ಸತತ ಮೂರನೇ ದಿನವೂ ಇಳಿಕೆಯಾದ ತೈಲದರ! ಹಬ್ಬದ ಸಂದರ್ಭದಲ್ಲಿ ಜನತೆಗೆ ನೆಮ್ಮದಿ ತಂದ ಬೆಲೆ ಇಳಿಕೆ! ಹಬ್ಬದ ನಿಮಿತ್ತ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ! ದೇಶದ ಮಹಾನಗರಗಳಲ್ಲಿ ಗಮನಾರ್ಹ ಇಳಿಕೆ ಕಂಡ ತೈಲ ಬೆಲೆ
ನವದೆಹಲಿ(ಅ.20): ಹಬ್ಬದ ನಿಮಿತ್ತ ಸತತ ಮೂರನೇ ದಿನವೂ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು, ದೇಶದ ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.
ದಸರಾ ಹಬ್ಬದ ಪ್ರಯುಕ್ತ ಸತತ ಎರಡು ದಿನಗಳಿಂದ ತೈಲ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಮೂರನೇ ದಿನವಾದ ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಲಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 81.99 ರೂ. ಹಾಗೂ ಡೀಸೆಲ್ ಬೆಲೆ 75.36 ರೂ ಆಗಿದೆ. ಅದರಂತೆ ಮುಂಬೈನಲ್ಲಿ ಪೆಟ್ರೋಲ್ ಬೆಲೆ 87.46 ರೂ. ಹಾಗೂ ಡೀಸೆಲ್ ಬೆಲೆ 79.00 ರೂ. ಆಗಿದೆ.
ಇನ್ನು ಪ.ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 83.83 ರೂ. ಹಾಗೂ ಡೀಸೆಲ್ ಬೆಲೆ 77.21 ರೂ. ಆಗಿದೆ. ಇನ್ನು ದಕ್ಷಿಣದ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 85.22 ರೂ. ಹಾಗೂ ಡೀಸೆಲ್ ಬೆಲೆ 79.69 ರೂ. ಆಗಿದೆ.
ಇದೇ ವೇಳೆ ಇನ್ನೂ ಕೆಲವು ದಿನಗಳವರೆಗೆ ತೈಲದರಲ್ಗಳು ಇಳಿಕೆ ಕಾಣಲಿವೆ ಎಂದು ಮೂಲಗಳು ತಿಳಿಸಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಂತರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ನಿತ್ಯವೂ ತೈಲದರಗಳನ್ನು ನಿರ್ಧರಿಸುತ್ತಿವೆ ಎನ್ನಲಾಗಿದೆ.
