ಫೋನ್ ಪೇ ಬಳಕೆದಾರರಿಗೆ ಶುಭಸುದ್ದಿ; ಇನ್ಮುಂದೆ ವಿದೇಶಗಳಲ್ಲೂ ಪಾವತಿ ಸಾಧ್ಯ

ಯುಪಿಐ ಪಾವತಿ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ. ಇದೀಗ ಈ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಮುಂದಡಿಯಿಟ್ಟಿದೆ. ಫೋನ್ ಪೇ ಪಾವತಿ ಸೌಲಭ್ಯ ಇನ್ನು ಮುಂದೆ ವಿದೇಶಗಳಲ್ಲೂ ಲಭ್ಯವಾಗಲಿದೆ. ಈ ಮೂಲಕ ವಿದೇಶಗಳಿಗೂ ತನ್ನ ಸೇವೆ ವಿಸ್ತರಿಸಿದ ಭಾರತದ ಮೊದಲ ಫಿನ್ ಟೆಕ್ ಆಪ್ ಎಂಬ ಹೆಗ್ಗಳಿಕೆಗೆ ಫೋನ್ ಪೇ ಪಾತ್ರವಾಗಿದೆ. 

PhonePe Allows International UPI Transactions First Indian Fintech To Have This Facility

ನವದೆಹಲಿ (ಫೆ.8):ಭಾರತದಲ್ಲಿ ಯುಪಿಐ ಪಾವತಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಅದರಲ್ಲೂ ಫೋನ್ ಪೇ ಯುಪಿಐ ವಹಿವಾಟುಗಳಲ್ಲಿ ಅತೀದೊಡ್ಡ ಪಾಲನ್ನು ಹೊಂದಿರುವ ಮೂಲಕ ದೇಶದ ಅತೀದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾಗಿ ಗುರುತಿಸಿಕೊಂಡಿದೆ. ಇದೀಗ ಫೋನ್ ಪೇ ಬಳಸಿ ವಿದೇಶಗಳಲ್ಲೂ ಪಾವತಿ ಮಾಡಬಹುದಾಗಿದೆ. ಈ ಮೂಲಕ ವಿದೇಶಗಳಿಗೂ ತನ್ನ ಸೇವೆ ವಿಸ್ತರಿಸಿದ ಭಾರತದ ಮೊದಲ ಫಿನ್ ಟೆಕ್ ಆಪ್ ಎಂಬ ಹೆಗ್ಗಳಿಕೆಗೆ ಫೋನ್ ಪೇ ಪಾತ್ರವಾಗಿದೆ. ವಿದೇಶಕ್ಕೆ ಪ್ರಯಾಣಿಸುವ ಭಾರತೀಯರು ಈಗ ಫೋನ್ ಪೇ ಮೂಲಕ ಅಲ್ಲಿನ ವ್ಯಾಪಾರಿಗಳಿಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ಇದು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಮಾದರಿಯಲ್ಲೇ ಕಾರ್ಯನಿರ್ವಹಿಸಲಿದೆ. ಅಂದರೆ ಭಾರತೀಯ ತಾನು ಭೇಟಿ ನೀಡಿದ ದೇಶದಲ್ಲಿ ಫೋನ್ ಪೇ ಮೂಲಕ ಅಲ್ಲಿನ ವರ್ತಕನಿಗೆ ಪಾವತಿಸಿದಾಗ ಆತನ ಬ್ಯಾಂಕ್ ಖಾತೆಯಿಂದ ಆ ದೇಶದ ಕರೆನ್ಸಿ ಮೌಲ್ಯದ ಹಣ ಕಡಿತವಾಗುತ್ತದೆ. ಆರಂಭಿಕ ಹಂತದಲ್ಲಿ ಈ ಸೌಲಭ್ಯ ಯುಎಇ, ಸಿಂಗಾಪುರ, ಮಾರಿಷಸ್, ನೇಪಾಳ ಹಾಗೂ ಭೂತಾನ್ ನಲ್ಲಿ ಲಭಿಸಲಿದೆ. ಈ ರಾಷ್ಟ್ರಗಳಲ್ಲಿ ಸ್ಥಳೀಯ ಕ್ಯುಆರ್ ಕೋಡ್ ಲಭ್ಯವಿದ್ದು, ಫೋನ್ ಪೇ ಪಾವತಿಗೆ ಬೆಂಬಲ ನೀಡಲಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಾಷ್ಟ್ರಗಳಿಗೆ ಫೋನ್ ಪೇ ತನ್ನ ಸೇವೆ ವಿಸ್ತರಿಸಲಿದೆ.

'ಯುಪಿಐ ಇಂಟರ್ ನ್ಯಾಷನಲ್ ಇಡೀ ಜಗತ್ತಿಗೆ ಯಪಿಐ ಸೇವೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮೊದಲ ಪ್ರಮುಖ ಹೆಜ್ಜೆಯಾಗಿದೆ. ಈ ಸೇವೆ ಗೇಮ್ ಚೇಂಜರ್ ಆಗಿ ಪರಿವರ್ತನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ವಿದೇಶಕ್ಕೆ ಪ್ರಯಾಣಿಸುವ ಭಾರತೀಯರು ಅಲ್ಲಿನ ವ್ಯಾಪಾರಿಗಳಿಗೆ ಪಾವತಿ ಮಾಡುವ ವಿಧಾನದಲ್ಲಿ ಸಂಪೂರ್ಣ ಬದಲಾವಣೆ ತರಲಿದೆ' ಎಂದು ಫೋನ್ ಪೇ ಸಹಸಂಸ್ಥಾಪಕ ಹಾಗೂ ಸಿಟಿಒ ರಾಹುಲ್ ಛರಿ ತಿಳಿಸಿದ್ದಾರೆ. 
ಆಪ್ ನಲ್ಲಿ ಯುಪಿಐ ಇಂಟರ್ ನ್ಯಾಷನಲ್ ಗೆ ಬ್ಯಾಂಕ್ ಖಾತೆ ಸಕ್ರಿಯಗೊಳಿಸಬೇಕು. ಇದನ್ನು ಬಳಕೆದಾರರು ಪಾವತಿ ಮಾಡಲು ಬಯಸುವ ಸ್ಥಳದಲ್ಲೇ ಮಾಡಬಹುದು ಅಥವಾ ಪ್ರವಾಸಕ್ಕೂ ಮುನ್ನವೇ ಮಾಡಬಹುದು. ಈ ಸೌಲಭ್ಯದಿಂದಾಗಿ ಭಾರತದ ಹೊರಗೆ ಗ್ರಾಹಕರು ಕ್ರೆಡಿಟ್ ಕಾರ್ಡ್ ಅಥವಾ ಫೊರೆಕ್ಸ್ ಕಾರ್ಡ್ ಹೊಂದಿರಬೇಕಾದ ಅಗತ್ಯವಿಲ್ಲ. 

ಬ್ಯಾಂಕ್ ಖಾತೆ ತೆರೆಯಲು ವಿಡಿಯೋ ಕೆವೈಸಿ; ಯಾವೆಲ್ಲ ಬ್ಯಾಂಕ್ ಗಳಲ್ಲಿ ಲಭ್ಯ?

ಕಳೆದ ವರ್ಷದ ಜುಲೈ ತಿಂಗಳಲ್ಲಿನ ವರದಿಗಳ ಅನ್ವಯ ಎನ್ ಪಿಸಿಐ ಇಂಟರ್ ನ್ಯಾಷನಲ್ ಪೇಮೆಂಟ್ಸ್ ಸಿಇಒ ರಿತೇಶ್ ಶುಕ್ಲ ಯುಪಿಐಯನ್ನು ವಿದೇಶಿ ಮಾರುಕಟ್ಟೆಗಳಿಗೆ ವಿಸ್ತರಿಸುವ ಯೋಜನೆಯಿದೆ ಎಂದು ತಿಳಿಸಿದ್ದರು. ಇದು ಸ್ವಿಫ್ಟ್ ಗೆ (SWIFT) ದೇಶೀಯ ಮಾರುಕಟ್ಟೆಯಲ್ಲೇ ಅಭಿವೃದ್ಧಿಪಡಿಸಿದ ಪರ್ಯಾಯವಾಗಿ ನಿಲ್ಲಬಹುದು ಎಂದು ಹೇಳಿದ್ದರು. ಸ್ವಿಫ್ಟ್ ಬೆಲ್ಜಿಯಂ ಮೂಲದ ಕ್ರಾಸ್ ಬಾರ್ಡರ್ ಪಾವತಿ ವ್ಯವಸ್ಥೆಯಾಗಿದೆ. 

ರೈಲಿನಲ್ಲಿ ಪ್ರಯಾಣಿಸುವಾಗ ವಾಟ್ಸಾಪ್‌ನಲ್ಲೇ ಆಹಾರ ಆರ್ಡರ್‌ ಮಾಡಿ: ಐಆರ್‌ಸಿಟಿಸಿ ಹೊಸ ಸೇವೆ

ದೇಶೀಯ ಯುಪಿಐ ಮಾರುಕಟ್ಟೆಯಲ್ಲಿ ಪ್ರಸ್ತುತ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಹಾಗೂ ಕ್ರೆಡ್ ಪೇ ಆಪ್ ಗಳು ಒಟ್ಟು ಯುಪಿಐ ಮಾರುಕಟ್ಟೆಯ ಶೇ.96.4ರಷ್ಟು ಪಾಲನ್ನು ಹೊಂದಿವೆ. ಅದರಲ್ಲೂ ಫೋನ್ ಪೇ ಭಾರತದಲ್ಲಿ ಒಟ್ಟು ಯುಪಿಐ ವಹಿವಾಟಿನ ಶೇ.49ರಷ್ಟು ಪಾಲು ಹೊಂದಿದೆ. ಇದು ಅತ್ಯಧಿಕ ಪಾಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ (NPCI) ತಿಳಿಸಿದೆ. ಇನ್ನು ಗೂಗಲ್ ಪೇ ಶೇ.34ರಷ್ಟು ಪಾಲು ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ. ಪೇಟಿಎಂ ಶೇ.11, ಕ್ರೆಡ್ ಪೇ (CRED Pay) ಶೇ.1.8 ಹಾಗೂ ಇತರ  (WhatsApp, Amazon Pay and banking apps) ಶೇ.3.5ರಷ್ಟು ಪಾಲು ಹೊಂದಿವೆ.2023ರ ಜನವರಿಯಲ್ಲಿ ಯುಪಿಐ ಮೂಲಕ 12.98 ಲಕ್ಷ ಕೋಟಿ ರೂ. ಮೊತ್ತದ ಹಣ ಪಾವತಿಯಾಗಿದೆ ಎಂದು ಎನ್ ಪಿಸಿಐ ತಿಳಿಸಿದೆ. 


 

Latest Videos
Follow Us:
Download App:
  • android
  • ios