ನವದೆಹಲಿ (ಜೂ.13): ಕಳೆದ ಕೆಲ ದಿನಗಳಿಂದ ಇಳಿಯುತ್ತಿರುವ ಪೆಟ್ರೋಲ್ ಡೀಸೆಲ್ ದರದಲ್ಲಿ ಮತ್ತಷ್ಟು ಕುಸಿತ ಕಂಡು ಬಂದಿದೆ. 

ಗುರುವಾರ  ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ 7 ರಿಂದ 9 ಪೈಸೆಯಷ್ಟು  ಇಳಿದಿದೆ. 

ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದ ಮೇಲೆ 8 ಪೈಸೆ ಇಳಿದಿದ್ದು, 70.35ರಷ್ಟಾಗಿದೆ. ಡೀಸೆಲ್ ದರ 6 ಪೈಸೆ ಇಳಿದು, 64.33ರು.ನಷ್ಟಾಗಿದೆ. 

ಮೋದಿ ಹೊಸ ನೀತಿ -ಪೆಟ್ರೋಲ್ ಡೀಸಲ್ ಆಗಲ್ಲ, ಟ್ಯಾಕ್ಸಿ‌ಗೆ ಎಲೆಕ್ಟ್ರಿಕ್ ಕಾರು ಕಡ್ಡಾಯ!
 
ಇನ್ನು ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದ ಮೇಲೆ 8 ಪೈಸೆ ಇಳಿದಿದ್ದು, 76.04ರು.ನಷ್ಟಾಗಿದೆ. ಡೀಸೆಲ್ ದರ 6 ಪೈಸೆ ಇಳಿದಿದ್ದು, 66. 25 ರು.ನಷ್ಟಾಗಿದೆ. 

ಶೀಘ್ರದಲ್ಲೇ ಪೆಟ್ರೋಲ್ ಮಾರುತಿ ಬ್ರೆಜಾ ಬಿಡುಗಡೆ- ಡೀಸೆಲ್ ಕಾರಿಗಿಂತ ಕಡಿಮೆ ಬೆಲೆ!

ನಿರಂತರ ಪೆಟ್ರೋಲ್, ಡೀಸೆಲ್ ದರದಲ್ಲಿನ ಇಳಿಕೆ ವಾಹನ ಸವಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.