ನವದೆಹಲಿ, (ಜೂನ್.07): ದೇಶದ ಪ್ರಮುಖ ನಗರಗಳಲ್ಲಿ ಇಂದು (ಭಾನುವಾರ) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ಪೆಟ್ರೋಲ್ ಲೀಟರ್‌ಗೆ 12 ರಿಂದ 14 ಪೈಸೆ ಕಡಿಮೆಯಾಗಿದ್ದರೆ, ಡೀಸೆಲ್‌ ಪ್ರತಿ ಲೀಟರ್‌ಗೆ 32ರಿಂದ 34 ಪೈಸೆ ಕಡಿಮೆಯಾಗಿದೆ.

ಬೆಂಗಳೂರಿನಲ್ಲೂ ಸಹ ಇಂಧನ ಬೆಲೆ ಇಳಿಕೆಯಾಗಿದ್ದು, ನಿನ್ನೆಗೆ ಅಂದರೆ ಶನಿವಾರಕ್ಕೆ ಹೋಲಿಸಿದರೆ ಇಂದು (ಭಾನುವಾರ) 16 ಪೈಸೆ ಕಡಿಮೆಯಾಗಿದೆ.

ಪೆಟ್ರೋಲ್‌ ಲೀಟರ್‌ಗೆ 17 ಪೈಸೆ ಕಡಿಮೆಯಾಗಿದೆ. ಈ ಮೂಲಕ ಪೆಟ್ರೋಲ್ ಲೀಟರ್‌ಗೆ 72.94 ರು.ರಷ್ಟಿದ್ದರೆ, ಡೀಸೆಲ್‌ ಪ್ರತಿ ಲೀಟರ್‌ ಡೀಸೆಲ್‌ಗೆ 66.67ರು.ಗಳಷ್ಟಿದೆ.

ಮುಂಬೈ:  ಪೆಟ್ರೋಲ್‌ ಲೀ.ಗೆ 16 ಪೈಸೆ ಕಡಿಮೆಯಾಗಿ 76.25 ರು.ಗೆ ಮಾರಾಟವಾಗುತ್ತಿದೆ. ಡೀಸೆಲ್‌ ಬೆಲೆಯಲ್ಲಿ 16 ಪೈಸೆ ಕಡಿಮೆಯಾಗಿ 67.63 ರು. ಗಳಷ್ಟಿದೆ. 

ನವದೆಹಲಿ:  ಪೆಟ್ರೋಲ್‌ 16 ಪೈಸೆಯೊಂದಿಗೆ 70.56 ರೂ.ಗೆ ಮಾರಾಟವಾಗುತ್ತಿದ್ದರೆ, ಡೀಸೆಲ್‌ ಲೀ.ಗೆ 15 ಪೈಸೆ ಇಳಿಕೆ ಕಂಡಿದ್ದು, 64.50 ರು. ಇದೆ.

ತಮಿಳುನಾಡು:  ಚೆನ್ನೈ ನಲ್ಲಿ ಪೈಸೆ 17 ಲೀ. ಪೆಟ್ರೋಲ್‌ಗೆ ಕಡಿಮೆಯಾಗಿದ್ದು, 73.31 ರು. ಇದೆ. ಡೀಸೆಲ್‌ಗೆ 16 ಪೈಸೆ ಕಡಿಮೆಯಾಗಿ 68.24 ರು.ಗೆ ದೊರಕುತ್ತಿದೆ

ಕೋಲ್ಕತಾ:   ಪೆಟ್ರೋಲ್‌ 16 ಪೈಸೆ ಕಡಿಮೆಯಾಗಿದ್ದು, ಲೀಟರ್‌ಗೆ 72.81 ರು. ಇದೆ. ಡೀಸೆಲ್‌ ಲೀಟರ್‌ಗೆ 15 ಪೈಸೆ ಕಡಿಮೆಯಾಗಿ 66.42 ರೂ.ಗಳಿಗೆ ಮಾರಾಟವಾಗುತ್ತಿದೆ.