ಸತತ 10ನೇ ದಿನವೂ ಇಳಿಕೆಯಾದ ಪೆಟ್ರೋಲ್, ಡೀಸೆಲ್ ದರ! ದೇಶದ ಮಹಾನಗರಗಳಲ್ಲಿ ಇಳಿಕೆಯತ್ತ ಮುಖ ಮಾಡಿದ ತೈಲದರ! ಸಾರ್ವಜನಿಕರಿಗೆ ನಿರಾಳತೆ ತಂದ ಪೆಟ್ರೋಲ್ ದರ ಇಳಿಕೆ! ಜನತೆಯಲ್ಲಿ ಮತ್ತಷ್ಟು ತೈಲದರ ಇಳಿಕೆಯಾಗುವ ನಿರೀಕ್ಷೆ

ನವದೆಹಲಿ(ಅ.27): ದೇಶದಾದ್ಯಂತ ತೈಲೆ ಬೆಲೆ ಮತ್ತೆ ಇಳಿಕೆಯಾಗಿದ್ದು, ಕಳೆದ ಒಂದು ವಾರದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ರೂ.1.98 ಹಾಗೂ ಡೀಸೆಲ್ 99 ಪೈಸೆ ಇಳಿಕೆಯಾಗಿದೆ.

ರಾಜಧಾನಿ ನವದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 80.45 ರೂ.ಆಗಿದ್ದು, ಡೀಸೆಲ್ ಬೆಲೆ 74.38 ರೂ.ಇದೆ. ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 85.93 ರೂ. ಹಾಗೂ ಡೀಸೆಲ್ 77.969 ರೂ.ಗೆ ಮಾರಾಟವಾಗುತ್ತಿದೆ.

Scroll to load tweet…

ಇನ್ನು ರಾಜ್ಯ ರಾಜಧಾನಿ ಬೆಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 22 ಪೈಸೆ ಇಳಿಕೆಯೊಂದಿಗೆ 81.74 ರೂ.ಇದ್ದು, 11 ಪೈಸೆ ಇಳಿಕೆ ಕಂಡಿರುವ ಡೀಸೆಲ್ 75.19 ರೂ. ಗೆ ಮಾರಾಟವಾಗುತ್ತಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಕೊಂಚ ನಿರಾಳವಾದಂತಾಗಿದೆ. ತೈಲದರ ಇಳಿಸುವ ಕೇಂದ್ರದ ನಿರ್ಧಾರದಿಂದ ಜನ ಸಂತಸಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಇಳಿಕೆಯಾಗುವ ನಿರೀಕ್ಷೆ ಹೊಂದಿದ್ದಾರೆ.