Asianet Suvarna News

ಇಪಿ​ಎಫ್‌ ಪಡೆಯೋರಿಗೆ ಭರ್ಜರಿ ಗುಡ್‌ ನ್ಯೂಸ್ ಕೊಟ್ಟ ಸಚಿವಾಲಯ!

* ಕೊರೋನಾದಿಂದಾಗಿ ಸಂಕ​ಷ್ಟ​ಕ್ಕೀ​ಡಾ​ಗಿ​ರುವ ಸಾವಿ​ರಾರು ಕುಟುಂಬ​ಗ​ಳಿಗೆ ಆಸ​ರೆ​

* ಇಪಿ​ಎಫ್‌ ಉಚಿತ ವಿಮೆ ಮೊತ್ತ 7 ಲಕ್ಷಕ್ಕೆ ಏರಿ​ಕೆ

* ಕೊರೋನಾದಿಂದ ಸಾವ​ನ್ನ​ಪ್ಪಿದ ಉದ್ಯೋ​ಗಿಯ ಕುಟುಂಬಕ್ಕೆ ನೆರ​ವು

PF New Rule: EPF Account Comes With Rs 7 Lakh Free Insurance Cover pod
Author
Bangalore, First Published Jun 12, 2021, 9:33 AM IST
  • Facebook
  • Twitter
  • Whatsapp

ನವ​ದೆ​ಹ​ಲಿ(ಜೂ.12): ಕೊರೋನಾದಿಂದಾಗಿ ಸಂಕ​ಷ್ಟ​ಕ್ಕೀ​ಡಾ​ಗಿ​ರುವ ಸಾವಿ​ರಾರು ಕುಟುಂಬ​ಗ​ಳಿಗೆ ಆಸ​ರೆ​ಯಾ​ಗುವ ನಿಟ್ಟಿ​ನಿಂದ ನೌಕ​ರರ ಭವಿ​ಷ್ಯ​ನಿಧಿ ಸಂಸ್ಥೆ- ಇಪಿ​ಎ​ಫ್‌ಒ ಇತ್ತೀ​ಚೆಗೆ ಉದ್ಯೋ​ಗಿಯ ಠೇವಣಿ ಆಧಾ​ರಿತ ವಿಮೆ (ಇ​ಡಿ​ಎ​ಲ್‌​ಐ​)​ಯೋ​ಜ​ನೆಯ ಗರಿಷ್ಠ ಮೊತ್ತ​ವನ್ನು 7 ಲಕ್ಷ ರು.ಗ​ಳಿಗೆ ಏರಿಕೆ ಮಾಡಿದೆ. ಈ ಸೌಲ​ಭ್ಯ​ವನ್ನು ಪಡೆ​ಯಲು ನೌಕ​ರರು ಯಾವುದೇ ಹೆಚ್ಚು​ವರಿ ವೆಚ್ಚ​ವನ್ನು ಭರಿಸಬೇ​ಕಾ​ಗಿಲ್ಲ ಎಂದು ಕಾರ್ಮಿಕ ಸಚಿ​ವಾ​ಲಯ ತಿಳಿ​ಸಿ​ದೆ.

ಇಪಿ​ಎಫ್‌ ಯೋಜ​ನೆಯ ಎಲ್ಲಾ ಗ್ರಾಹ​ಕ​ರಿಗೆ ಇ​ಡಿ​ಎ​ಲ್‌​ಐ ಯೋಜ​ನೆಯ ಅಡಿ​ಯಲ್ಲಿ ವಿಮಾ ಸೌಲಭ್ಯ ಒದ​ಗಿ​ಸು​ವುದು ಕಡ್ಡಾ​ಯ​ವಾ​ಗಿದೆ. ಒಂದು ವೇಳೆ ಉದ್ಯೋಗಿ ಸ್ವಾಭಾ​ವಿ​ಕ​ವಾಗಿ, ಕಾಯಿ​ಲೆ​ಯಿಂದ ಅಥವಾ ಅಪ​ಘಾ​ತದಿಂದ ಸಾವಿ​ಗೀ​ಡಾ​ದ ಸಂದ​ರ್ಭ​ದಲ್ಲಿ ನಾಮಿ​ನಿಗೆ 7 ಲಕ್ಷ ರು. ಹಣ ಲಭ್ಯ​ವಾ​ಗ​ಲಿ​ದೆ.

ಈ ಸಂಬಂಧ ಇಪಿ​ಎ​ಫ್‌ಒ ಇತ್ತೀ​ಚೆಗೆ ಉದ್ಯೋಗಿ ಸಾವಿ​ಗೀ​ಡಾದ ಸಂದ​ರ್ಭ​ದಲ್ಲಿ ನೀಡುವ ಕನಿಷ್ಠ ಮೊತ್ತವನ್ನು ಕನಿಷ್ಠ ಮಿತಿ​ಯನ್ನು 2 ಲಕ್ಷ​ದಿಂದ 2.5 ಲಕ್ಷಕ್ಕೆ ಹಾಗೂ ಗರಿಷ್ಠ ಮಿತಿ​ಯನ್ನು 6 ಲಕ್ಷ​ದಿಂದ 7 ಲಕ್ಷಕ್ಕೆ ಏರಿಕೆ ಮಾಡಿದೆ. ಸಾವಿಗೂ ಮುನ್ನ ಕಳೆದ 12 ತಿಂಗ​ಳಿ​ನಲ್ಲಿ ಉದ್ಯೋಗಿ ಪಡೆ​ದಿದ್ದ ವೇತ​ನಕ್ಕೆ ಅನು​ಗು​ಣ​ವಾಗಿ ವಿಮಾ ಕವರ್‌ ಇರ​ಲಿದೆ.

Follow Us:
Download App:
  • android
  • ios