NPS ವಿತ್ ಡ್ರಾಗೆ ಕೆವೈಸಿ ಕಡ್ಡಾಯ; ಏ.1ರಿಂದ ಹೊಸ ನಿಯಮ ಜಾರಿ
ಎನ್ ಪಿಎಸ್ ಹಣ ವಿತ್ ಡ್ರಾ ಹಾಗೂ ವರ್ಷಾಶನಕ್ಕೆ ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಎಲ್ಲ ದಾಖಲೆಗಳನ್ನು ಆನ್ ಲೈನ್ ನಲ್ಲೇ ಸಲ್ಲಿಕೆ ಮಾಡುವಂತೆ ಸೂಚಿಸಲಾಗಿದೆ. ಈ ಹೊಸ ನಿಯಮದಿಂದ ಎನ್ ಪಿಎಸ್ ಸದಸ್ಯರ ಸಮಯ ಹಾಗೂ ಶ್ರಮ ಎರಡೂ ಉಳಿತಾಯವಾಗಲಿದೆ.
ನವದೆಹಲಿ( ಫೆ.26): ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್ ಪಿಎಸ್) ಹಣ ವಿತ್ ಡ್ರಾ ಹಾಗೂ ವರ್ಷಾಶನಕ್ಕೆ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ಕೆವೈಸಿ ಕಡ್ಡಾಯಗೊಳಿಸಿದೆ. ಅಲ್ಲದೆ, ಎಲ್ಲ ದಾಖಲೆಗಳನ್ನು ಆನ್ ಲೈನ್ ನಲ್ಲೇ ಮಾಡುವಂತೆ ತಿಳಿಸಿದೆ. ಈ ಹೊಸ ನಿಯಮ ಎನ್ ಪಿಎಸ್ ಸದಸ್ಯರ ಸಂಕಷ್ಟವನ್ನು ತಗ್ಗಿಸಲಿದೆ. ಹಾಗೆಯೇ ಹಣ ವಿತ್ ಡ್ರಾ ಹಾಗೂ ವರ್ಷಾಶನಕ್ಕೆ ತಗಲುವ ಸಮಯ ಉಳಿತಾಯ ಮಾಡಲಿದೆ. ಇನ್ನು ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಲು ಎನ್ ಪಿಎಸ್ ಹೂಡಿಕೆದಾರರು ಹಾಗೂ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಜವಾಬ್ದಾರರಾಗಿದ್ದಾರೆ. ಪಿಎಫ್ ಆರ್ ಡಿಎ ಸುತ್ತೋಲೆ ಅನ್ವಯ ಎಲ್ಲ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ ಲೈನ್ ನಲ್ಲಿ ಅಪ್ಲೋಡ್ ಮಾಡಬೇಕು. ದಾಖಲೆಗಳನ್ನು ಭೌತಿಕವಾಗಿ ಸಲ್ಲಿಕೆ ಮಾಡಬೇಕಾದ ಅಗತ್ಯವಿಲ್ಲ. ಪ್ರಸ್ತುತ ಎನ್ ಪಿಎಸ್ ನಿಂದ ಹಣ ವಿತ್ ಡ್ರಾ ಮಾಡಲು ಹಾಗೂ ವರ್ಷಾಶನ ಪಡೆಯಲು ಅನೇಕ ತಿಂಗಳು ಬೇಕಾಗುತ್ತದೆ. ಇನ್ನು ಎನ್ ಪಿಎಸ್ ಖಾತೆದಾರರು ಪ್ರತ್ಯೇಕ ದಾಖಲೆಗಳನ್ನು ಸಲ್ಲಿಕೆ ಮಾಡಲು ಸುದೀರ್ಘವಾದ ಪ್ರಕ್ರಿಯೆಗಳನ್ನು ಅನುಸರಿಸಬೇಕಿತ್ತು. ಇವೆಲ್ಲ ದಾಖಲೆಗಳ ಪರಿಶೀಲನೆಗೆ ಸಾಕಷ್ಟು ಸಮಯ ಹಿಡಿಯುತ್ತಿತ್ತು.
ಆನ್ ಲೈನ್ ವಿತ್ ಡ್ರಾ ಮನವಿಗೆ ಚಾಲನೆ ನೀಡಲು ಎನ್ ಪಿಎಸ್ ಖಾತೆದಾರರು ಕೇಂದ್ರೀಯ ದಾಖಲೆಗಳ ನಿರ್ವಹಣಾ ಏಜೆನ್ಸಿ (ಸಿಆರ್ ಎ) ವ್ಯವಸ್ಥೆಗೆ ಲಾಗಿ ಇನ್ (login) ಆಗ್ಬೇಕು. ಆ ಬಳಿಕ ಇ-ಸೈನ್/ ಒಟಿಪಿ (OTP) ದೃಢೀಕರಣ ಮಾಡಬೇಕು. ನಂತರ ನೋಡಲ್ ಆಫೀಸ್ /ಪಿಒಪಿ (nodal office/POP) ಅವರಿಗೆ ಮನವಿ ಮಾಡಬೇಕು. ಮನವಿಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಖಾತೆದಾರರಿಗೆ ನೀಡಲಾಗುತ್ತದೆ. ವಿಳಾಸ, ಬ್ಯಾಂಕ್ ಮಾಹಿತಿಗಳು, ನಾಮನಿರ್ದೇಶನ ಇತ್ಯಾದಿ ಮಾಹಿತಿಗಳನ್ನು ಎನ್ ಪಿಎಸ್ ಖಾತೆಯಿಂದ ಪಡೆದು ಮನವಿಯನ್ನು ಮುಂದಿನ ಪ್ರಕ್ರಿಯೆಗಳಿಗೆ ಕಳುಹಿಸಲಾಗುತ್ತದೆ.
ದೇಶ ಐದು ಸಹಕಾರಿ ಬ್ಯಾಂಕ್‌ಗಳಿಗೆ ಆರ್‌ಬಿಐ ನಿರ್ಬಂಧ, ರಾಜ್ಯದ ಈ ಬ್ಯಾಂಕ್‌ನಲ್ಲಿದ್ಯಾ ನಿಮ್ಮ ಅಕೌಂಟ್?
ಇನ್ನು ಸಿಆರ್ ಎಯಲ್ಲಿ (CRA) ನೋಂದಣಿಯಾಗಿರುವ ಎನ್ ಪಿಎಸ್ ಖಾತೆದಾರರ ಬ್ಯಾಂಕ್ ಖಾತೆಯನ್ನುಆನ್ ಲೈನ್ ಬ್ಯಾಂಕ್ ಖಾತೆ ಪರಿಶೀಲನೆ ಮೂಲಕ ಪರಿಶೀಲಿಸಬಹುದು. ಮನವಿ ಸಮಯದಲ್ಲಿ ವಿಳಾಸ ದೃಢೀಕರಣ ದಾಖಲೆಗಳು, ಬ್ಯಾಂಕ್ ಖಾತೆ ಪುರಾವೆ ಹಾಗೂ ಪ್ಯಾನ್ ಕಾರ್ಡ್ ಪ್ರತಿ ಸೇರಿದಂತೆ ಅಗತ್ಯವಿರುವ ಕೆವೈಸಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಇದಾದ ಬಳಿಕ ಒಟಿಪಿ ದೃಢೀಕರಣ ಅಥವಾ ಆಧಾರ್ ಮೂಲಕ ಇ-ಸಹಿ (e-sign) ಆಯ್ಕೆಯನ್ನು ಆರಿಸುವ ಮೂಲಕ ಮನವಿಯನ್ನು ದೃಢೀಕರಿಸಲಾಗುತ್ತದೆ. ಮನವಿ ಬಳಿಕ ದಾಖಲೆಗಳ ಪರಿಶೀಲನೆಗೆ ನೋಡಲ್ ಅಧಿಕಾರಿ ಜವಾಬ್ದಾರರಾಗುತ್ತಾರೆ.
ಎಫ್ ಡಿ ಮೇಲಿನ ಬಡ್ಡಿಗೆ ಎಷ್ಟು ಟಿಡಿಎಸ್ ಕಡಿತವಾಗುತ್ತೆ?ಇಲ್ಲಿದೆ ಮಾಹಿತಿ
ಎನ್ ಪಿಎಸ್ ಖಾತೆದಾರರು ಎಸ್ ಎಂಎಸ್ (SMS) ಹಾಗೂ ಇ-ಮೇಲ್ (e-mail) ಅಥವಾ ಆಧಾರ್ ಮೂಲಕ ಇ-ಸಹಿ ಮೂಲಕ ಒಟಿಪಿ (OTP) ದೃಢೀಕರಣ ಮಾಡಬೇಕು. ಆ ಮೂಲಕ ಇಡೀ ಪ್ರಕ್ರಿಯೆಯನ್ನು ಡಿಜಿಟಲ್ ವಿಧಾನದಲ್ಲೇ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಆದರೆ, ದಾಖಲೆಗಳನ್ನು ಅಪ್ಲೋಡ್ ಮಾಡುವಾಗ ಎಚ್ಚರ ವಹಿಸಬೇಕು. ಹೆಸರು, ಜನ್ಮದಿನಾಂಕ ಹಾಗೂ ನಾಮಿನಿ ಹೆಸರನ್ನು ಸರಿಯಾಗಿ ಪರಿಶೀಲಿಸಿದ ಬಳಿಕವೇ ಅಪ್ಲೋಡ್ ಮಾಡಬೇಕು. ಈ ಹೊಸ ನಿಯಮ ವಿತ್ ಡ್ರಾ ಹಾಗೂ ವರ್ಷಾಶನ ಪಡೆಯುವ ಎರಡೂ ಪ್ರಕ್ರಿಯೆಗಳನ್ನು ಒಟ್ಟಿಗೆ ಪೂರ್ಣಗೊಳಿಸುತ್ತದೆ. ಇದರಿಂದ ಎನ್ ಪಿಎಸ್ ಖಾತೆದಾರರ ಸಮಯ ಉಳಿಯುತ್ತದೆ. ಪ್ರಸ್ತುತ ಎನ್ ಪಿಎಸ್ (NPS) ಖಾತೆಯಲ್ಲಿರುವ ಹಣ ವಿತ್ ಡ್ರಾ ಮಾಡಲು ನಿವೃತ್ತಿ ಬಳಿಕ ಒಂದು ತಿಂಗಳು ಹಿಡಿಯುತ್ತದೆ. ಇನ್ನು ವರ್ಷಾಶನ ಹಾಗೂ ಪಿಂಚಣಿ (Pension) ಪಡೆಯುವ ಇಡೀ ಪ್ರಕ್ರಿಯೆಗೆ ಎರಡರಿಂದ ಮೂರು ತಿಂಗಳು ಹಿಡಿಯುತ್ತದೆ.