ಕಳೆದ ಐದು ದಿನಗಳಿಂದ ಏರಿಕೆ ಗತಿಯಲ್ಲಿ ಸಾಗುತ್ತಿದ್ದ ಪೆಟ್ರೋಲ್ ಡೀಸೆಲ್ ದರ ಇದೀಗ 6ನೇ ದಿನವೂ ಕೂಡ ಇಳಿದಿದೆ. 

ನವದೆಹಲಿ : ನಿರಂತರವಾಗಿ ಏರಿಕೆಯತ್ತ ಸಾಗಿದ್ದ ಪೆಟ್ರೋಲ್, ಡೀಸೆಲ್ ದರ ಇದೀಗ ನಿರಂತರವಾಗಿ ಇಳಿಕೆಯಾಗುತ್ತಿದೆ. 5 ದಿನಗಳಿಂದ ನಿರಂತರವಾಗಿ ಇಳಿದ ಪೆಟ್ರೋಲ್ ದರದಲ್ಲಿ 6ನೇ ದಿನವೂ ಕೂಡ ಇಳಿದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಿಂದ ಗ್ರಾಹಕರಿಗೆ ಮತ್ತಷ್ಟು ರಿಲೀಫ್ ದೊರಕಿದಂತಾಗಿದೆ. ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದ ಮೇಲೆ 10 ಪೈಸೆಯಷ್ಟು ಇಳಿಕೆಯಾಗಿದ್ದು ಇದರಿಂದ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 81.34 ರು.ನಷ್ಟಾಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ದರವು 10 ಪೈಸೆ ಇಳಿಕೆ ಬಳಿಕ 86.81 ರು.ಗಳಾಗಿದೆ. 

ಇನ್ನು ಡೀಸೆಲ್ ದರದ ಮೇಲೆ 8 ಪೈಸೆಯಷ್ಟು ಇಳಿಕೆಯಾಗಿದ್ದು ಇದರಿಂದ ಪ್ರತೀ ಲೀಟರ್ ಡೀಸೆಲ್ ಬೆಲೆ ದಿಲ್ಲಿಯಲ್ಲಿ 74.85 ರು.ಗಳಾಗಿದ್ದು, ಮುಂಬೈನಲ್ಲಿ 78.46 ರಷ್ಟಾಗಿದೆ. 

ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದ ದರವು ಇದೀಗ ಇಳಿಮುಖವಾಗುತ್ತಿದೆ.