* ರಾಜ್ಯದಲ್ಲಿ 110 ರೂ ಗಡಿ ದಾಟಿದ ಪೆಟ್ರೋಲ್‌* ಶಿರಸಿಯಲ್ಲಿ ಪೆಟ್ರೋಲ್‌ ಬೆಲೆ ಲೀ.ಗೆ 110.33 ರೂ* ರಾಜ್ಯದ ಇನ್ನೂ 4 ಕಡೆ 100 ರೂ ದಾಟಿದ ಡೀಸೆಲ್‌

ಬೆಂಗಳೂರು(ಅ.10): ನಾಲ್ಕು ತಿಂಗಳ ಹಿಂದಷ್ಟೇ ರಾಜ್ಯದಲ್ಲಿ(karnataka) ಲೀಟರ್‌ಗೆ 100 ರು. ಗಡಿ ದಾಟಿದ್ದ ಪೆಟ್ರೋಲ್‌(Petrol) ಇದೀಗ 110 ರು. ಗಡಿ ದಾಟಿ ವಾಹನ ಸವಾರರ ಜೇಬಿಗೆ ಬಿಸಿ ಮುಟ್ಟಿಸಿದೆ. ರಾಜ್ಯದಲ್ಲಿ ಮೊದಲ ಬಾರಿ ಉತ್ತರ ಕನ್ನಡದ ಶಿರಸಿಯಲ್ಲಿ(Sirsi, Uttara Kannada) ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ 110.33 ರು. ಆಗಿದೆ. ಇದೇ ವೇಳೆ, ರಾಜ್ಯದ ಇನ್ನೂ 4 ಕಡೆ ಡೀಸೆಲ್‌(Diesel) ಬೆಲೆ 100 ರು. ಗಡಿ ದಾಟಿದೆ.

ಸತತ 7ನೇ ದಿನವೂ ಸೋಮವಾರ ದೇಶದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 35 ಪೈಸೆ ಏರಿಕೆಯಾಗಿದೆ. ಅದರ ಪರಿಣಾಮ ರಾಜ್ಯದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 31 ಪೈಸೆ ಮತ್ತು ಡೀಸ್‌ಲ್‌ಗೆ 37 ಪೈಸೆ ಏರಿಕೆಯಾಗಿದೆ. ಒಟ್ಟಾರೆ ಕಳೆದ 11 ದಿನಗಳಲ್ಲಿ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ .3.15 ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ .3.81ರವರೆಗೆ ಹೆಚ್ಚಳವಾಗಿದೆ.

ಇದರ ಪರಿಣಾಮ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ರಾಜ್ಯದಲ್ಲಿ ಮೊದಲ ಬಾರಿ ಶತಕ ಬಾರಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲೇ ಪೆಟ್ರೋಲ್‌ ಬೆಲೆ ಮೊದಲ ಬಾರಿ 110 ರು. ಗಡಿ ದಾಟಿದ್ದು, ಸೋಮವಾರ 110.33 ದಾಖಲಾಗಿದೆ. ಇದೇ ವೇಳೆ ಅಲ್ಲಿ ಡೀಸೆಲ್‌ ಬೆಲೆ .100.86ಕ್ಕೆ ಏರಿಕೆಯಾಗಿದೆ. ಹೀಗಾಗಿ ಒಟ್ಟಾರೆ ಕಳೆದ ಮೂರು ದಿನಗಳಲ್ಲಿ 9 ಕಡೆ ಡೀಸೆಲ್‌ ದರ 100 ರು. ದಾಟಿದಂತಾಗಿದೆ. ಇನ್ನುಳಿದಂತೆ ಕಾರವಾರದಲ್ಲಿ ಲೀಟರ್‌ ಪೆಟ್ರೋಲ್‌ಗೆ .109.92, ದಾವಣಗೆರೆ .109.89, ಬಳ್ಳಾರಿ .109.83, ಚಿಕ್ಕಮಗಳೂರಲ್ಲಿ .109.76 ಇದ್ದು, ಶೀಘ್ರದಲ್ಲೇ 110 ರು.ನ ಗಡಿ ದಾಟುವ ಸಂಭವವಿದೆ.

ಇನ್ನು ಈಗಾಗಲೇ ಶಿರಸಿ, ಬಳ್ಳಾರಿ, ವಿಜಯನಗರ, ಕಾರವಾರ, ದಾವಣಗೆರೆಗಳಲ್ಲಿ ಲೀಟರ್‌ಗೆ ನೂರರ ಗಡಿ ದಾಟಿರುವ ಡೀಸೆಲ್‌ ಬೆಲೆ ಸೋಮವಾರ ಚಿತ್ರದುರ್ಗ (.100.34), ಶಿವಮೊಗ ್ಗ(.100.42), ಚಿಕ್ಕಮಗಳೂರು (.100.33) ಮತ್ತು ಕೊಪ್ಪಳ (100.01)ಗಳಲ್ಲಿ ನೂರರ ಗಡಿ ದಾಟಿದೆ. ಇನ್ನು ಯಾದಗಿರಿಯಲ್ಲಿ ಪ್ರತಿ ಲೀಟರ್‌ಗೆ .99.36, ಬೀದರ್‌ .99.73, ತುಮಕೂರು .99.40, ರಾಮನಗರ .99.06 ಇದ್ದು, ಇದೇ ರೀತಿ ತೈಲ ಬೆಲೆ ಏರಿಕೆಯಾದರೆ ಒಂದೆರಡು ದಿನಗಳಲ್ಲಿ 100ರ ಗಡಿ ದಾಟುವುದು ನಿಶ್ಚಿತವಾಗಿದೆ.