ನವದೆಹಲಿ[ಮಾ.16]: ಜಾಗತಿಕ ತೈಲ ದರ ಇಳಿಯುತ್ತಿದ್ದಂತೆಯೇ ದೇಶದಲ್ಲಿ ಪೆಟ್ರೋಲ್‌ ದರ ಭಾನುವಾರ ಲೀಟರ್‌ಗೆ 12 ಪೈಸೆ ಹಾಗೂ ಡೀಸೆಲ್‌ ಬೆಲೆ 15 ಪೈಸೆ ಇಳಿದಿದೆ.

ಭಾನುವಾರ ಪೆಟ್ರೋಲ್‌ ಬೆಲೆ ಬೆಂಗಳೂರಿನಲ್ಲಿ ಲೀಟರ್‌ಗೆ 72.14 ರು. ಇದ್ದರೆ, ದಿಲ್ಲಿಯಲ್ಲಿ 69.75 ರು. ಇತ್ತು. ಇನ್ನು ಡೀಸೆಲ್‌ ಬೆಲೆ ಕ್ರಮವಾಗಿ ಈ ಊರುಗಳಲ್ಲಿ 64.57 ಹಾಗೂ 62.44 ರು. ಇತ್ತು. ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳು ಸತತ 4 ದಿನಗಳಿಂದ ಇಳಿಮುಖವಾಗಿವೆ.

ಮಾರ್ಚ್ 12ರಿಂದ 15ರವರೆಗೆ ಪೆಟ್ರೋಲ್‌ ಬೆಲೆ 56 ಪೈಸೆ, ಡೀಸೆಲ್‌ ಬೆಲೆ 59 ಪೈಸೆ ಇಳಿದಿದೆ. ದರ ಇನ್ನೂ ಹೆಚ್ಚು ಇಳಿಯಬಹುದಿತ್ತು. ಆದರೆ ಅಬಕಾರಿ ಸುಂಕವನ್ನು ಲೀಟರ್‌ಗೆ 3 ರು.ನಷ್ಟುಏರಿಸಿದ್ದರಿಂದ ದರ ಇಳಿಕೆಯ ಪ್ರಮಾಣ ಕಡಿಮೆಯಾಗಿದೆ.