ದೇಶಾದ್ಯಂತ 1000 ಪೆಟ್ರೋಲ್ ತೆರೆಯಲು ಅನುಮತಿ! ಬರಲಿವೆ ಪೋರ್ಟೆಬಲ್ ಪೆಟ್ರೋಲ್ ಪಂಪ್! ಸಾಮಾನ್ಯ ಪೆಟ್ರೋಲ್ ಬಂಕ್ ಗಳಿಗಿಂತ ಭಿನ್ನ! ನೀವೂ ಈ ಬಂಕ್ ಮಾಲೀಕರಾಗಬಹುದು !ಗ್ರಾಮೀಣ ಪ್ರದೇಶಲ್ಲಿ ತೈಲ ಸೇವೆಗೆ ಸಜ್ಜಾಗಿ

ನವದೆಹಲಿ(ಆ.23): ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಇಲಾಖೆ ದೇಶಾದ್ಯಂತ ಸುಮಾರು 1000 ಪೋರ್ಟೆಬಲ್ ಪೆಟ್ರೋಲ್ ಪಂಪ್ ತೆರೆಯಲು ಅನುಮತಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗ್ರಾಮೀಣ ಪ್ರದೇಶದಲ್ಲೂ ಸುಲಭವಾಗಿ ಪೆಟ್ರೋಲ್ ಮತ್ತು ಡೀಸೆಲ್ ಸಿಗಲು ಅನುಕೂಲವಾಗುವಂತೆ ಈ ಪೋರ್ಟೆಬಲ್ ಪೆಟ್ರೋಲ್ ಪಂಪ್ ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಅದರಂತೆ ಆಸಕ್ತರು ಈ ಪೋರ್ಟೆಬಲ್ ಪೆಟ್ರೋಲ್ ಪಂಪ್ ಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಒಂದು ಪೆಟ್ರೋಲ್ ಬಂಕ್ ತೆರೆಯಲು 90 ಲಕ್ಷದಿಂದ 1 ಕೋಟಿ ರೂ. ಬೇಕಾಗುತ್ತದೆ. ಅಲ್ಲದೇ ಶೇ. 80 ರಷ್ಟು ಸಾಲ ಸೌಲಭ್ಯ ಕೂಡ ಒದಗಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಸಾಮಾನ್ಯ ಪೆಟ್ರೋಲ್ ಬಂಕ್ ಗಳಿಗಿಂತ ತುಸು ಭಿನ್ನವಾಗಿರುವ ಈ ಪೋರ್ಟೆಬಲ್ ಪೆಟ್ರೋಲ್ ಪಂಪ್ ಗಳು ಗ್ರಾಮೀಣ ಪ್ರದೇಶದಲ್ಲಿ ತೈಲ ಸೇವೆ ಒದಗಿಸಲಿವೆ. ಕೇವಲ 400 ಮೀಟರ್ ಪ್ರದೇಶದಲ್ಲಿ ಈ ಪೋರ್ಟೆಬಲ್ ಪೆಟ್ರೋಲ್ ಪಂಪ್ ತೆರೆಯಲು ಸಾಧ್ಯವಿದ್ದು, ಎಲ್ಲಾ ಆಧುನಿಕ ಸೌಲಭ್ಯಗಳು ಇದರಲ್ಲಿ ಇರಲಿವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.