Asianet Suvarna News Asianet Suvarna News

ಕಚ್ಚಾ ತೈಲದ ಬೆಲೆ ಇಳಿದರೂ ಇಳಿ​ಯದ ಪೆಟ್ರೋಲ್‌, ಡೀಸೆಲ್‌ ಬೆಲೆ

ಅಂತಾರಾಷ್ಟ್ರೀಯವಾಗಿ ಕಚ್ಚಾತೈಲದ ಬೆಲೆ ಇಳಿಕೆಯಾದರೂ ಸಹ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳ ಇಳಿ​ಕೆ ಮತ್ತಷ್ಟು ವಿಳಂಬವಾಗಲಿದೆ. ತೈಲ ಕಂಪ​ನಿ​ಗ​ಳು ಕಳೆದ ವರ್ಷದ ನಷ್ಟ ತುಂಬಿಕೊಳ್ಳುವವರೆಗೂ ಬೆಲೆ ಇಳಿಕೆಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Petrol and diesel prices have not come down despite the fall in crude oil prices akb
Author
First Published Jun 11, 2023, 7:26 AM IST

ನವದೆಹಲಿ: ಅಂತಾರಾಷ್ಟ್ರೀಯವಾಗಿ ಕಚ್ಚಾತೈಲದ ಬೆಲೆ ಇಳಿಕೆಯಾದರೂ ಸಹ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳ ಇಳಿ​ಕೆ ಮತ್ತಷ್ಟು ವಿಳಂಬವಾಗಲಿದೆ. ತೈಲ ಕಂಪ​ನಿ​ಗ​ಳು ಕಳೆದ ವರ್ಷದ ನಷ್ಟ ತುಂಬಿಕೊಳ್ಳುವವರೆಗೂ ಬೆಲೆ ಇಳಿಕೆಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ಕಚ್ಚಾ ತೈಲದ (crude oil) ಬೆಲೆ ಬ್ಯಾರೆಲ್‌ 139 ಡಾಲರ್‌ ಇತ್ತು. ಇದೀಗ ಅದು 75ರಿಂದ 76 ಡಾಲರ್‌ಗೆ ಇಳಿಕೆಯಾಗಿದೆ. ಕಚ್ಚಾತೈಲ ಬೆಲೆ ಏರಿದ್ದ ಸಮಯದಲ್ಲಿ ಮಾರಾಟಗಾರರು ಪೆಟ್ರೋಲ್‌ಗೆ ಲೀಟರ್‌ಗೆ 17.4 ಮತ್ತು ಡೀಸೆಲ್‌ಗೆ 27.7 ರು. ನಷ್ಟ ಅನುಭವಿಸಿದ್ದವು.

ಆದರೆ ಕಚ್ಚಾ​ತೈಲ ಬೆಲೆ ಇಳಿ​ಯು​ತ್ತಿ​ದ್ದಂತೆಯೇ ಕಳೆದ ವರ್ಷದ ಅಕ್ಟೋ​ಬರ್‌-ಡಿಸೆಂಬ​ರ್‌ ತ್ರೈಮಾ​ಸಿ​ಕ​ದಲ್ಲಿ ಪೆಟ್ರೋಲ್‌ ಮೇಲೆ ಲೀಟ​ರ್‌ಗೆ 10 ರು. ಲಾಭ​ವನ್ನು ತೈಲ ಕಂಪ​ನಿ​ಗಳು (oil companies) ಗಳಿ​ಸಿ​ದವು. ಆದರೆ ಡೀಸೆಲ್‌ ಮೇಲೆ ಲೀಟ​ರ್‌ಗೆ 6.5 ರು. ನಷ್ಟ ಅನು​ಭ​ವಿ​ಸು​ತ್ತಲೇ ಇದ್ದವು. ನಂತ​ರದ ತ್ರೈಮಾ​ಸಿ​ಕ​ದ​ಲ್ಲಿ ಪೆಟ್ರೋಲ್‌ ಲಾಭ 6.8 ರು.ಗೆ ಕುಸಿ​ದರೆ ಡೀಸೆಲ್‌ ಮೇಲೆ ಲೀಟ​ರ್‌ಗೆ 50 ಪೈಸೆ ಲಾಭ ಮಾಡಿ​ಕೊಂಡ​ವು. ಆ​ದರೆ ಈಗ ಕಚ್ಚಾಬೆಲೆ ಸತ​ವಾಗಿ ಇಳಿ​ಯು​ತ್ತಿ​ದ್ದರೂ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ (Indian Oil Corporation), ಭಾರತ್‌ ಪೆಟ್ರೋಲಿಯಂ ಕಾರ್ಪೋರೇಶನ್‌ ಲಿ. (Bharat Petroleum Corporation Ltd)ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಶನ್‌ ಲಿ. ಸಂಸ್ಥೆಗಳು (Hindustan Petroleum Corporation Ltd) ಸುಮಾರು 1 ವರ್ಷದಿಂದ ದೈನಂದಿನ ಆಧಾರದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪರಿಷ್ಕರಣೆ ಮಾಡಿಲ್ಲ.

ರಷ್ಯಾದಿಂದ ಭಾರತ ದಾಖಲೆಯ ಕಚ್ಚಾ ತೈಲ ಆಮದು

ಇದಕ್ಕೆ ಕಾರಣ ನೀಡಿ​ರುವ ಅಧಿ​ಕಾ​ರಿ​ಗಳು, ‘ಕಳೆದ ವರ್ಷ ಕಚ್ಚಾ ತೈಲದ ಬೆಲೆ ಇಂಧನ ಮಾರಾಟ ಬೆಲೆಗಿಂತ ಹೆಚ್ಚಿದ್ದರೂ ಸಹ ಈ ಸಂಸ್ಥೆಗಳು ಬೆಲೆ ಏರಿಕೆ ಮಾಡಿರಲಿಲ್ಲ. ಹೀಗಾಗಿ ಈಗ ಈ ನಷ್ಟವನ್ನು ತುಂಬಿಕೊಳ್ಳುವ ಸಲುವಾಗಿ ಬೆಲೆ ಪರಿಷ್ಕರಣೆ ಮಾಡಲಾಗುತ್ತಿಲ್ಲ. ಇದರಲ್ಲಿ 3 ಕಂಪನಿಗಳು ಈಗಾಗಲೇ ಪೆಟ್ರೋಲ್‌ ಮಾರಾಟದಲ್ಲಿ ಲಾಭದಲ್ಲಿವೆ. ಆದರೆ ಡೀಸೆ​ಲ್‌ ಮಾರಾ​ಟ​ದ​ಲ್ಲಿ​ ಸಾಕಷ್ಟು ನಷ್ಟ ಅನು​ಭ​ವಿ​ಸಿದ್ದು, ಈಗ ನಷ್ಟವೂ ಇಲ್ಲ, ಲಾಭವೂ ಇಲ್ಲ ಎಂಬ ಸ್ಥಿತಿಗೆ ಬಂದಿವೆ. ಹೀಗಾ​ಗಿ ಈಗಿ​ನ ಲಾಭದ ಹಣ​ವನ್ನು ಡೀಸೆಲ್‌ನ ಹಿಂದಿ​ನ ನಷ್ಟ ತುಂಬಿಕೊಳ್ಳಲು ಬಳಕೆ ಮಾಡಲಾಗುತ್ತಿದೆ. ಬೆಲೆ ಮತ್ತಷ್ಟು ಸ್ಥಿರ​ವಾ​ದರೆ ಮುಂದೆ ಬೆಲೆ ಪರಿ​ಷ್ಕ​ರಣೆ ಮಾಡ​ಬ​ಹುದು ಎಂದಿದ್ದಾ​ರೆ.

ಮುಂದಿನ ತ್ರೈಮಾಸಿಕದಲ್ಲಿ ಪೆಟ್ರೋಲ್ ಬೆಲೆ ಇಳಿಕೆ

ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತ್ರೈಮಾಸಿಕದ ವೇಳೆಗೆ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಯಬಹುದು ಎಂಬ ಸುಳಿವನ್ನು ಕೇಂದ್ರ ಸರ್ಕಾರ (central government)ನೀಡಿದೆ.  ಕಚ್ಚಾ ತೈಲ ದರ ಇದೇ ಸ್ಥಿತಿ ಕಾಯ್ದುಕೊಂಡರೆ ಹಾಗೂತೈಲ ಕಂಪನಿಗಳು ಮುಂದಿನ ದಿನಗಳಲ್ಲಿ ಪೆಟ್ರೋಲ್ ಡಿಸೇಲ್ ಮಾರಾಟದಲ್ಲಿ ಲಾಭ ಮಾಡಿಕೊಂಡರೆ ಆಗ ಕಂಪನಿಗಳು ದರ ಪರಿಶೀಲನೆ ಮಾಡಬಹುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರಿದೀಪ್ ಪುನಿಯಾ ಹೇಳಿದ್ದಾರೆ. 

ಉಕ್ರೇನ್- ರಷ್ಯಾ ಯುದ್ಧ, ಜಾಗತಿಕ ಮಟ್ಟದಲ್ಲಿ ಕೋಲಾಹಲ!

Follow Us:
Download App:
  • android
  • ios