ದೇಶದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಸೌದಿ ಅರೇಬಿಯಾ ನೇತೃತ್ವದಲ್ಲಿರುವ 23 ಒಪೆಕ್‌ ರಾಷ್ಟ್ರಗಳನ್ನ ತೈಲ ಉತ್ಪಾದನೆಯನ್ನು ಕಡಿತ ಮಾಡುವ ನಿರ್ಧಾರ ಮಾಡಿದ್ದು ಇದು ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 

ನವದೆಹಲಿ (ಏ.5): ದೇಶದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆಯಲ್ಲಿ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಸೌದಿ ಅರೇಬಿಯಾದೊಂದಿಗೆ ಕಚ್ಚಾ ತೈಲ ಉತ್ಪಾದನೆ ಮಾಡಲಿರುವ 23 ರಾಷ್ಟ್ರಗಳನ್ನು ತೈಲ ಉತ್ಪಾದನೆಯನ್ನು ಕಡಿತ ಮಾಡುವ ಪ್ರಮುಖ ನಿರ್ಧಾರ ಮಾಡಿದೆ. ಈ ಎಲ್ಲಾ ದೇಶಗಳು ಒಟ್ಟಾರೆಯಾಗಿ ಒಂದೇ ದಿನದಲ್ಲಿ 190 ಮಿಲಿಯನ್‌ ಲೀಟರ್‌ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ. ಓ ಕಾರಣದಿಂದಾಗಿ ತೈಲ ಬೆಲೆಯಲ್ಲಿ ಪ್ರತಿ ಬ್ಯಾರಲ್‌ಗೆ 10 ಡಾಲರ್‌ನಷ್ಟು ಹೆಚ್ಚಾಗಬಹುದು. ಇದು ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಸೌದಿ ಅರೇಬಿಯಾ ಹಾಗೂ ಇರಾನ್‌ ನೇತೃತ್ವದ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್‌) ಒಂದು ದಿನಕ್ಕೆ 11.65 ಲಕ್ಷ ಬ್ಯಾರಲ್‌ ತೈಲ ಉತ್ಪಾದನೆಯನ್ನು ಕಡಿತ ಮಾಡುವ ನಿರ್ಧಾರ ಮಾಡಿದೆ. ಸೌದಿ ಅರೇಬಿಯಾ ಮಾತ್ರ ಕಳೆದ ವರ್ಷಕ್ಕಿಂತ 5% ಕಡಿಮೆ ತೈಲವನ್ನು ಉತ್ಪಾದಿಸುತ್ತದೆ. ಅಂತೆಯೇ, ಇರಾಕ್ ಪ್ರತಿದಿನ ಸುಮಾರು 2 ಲಕ್ಷ ಬ್ಯಾರೆಲ್ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವ ಬಗ್ಗೆ ನಿರ್ಧಾರ ಮಾಡಿದೆ.

ಈ ನಿರ್ಧಾರಕ್ಕೆ ಕಾರಣವನ್ನು ವಿವರಿಸಿದ ಸೌದಿ ಅರೇಬಿಯಾದ ಇಂಧನ ಸಚಿವಾಲಯ, ತೈಲವನ್ನು ಉತ್ಪಾದಿಸುವ ಒಪೆಕ್ ಮತ್ತು ಒಪೆಕ್ ಅಲ್ಲದ ದೇಶಗಳು ಜಂಟಿಯಾಗಿ ಈ ಕಡಿತವನ್ನು ಮಾಡಲಿವೆ ಎಂದು ಹೇಳಿದೆ. ವಿಶ್ವದಾದ್ಯಂತ ತೈಲ ಮಾರುಕಟ್ಟೆಯನ್ನು ಬಲಪಡಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆಯಾಗಲು ಪ್ರಾರಂಭಿಸಿದಾಗ, ಈ ದೇಶಗಳು ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಬೆಲೆಯನ್ನು ಹೆಚ್ಚಿಸುವ ಕ್ರಮ ಕೈಗೊಳ್ಳುತ್ತದೆ.

ಉತ್ಪಾದನೆ ಕಡಿಮೆ ಮಾಡುವ ಮೂಲಕ ಬೆಲೆ ಏರಿಸುವ ಪ್ರಯತ್ನ:2020ರ ಜನವರಿಯಲ್ಲಿ ಅಮೆರಿಕದಲ್ಲಿ ಕಚ್ಚಾ ತೈಲದ ಉತ್ಪಾದನೆ ಪ್ರತಿ ದಿನ 12.8 ಮಿಲಿಯನ್‌ ಬ್ಯಾರಲ್‌ಗೆ ಏರಿಕೆಯಾಗಿತ್ತು. ಇದರ ನಡುವೆ ಬಂದ ಕೊರೋನಾವೈರಸ್‌ ಕಾರಣದಿಂದಾಗಿ, ಜಗತ್ತಿನಾದ್ಯಂತ ಇಂಧನದ ಬೇಡಿಕೆ ತೀವ್ರವಾಗಿ ಕಡಿಮೆ ಆಗಿದ್ದವು. ಇದರ ಬೆನ್ನಲ್ಲಿಯೇ ತೈಲ ಉತ್ಪಾದನೆಯನ್ನೂ ಒಪೆಕ್‌ ರಾಷ್ಟ್ರಗಳು ಕಡಿಮೆ ಮಾಡಿದ್ದವು. ಇದರ ಪರಿಣಾಮ ನೇರವಾಗಿ ಕಚ್ಚಾ ತೈಲದ ಬೆಲೆಯ ಮೇಲೆ ಆಗಿತ್ತು. ಸೌದಿ ಅರೇಬಿಯಾ, ಇರಾಕ್ ಮತ್ತು ಅಮೆರಿಕದಲ್ಲಿನ ಅನೇಕ ತೈಲ ನಿರ್ವಾಹಕರು ನಷ್ಟವನ್ನು ಕಡಿಮೆ ಮಾಡಲು ತಮ್ಮ ತೈಲ ಬಾವಿಗಳನ್ನು ಮುಚ್ಚುವ ನಿರ್ಧಾರ ಮಾಡಿದ್ದರು. ತೈಲ ಉತ್ಪಾದನೆಯಲ್ಲಿ ಈ ಕಡಿತದ ನಂತರ, ತೈಲ ಬೆಲೆ ಮತ್ತೊಮ್ಮೆ ಏರಿಕೆ ಕಂಡಿತ್ತು.

Brent Crude Futures: ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗೋ ಸಾದ್ಯತೆ

ಪ್ರತಿ ಬ್ಯಾರಲ್‌ಗೆ 850 ರೂಪಾಯಿ ಏರಿಕೆ: ಒಪೆಕ್‌+ ದೇಶಗಳ ಈ ನಿರ್ಧಾರದ ನಂತರ, ಪ್ರಪಂಚದಾದ್ಯಂತ ತೈಲ ಬೆಲೆ ಹೆಚ್ಚಳಕ್ಕೆ ದಾರಿ ಸುಗಮವಾಗಿದೆ. ವಿಶ್ವದ ಎರಡು ದೊಡ್ಡ ಸಂಸ್ಥೆಗಳು ಮತ್ತು ತಜ್ಞರು ಬೆಲೆಗೆ ಸಂಬಂಧಿಸಿದಂತೆ ತಮ್ಮ ಅಂದಾಜು ನೀಡಿದ್ದಾರೆ. ಹೂಡಿಕೆ ಸಂಸ್ಥೆ ಪಿಕರಿಂಗ್ ಎನರ್ಜಿ ಪಾರ್ಟ್‌ನರ್ಸ್ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 10 ಡಾಲರ್ ಅಂದರೆ 850 ರೂ.ಗಳಷ್ಟು ಹೆಚ್ಚಾಗಬಹುದು ಎಂದು ತಿಳಿಸಿದೆ. ಇದೇ ರೀತಿ ತೈಲ ಉತ್ಪಾದನೆ ಕಡಿಮೆಯಾದರೆ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗಬಹುದು. ಒಪೆಕ್‌+ ರಾಷ್ಟ್ರಗಳ ಈ ನಿರ್ಧಾರದ ನಂತರವೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $86 ತಲುಪಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಹೇಳಿದೆ. ಇದು ಕಳೆದ ಒಂದು ತಿಂಗಳಲ್ಲೇ ಗರಿಷ್ಠ ದರವಾಗಿದೆ. ಡಿಸೆಂಬರ್ 2023 ರ ಹೊತ್ತಿಗೆ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $ 95 ಕ್ಕಿಂತ ಹೆಚ್ಚಾಗಿತ್ತು.

War For Oil: ಬಲಾಢ್ಯ ದೇಶಗಳು ವರ್ಸಸ್‌ ಕೊಲ್ಲಿ ರಾಷ್ಟ್ರಗಳ ತೈಲಸಮರ!

2022ರ ಏಪ್ರಿಲ್‌ ಹಾಗೂ ಡಿಸೆಂಬರ್‌ ನಡುವೆ ಭಾರತ ಒಟ್ಟಾರೆ 1.27 ಬಿಲಿಯನ್‌ ಬ್ಯಾರಲ್‌ ಕಚ್ಚಾ ತೈಲವನ್ನು ಭಾರತ ಖರೀದಿ ಮಾಡಿತ್ತು. ಇದರಲ್ಲಿ ಕೇವಲ ಶೇ. 19ರಷ್ಟು ತೈಲವನ್ನು ಮಾತ್ರವೇ ಭಾರತ ರಷ್ಯಾದಿಂದ ಖರೀದಿ ಮಾಡಿದೆ. . ಈ 9 ತಿಂಗಳಲ್ಲಿ ಭಾರತವು ತೈಲ ಆಮದು ಮಾಡಿಕೊಳ್ಳುವಲ್ಲಿ ಸೌದಿ ಅರೇಬಿಯಾ ಮತ್ತು ಇರಾಕ್‌ಗಿಂತ ಹೆಚ್ಚು ತೈಲವನ್ನು ರಷ್ಯಾದಿಂದ ಖರೀದಿಸಿದೆ. ಇದರಿಂದಾಗಿ, ಭಾರತವು ಪ್ರತಿ ಬ್ಯಾರೆಲ್‌ಗೆ $ 2 ವರೆಗೆ ಉಳಿಸಿದೆ. ಒಪೆಕ್+ ರಾಷ್ಟ್ರಗಳ ಈ ನಿರ್ಧಾರ ಭಾರತದ ಮೇಲೂ ಖಂಡಿತವಾಗಿಯೂ ಪರಿಣಾಮ ಬೀರಲಿದೆ ಎನ್ನುತ್ತಾರೆ ತಜ್ಞ ನರೇಂದ್ರ ತನೇಜಾ. ಈ ಗುಂಪಿನಲ್ಲಿ ರಷ್ಯಾ ಕೂಡ ಸೇರಿರುವುದು ಇದಕ್ಕೆ ಕಾರಣ. ತೈಲ ಉತ್ಪಾದನೆಯಲ್ಲಿನ ಇಳಿಕೆಯಿಂದಾಗಿ, ಕಚ್ಚಾ ತೈಲದ ಬೆಲೆ ವಿಶ್ವಾದ್ಯಂತ ಹೆಚ್ಚಾಗುವ ಸಂದರ್ಭದಲ್ಲಿ. ಅಂತಹ ಪರಿಸ್ಥಿತಿಯಲ್ಲಿ, ರಿಯಾಯಿತಿ ಬೆಲೆಯಲ್ಲಿ ರಷ್ಯಾದಿಂದ ಪಡೆಯುತ್ತಿರುವ ತೈಲದ ಬೆಲೆಯೂ ಹೆಚ್ಚಾಗುತ್ತದೆ.