Author
Bangalore, First Published Aug 5, 2022, 4:49 PM IST

ದೇಶದ ಜನತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ಹೆಚ್ಚಳ ಹಾಗೂ ಹಣದುಬ್ಬರದಂತಹ ವಿಚಾರಗಳಲ್ಲಿ ತೀವ್ರ ಪರದಾಡುತ್ತಿದ್ದಾರೆ. ಆದರೆ, ಇಂತಹವರಿಗೆ ಮತ್ತಷ್ಟು ಶಾಕಿಂಗ್ ಸುದ್ದಿ ಕಾದಿದೆ. ಅಡುಗೆ ಗ್ಯಾಸ್‌ (Cooking Gas) ಬೆಲೆ ಮತ್ತೆ ಏರಿಕೆ ಕಂಡಿದೆ. ದೇಶದ ಹಲವೆಡೆ ನೈಸರ್ಗಿಕ ಅನಿಲದ (Natural Gas) ಬೆಲೆ ಶುಕ್ರವಾರ ಯೂನಿಟ್‌ಗೆ ರೂ. 2.63 ರಷ್ಟು ಹೆಚ್ಚಳ ಕಂಡಿದೆ. ರಾಷ್ಟ್ರ ರಾಜಧಾನಿ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಮನೆಗಳಿಗೆ ಅಡಿಗೆಗೆ ಬಳಕೆಯಾಗಲು ಕೊಳವೆ ಮೂಲಕ ನೀಡುವ ನೈಸರ್ಗಿಕ ಅನಿಲದ ಬೆಲೆ ಏರಿಕೆಯಾಗಿದೆ. 

ದೆಹಲಿಯಲ್ಲಿ ನೈಸರ್ಗಿಕ ಅನಿಲ ಬೆಲೆ 
ರಾಷ್ಟ್ರ ರಾಜಧಾನಿಯಲ್ಲಿ ಮನೆಗೆ ಕೊಳವೆ ಮೂಲಕ ನೀಡುವ ನೈಸರ್ಗಿಕ ಅನಿಲ ಬೆಲೆ ಇನ್ಮುಂದೆ ಒಂದು ಪ್ರಮಾಣಿತ ಘನ ಮೀಟರ್‌ಗೆ (Standard Cubic Metre) ರೂ. 50.59 ಆಗಲಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಒಂದು ಪ್ರಮಾಣಿತ ಘನ ಮೀಟರ್‌ಗೆ (ಎಸ್‌ಸಿಎಂ) ರೂ. 47.96 ಇದ್ದದ್ದು ರೂ. 2.63 ರಷ್ಟು ಹೆಚ್ಚಳ ಕಂಡಿದೆ. ಆಟೋಮೊಬೈಲ್ಸ್‌ ಹಾಗೂ ಮನೆಗಳಿಗೆ ಕೊಳವೆ ಮೂಲಕ ನೈಸರ್ಗಿಕ ಅನಿಲ ಪೂರೈಸುವ ಇಂದ್ರಪ್ರಸ್ಥ ಗ್ಯಾಸ್‌ ಲಿಮಿಟೆಡ್‌ (Indraprastha Gas Limited) ಮಾಹಿತಿ ನೀಡಿದೆ. ದೆಹಲಿ ಹಾಗೂ ಸುತ್ತಮುತ್ತಲ ನಗರಗಳಿಗೆ ಇದೇ ಗ್ಯಾಸ್‌ ಕಂಪನಿ ಮನೆಗಳಿಗೆ ಅನಿಲ ಪೂರೈಕೆ ಮಾಡುತ್ತದೆ ಎಂದು ತಿಳಿದುಬಂದಿದೆ. 

LPG Price Hike: ಗ್ಯಾಸ್‌ ಸಿಲಿಂಡರ್ ದರ ಮತ್ತೆ 50 ರೂ ಏರಿಕೆ, ಜನಸಾಮಾನ್ಯರಿಗೆ ಮತ್ತಷ್ಟು ಹೊರೆ!

ಇನ್ಪುಟ್ ಗ್ಯಾಸ್ ವೆಚ್ಚದಲ್ಲಿನ ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಈ ಬೆಲೆ ಏರಿಕೆ ಮಾಡಲಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್‌ ಲಿಮಿಟೆಡ್‌ ಟ್ವೀಟ್‌ (ಐಜಿಎಲ್‌) ಮಾಡಿದೆ.  ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ದುಬಾರಿ ಆಮದು ಮಾಡಿಕೊಳ್ಳುವ ಎಲ್‌ಎನ್‌ಜಿ ಬಳಕೆಯನ್ನು ಸರ್ಕಾರ ಕಡ್ಡಾಯಗೊಳಿಸಿದ ನಂತರ ಕೊಳವೆ ಅನಿಲ ಬೆಲೆಯಲ್ಲಿ ಈ ಹೆಚ್ಚಳವಾಗಿದೆ. IGL ನಂತಹ ನಗರ ಅನಿಲ ಚಿಲ್ಲರೆ ವ್ಯಾಪಾರಿಗಳಿಗೆ ಸರಬರಾಜು ಮಾಡುವ ಮೊದಲು ಸರ್ಕಾರಿ ಸ್ವಾಮ್ಯದ ಗ್ಯಾಸ್‌ ಆಥಾರಿಟಿ ಆಫ್‌ ಇಂಡಿಯಾ ಲಿಮಿಟೆಡ್‌ (Gas Authority of India Limited) ಆಮದು ಮಾಡಿಕೊಂಡ ಅನಿಲದ ದರವನ್ನು ಸ್ಥಳೀಯವಾಗಿ ಉತ್ಪಾದಿಸುತ್ತದೆ.

ಎರಡು ವಾರಗಳಲ್ಲಿ 2 ಬಾರಿ ಬೆಲೆ ಏರಿಕೆ
ಇನ್ನು, ಎರಡು ವಾರಗಳಿಗೂ ಮುನ್ನ ಅನಿಲ ಬೆಲೆಯಲ್ಲಿ ಎರಡು ಬಾರಿ ಏರಿಕೆಯಾಗಿದೆ. ಜುಲೈ 26 ರಂದು ಕಳೆದ ಬಾರಿ ಈ ನೈಸರ್ಗಿಕ ಅನಿಲ ಬೆಲೆಯನ್ನು ಪರಿಷ್ಕರಿಸಲಾಗಿತ್ತು. ಆ ವೇಳೆ ಒಂದು ಯೂನಿಟ್‌ಗೆ ರೂ. 2.1 ರಷ್ಟು ಹೆಚ್ಚಳ ಮಾಡಲಾಗಿತ್ತು ಎಂದೂ ತಿಳಿದುಬಂದಿದೆ. 
LPG Cylinder Price Hike: ಗ್ಯಾಸ್‌ ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆ: ಕಂಗಾಲಾದ ಗ್ರಾಹಕ..!

ನೋಯ್ಡಾ, ಗಾಜಿಯಾಬಾದ್‌ ಹಾಗೂ ಗುರುಗ್ರಾಮದಲ್ಲಿ ನೈಸರ್ಗಿಕ ಅನಿಲ ಬೆಲೆ
ಇನ್ನು, ರಾಷ್ಟ್ರ ರಾಜಧಾನಿಯ ಸುತ್ತಮುತ್ತಲ ನಗರಗಳಾದ ನೋಯ್ಡಾ, ಗ್ರೇಟರ್‌ ನೋಯ್ಡಾ ಹಾಗೂ ಗಾಜಿಯಾಬಾದ್‌ನಲ್ಲಿ ಮನೆಗಳಿಗೆ ಅಡುಗೆಗೆ ಬಳಸಲು ಕೊಳವೆ ಮೂಲಕ ಪೂರೈಸುವ ನೈಸರ್ಗಿಕ ಅನಿಲದ ಬೆಲೆ ಒಂದು ಎಸ್‌ಸಿಎಂಗೆ ರೂ. 50.46 ಗೆ ದೊರೆಯಲಿದ್ದರೆ, ಗುರುಗ್ರಾಮದಲ್ಲಿ ರೂ. 48.79 ಆಗಲಿದೆ ಎಂದೂ ಐಜಿಎಲ್‌ ತಿಳಿಸಿದೆ. ಅಲ್ಲದೆ, ಮುಂಬೈನಲ್ಲಿ ಮಹಾನಗರ ಗ್ಯಾಸ್‌ ಲಿಮಿಟೆಡ್‌ ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ ರೂ. 6 ರಷ್ಟು ಏರಿಕೆಯಾಗಿದ್ದರೆ, ಕೊಳವೆ ಮೂಲಕ ನೀಡುವ ನೈಸರ್ಗಿಕ ಅನಿಲದ ಬೆಲೆ ಯೂನಿಟ್‌ಗೆ ರೂ. 4 ರಷ್ಟು ಹೆಚ್ಚಳ ಕಂಡಿದೆ.

ಇನ್ಪುಟ್‌ ಗ್ಯಾಸ್‌ ವೆಚ್ಚದಲ್ಲಿ ಗಮನಾರ್ಹ ಏರಿಕೆಯಾಗಿರುವುದರಿಂದ ನಾವು ಈ ಬೆಲೆಯನ್ನು ಗ್ರಾಹಕರ ಮೂಲಕ ಹಿಂಪಡೆಯಲು ನಿರ್ಧರಿಸಿದ್ದೇವೆ. ಅದರಂತೆ, ನಾವು ಸಿಎನ್‌ಜಿಯ ಚಿಲ್ಲರೆ ಬೆಲೆಯನ್ನು ಒಂದು ಕೆಜಿಗೆ ರೂ. 86 ಗೆ ಹೆಚ್ಚಳ ಮಾಡಲಾಗಿದೆ ಹಾಗೂ ಅಡುಗೆಯ ಪಿಎನ್‌ಜಿ ಬೆಲೆ ರೂ. 4 ಏರಿಕೆಯಾಗಿದ್ದು, ಮುಂಬೈ ಸುತ್ತಮುತ್ತ ರೂ. 52.50 ಗೆ ಏರಿಕೆಯಾಗಲಿದೆ ಎಂದೂ ಮಹಾನಗರ ಗ್ಯಾಸ್‌ ಲಿಮಿಟೆಡ್‌ ಹೇಳಿಕೆಯೊಂದರಲ್ಲಿ ತಿಳಿಸಿದೆ. 

Follow Us:
Download App:
  • android
  • ios