ಕಚ್ಚಾ ತೈಲದರ ಇಳಿಯದಿದ್ದರೂ ಇಳಿದ ಪೆಟ್ರೋಲ್ ಬೆಲೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಸ್ಥಿರ| ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
ನವದೆಹಲಿ(ಡಿ.24): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಇಳಿಕೆಯಾದಾಗ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರಗಳಲ್ಲಿ ಇಳಿಕೆಯಾಗುವುದು ಸಾಮಾನ್ಯ.
ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರದಲ್ಲಿ ಇಳಿಕೆಯಾಗದಿದ್ದರೂ ಇಂದು ದೇಶದ ಮಹಾನಗರಗಳಲ್ಲಿ ತೈಲದರಗಳಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.
ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರಗಳತ್ತ ಗಮನ ಹರಿಸುವುದಾದರೆ..
ರಾಷ್ಟ್ರ ರಾಜಧಾನಿ ನವದೆಹಲಿ-
ಪೆಟ್ರೋಲ್-69.86 ರೂ. (21 ಪೈಸೆ ಇಳಿಕೆ)
ಡೀಸೆಲ್-63.83 ರೂ. (18 ಪೈಸೆ ಇಳಿಕೆ)
ವಾಣಿಜ್ಯ ರಾಜಧಾನಿ ಮುಂಬೈ-
ಪೆಟ್ರೋಲ್-75.45 ರೂ. (21 ಪೈಸೆ ಇಳಿಕೆ)
ಡೀಸೆಲ್-66.76 ರೂ. (19 ಪೈಸೆ ಇಳಿಕೆ)
ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-
ಪೆಟ್ರೋಲ್-66.76 ರೂ. (19 ಪೈಸೆ ಇಳಿಕೆ)
ಡೀಸೆಲ್-65.56 ರೂ. (18 ಪೈಸೆ ಇಳಿಕೆ)
ತಮಿಳುನಾಡು ರಾಜಧಾನಿ ಚೆನ್ನೈ-
ಪೆಟ್ರೋಲ್-72.45 ರೂ.(21 ಪೈಸೆ ಇಳಿಕೆ)
ಡೀಸೆಲ್-67.35 ರೂ.(19 ಪೈಸೆ ಇಳಿಕೆ)
ರಾಜ್ಯ ರಾಜಧಾನಿ ಬೆಂಗಳೂರು-
ಪೆಟ್ರೋಲ್-70.39 ರೂ. (21 ಪೈಸೆ ಇಳಿಕೆ)
ಡೀಸೆಲ್-64.15 ರೂ. (18 ಪೈಸೆ ಇಳಿಕೆ)
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಇಂದಿನ ಬೆಲೆ 3,243 ರೂ ಆಗಿದೆ.
