ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಂಕ್ ಮಾಲೀಕರ ಮುಷ್ಕರ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿರುವ ಪೆಟ್ರೋಲ್ ಬಂಕ್ ಮಾಲೀಕರು ಸರ್ಕಾರಕ್ಕೆ ಶುರುವಾಯ್ತು ತಲೆನೋವು, ಜನ ಆತಂಕ ಪಡುವ ಅಗತ್ಯವಿಲ್ಲ
ನವದೆಹಲಿ(ಮೇ.30): ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಪೆಟ್ರೋಲ್ ಮಾಲೀಕರ ಸಂಘ ನಾಳೆ(ಮೇ.31) ಬಂಕ್ ಮುಷ್ಕರಕ್ಕೆ ಕರೆ ಕೊಟ್ಟಿದೆ. ನಾಳೆ ದೇಶದಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ನಡೆಯಲಿದೆ. ಪೆಟ್ರೋಲ್ ಬಂಕ್ ಮಾಲೀಕರ ನಿರ್ಧಾರದಿಂದ ಸರ್ಕಾರಕ್ಕೆ ಭಾರಿ ನಷ್ಟವಾಗಲಿದೆ. ಆದರೆ ಜನಸಾಮಾನ್ಯರಿಗೆ ಸಮಸ್ಯೆಯಾಗುವುದಿಲ್ಲ. ಕಾರಣ ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯನಿರ್ವಹಸಲಿದೆ.
ಮೇ.31ರಂದು ಕರ್ನಾಟಕದಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಯಾವುದೇ ರೀತಿ ಇಂಧನ ಖರೀದಿ ಮಾಡುವುದಿಲ್ಲ. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ರೂಪಾಯಿ ನಷ್ಟವಾಗಲಿದೆ. ಇನ್ನು ಪೆಟ್ರೋಲ್ ಬಂಕ್‌ನಲ್ಲಿ ಜನಸಾಮಾನ್ಯರಾಗಿ ಸಮಸ್ಯೆಯಾಗುವುದಿಲ್ಲ. ಕೇವಲ ಬಂಕ್‌ನಲ್ಲಿ ಸ್ಟಾಕ್ ಖಾಲಿಯಾದರೆ ಮಾತ್ರ ಪೆಟ್ರೋಲ್ ಸಿಗುವುದಿಲ್ಲ. ಆದರೆ 2 ರಿಂದ 3 ದಿನಕ್ಕೆ ಆಗುವಷ್ಟು ಪೆಟ್ರೋಲ್ ಪ್ರತಿ ಪೆಟ್ರೋಲ್ ಬಂಕ್‌ಗಳಲ್ಲಿ ಇರುತ್ತದೆ ಎಂದು ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಹೇಳಿದೆ.
Petrol - Diesel Price Today: ರಾಜ್ಯದ ಈ ಎಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ!
ಕೇಂದ್ರ ಸರ್ಕಾರ ಇತ್ತೀಚೆಗೆ ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸಿತ್ತು. ಆದರೆ ಸುಂಕ ಕಡಿತಕ್ಕೂ ಮೊದಲು ಪೆಟ್ರೋಲ್ ಬಂಕ್ ಮಾಲೀಕರು ತೈಲ ಖರೀದಿಸಿದ್ದರು. ಈ ಪೆಟ್ರೋಲ್ ಡೀಸೆಲ್‌ನ್ನು ಪರಿಷ್ಕೃತ ದರದೊಂದಿಗೆ ನೀಡಲಾಗುತ್ತದೆ. ಇದರಿಂದ ಪ್ರತಿ ಪೆಟ್ರೋಲ್ ಬಂಕ್ ಮಾಲೀಕರಿಗೆ 30ರಿಂದ 40 ಲಕ್ಷ ರೂಪಾಯಿ ನಷ್ಟವಾಗಿದೆ. ಸರ್ಕಾರ ಖರೀದಿಸಿಟ್ಟಿದ್ದ ತೈಲದ ತೆರಿಗೆ ಮರುಪಾಪತಿ ಮಾಡಿಲ್ಲ. ಎರಡು ಬಾರಿ ಕೇಂದ್ರ ಸರ್ಕಾರ ಸುಂಕ ಕಡಿತ ಮಾಡಿದೆ. ಇದುವರೆಗೆ ಪೆಟ್ರೋಲ್ ಬಂಕ್ ಮಾಲೀಕರ ತೆರೆಗೆ ಮರುಪಾವತಿ ಮಾಡಿಲ್ಲ. ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಷ್ಕರ ಅನಿವಾರ್ಯವಾಗಿದೆ ಎಂದು ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಹೇಳಿದೆ
ಬೇಡಿಕೆಗೆ ಅನುಗುಣವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಪೆಟ್ರೋಲ್‌ನ್ನು ಬಿಪಿಸಿಎಲ್ ಹಾಗೂ ಹೆಚ್‌ಪಿಸಿಎಲ್ ಪೂರೈಕೆ ಮಾಡುತ್ತಿಲ್ಲ. 2017ರಿಂದ ಡೀಲರ್ ಕಮಿಷನ್ ಹೆಚ್ಚಿಸುವಂತೆ ಮನವಿ ಮಾಡಲಾಗಿದೆ. ಆದರೆ ಇದುವರೆಗೂ ಯಾವುೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ಎಲ್ಲಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಖಾಸಗಿ ಪೆಟ್ರೋಲ್ ಬಂಕ್‌ಗಳಿಗೆ ಕುತ್ತು, ಈ ರೀತಿ ಆದರೆ ಉದ್ಯಮ ನಡೆಸಲಾಗದು!
ಪೆಟ್ರೋಲ್ ಮೇಲೆ 9.5, ಡೀಸೆಲ್ ಮೇಲೆ 8 ರೂಪಾಯಿ ಇಳಿಕೆ
ಬಹು ವರ್ಷಗಳ ಗರಿಷ್ಠಕ್ಕೇರಿರುವ ಹಣದುಬ್ಬರದಿಂದ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆಮ್ಮದಿ ನೀಡಲು ಕೇಂದ್ರ ಸರ್ಕಾರ, ಪಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಮಹತ್ವದ ಘೋಷಣೆ ಮಾಡಿದೆ. ಪೆಟ್ರೋಲ್ ಮೇಲೆ 8 ರು. ಮತ್ತು ಡೀಸೆಲ್ ಮೇಲೆ 6 ರು. ಅಬಕಾರಿ ಸುಂಕ ಕಡಿತ ಮಾಡಲಾಗಿದೆ. ಇದರಿಂದಾಗಿ, ಇತರ ತೆರಿಗೆ ದರಗಳು ಸೇರಿದಂತೆ ಪೆಟ್ರೋಲ್ ದರವು ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲೀಟರ್‌ಗೆ 9.5 ರು. ಮತ್ತು ಡೀಸೆಲ್ ದರ 7 ರು.ಗಳಷ್ಟುಕಡಿಮೆಯಾಗಲಿದೆ. ಭಾನುವಾರವೇ ಪರಿಷ್ಕೃತ ದರಗಳು ಜಾರಿಗೆ ಬಂದಿವೆ.
ಜೊತೆಗೆ, ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಪಡೆದಿರುವ ಬಡ ಕುಟುಂಬಗಳ ಪ್ರತಿ ಸಿಲಿಂಡರ್‌ಗೆ 200 ರು. ಸಹಾಯಧನ (ಸಬ್ಸಿಡಿ) ಪ್ರಕಟಿಸಲಾಗಿದೆ. ಇದರಿಂದ ಬಡವರಿಗೆ ಇನ್ನು 1003 ರು. ಬದಲು ಸುಮಾರು 803 ರು. ದರದಲ್ಲಿ ಎಲ್‌ಪಿಜಿ ಲಭಿಸಲಿದೆ.
ಶನಿವಾರ ಸಂಜೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರಣಿ ಟ್ವೀಟ್‌ಗಳ ಮೂಲಕ ಈ ಘೋಷಣೆಗಳನ್ನು ಮಾಡಿದ್ದು, ‘ಯುದ್ಧ, ಹಣದುಬ್ಬರಂಥ ಸವಾಲಿನ ಸ್ಥಿತಿಯಲ್ಲೂ ನಮ್ಮ ಸರ್ಕಾರ ಜನಪರ ನಿರ್ಣಯಗಳನ್ನು ಕೈಗೊಂಡಿದೆ. ಕಳೆದ ಬಾರಿ ತೆರಿಗೆ ಕಡಿತ ಮಾಡದ ರಾಜ್ಯಗಳು ಈ ಬಾರಿ ತೆರಿಗೆ ಕಡಿತ ಮಾಡುವ ಮೂಲಕ ಜನರಿಗೆ ನೆರವಾಗ ಬೇಕು’ ಎಂದಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು, ‘ನಮಗೆ ಜನಹಿತವೇ ಮೊದಲು. ನಮ್ಮ ನಿರ್ಧಾರದಿಂದ ಜನರ ಜೀವನ ಸುಲಭಗೊಳಿಸಲಿವೆ’ ಎಂದು ಬಣ್ಣಿಸಿದ್ದಾರೆ.
