ಮತ್ತೆ ಪೆಟ್ರೋಲ್ ದರದಲ್ಲಿ ಇಳಿಕೆ! ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ! ದೇಶದ ಮಹಾನಗರಗಳಲ್ಲಿ ಇಳಿದ ಪೆಟ್ರೋಲದ ದರ! ನವದೆಹಲಿಯಲ್ಲಿ 18 ಪೈಸೆ ಮತ್ತು ಮುಂಬೈನಲ್ಲಿ 16 ಪೈಸೆ ಇಳಿಕೆ

ನವದೆಹಲಿ(ನ.1): ಸತತ 13 ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ತೈಲದರ ನಿನ್ನೆ ಯಾವುದೇ ಬದಲಾವಣೆ ಕಾಣದೇ ತಟಸ್ಥವಾಗಿತ್ತು. ಆದರೆ ಇಂದು ಮತ್ತೆ ತೈಲದರ ಇಳಿಕೆ ಕಂಡಿದೆ. 

ಇಂದು ಕೇವಲ ಪೆಟ್ರೋಲ್ ದರದಲ್ಲಿ ಮಾತ್ರ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Scroll to load tweet…

ಇಂದು ಪೆಟ್ರೋಲ್ ದರದಲ್ಲಿ 18 ಪೈಸೆಯಷ್ಟು ಇಳಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 79.37 ರೂ. ಆಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರದಲ್ಲಿ 16ಪೈಸೆಯಷ್ಟು ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 84.86 ರೂ. ಆಗಿದೆ.

ಇನ್ನು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಈ ಮೊದಲಿನ ದರವೇ ಇಂದೂ ಕೂಡ ಮುಂದುವರೆಯಲಿದೆ ಎಂದು ದೇಶದ ಪ್ರಮುಖ ತೈಲ ಕಂಪನಿಗಳು ತಿಳಿಸಿವೆ.