ಕಡಿಮೆ ಬಡ್ಡಿದರದಲ್ಲಿ ಪರ್ಸನಲ್‌ ಲೋನ್‌ ಬೇಕಾ? ಈ ಎಲ್ಲಾ ದಾಖಲೆಗಳನ್ನ ಸರಿಯಾಗಿ ಇರಿಸಿಕೊಳ್ಳಿ!

ಪರ್ಸನಲ್ ಲೋನ್‌ನ ಬಡ್ಡಿ ದರ ಕಡಿಮೆ ಮಾಡಲು ಯಾವ ಡಾಕ್ಯುಮೆಂಟ್‌ಗಳು ಸಹಾಯ ಮಾಡುತ್ತವೆ ಎಂಬುದನ್ನು ತಿಳಿಯಿರಿ.

Personal Loan Interest Rates How Documents Can Secure Lower Rates san

ಬೆಂಗಳೂರು (ಡಿ.28): ಪರ್ಸನಲ್ ಲೋನ್ ತೆಗೆದುಕೊಳ್ಳಲು ಸಿದ್ಧರಿದ್ದೀರಾ? ಸಾಮಾನ್ಯವಾಗಿ ಸಾಲ ಪಡೆಯಲು ಕೆಲವು ಕಂಪನಿಗಳು ಪೂರೈಸಬೇಕಾದ ಅರ್ಹತೆಗಳಿರುತ್ತವೆ. ಪರ್ಸನಲ್ ಲೋನ್‌ನ ಬಡ್ಡಿ ದರ ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆಯಾಗಿರುತ್ತದೆ. ಏಕೆಂದರೆ ವ್ಯಕ್ತಿಯ ಆದಾಯ, ಕ್ರೆಡಿಟ್ ಸ್ಕೋರ್ ಮುಂತಾದ ಹಲವು ಅಂಶಗಳು ಇದಕ್ಕೆ ಮಾನದಂಡಗಳಾಗಿವೆ. ಯಾವ ಡಾಕ್ಯುಮೆಂಟ್‌ಗಳು ನಿಮಗೆ ಬಡ್ಡಿ ದರ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂಬುದನ್ನು ತಿಳಿಯಿರಿ.

ಸ್ಯಾಲರಿ ಸ್ಲಿಪ್‌ಗಳು, ಬ್ಯಾಂಕ್ ಸ್ಟೇಟ್‌ಮೆಂಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮುಂತಾದ ಹಲವು ದಾಖಲೆಗಳನ್ನು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಕೇಳುತ್ತದೆ. ಈ ದಾಖಲೆಗಳು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ತೋರಿಸಿದರೆ, ಬ್ಯಾಂಕ್ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬಹುದು. ಅಂದರೆ, ಒಬ್ಬ ವ್ಯಕ್ತಿಗೆ ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ, ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆಯುವ ಸಾಧ್ಯತೆ ಹೆಚ್ಚು. ಇದಕ್ಕೆ ವಿರುದ್ಧವಾಗಿ, ಕೆಟ್ಟ ಕ್ರೆಡಿಟ್ ಸ್ಕೋರ್ ಇದ್ದರೆ, ಆ ವ್ಯಕ್ತಿಗೆ ಸಾಲ ನೀಡುವುದು ಬ್ಯಾಂಕಿಗೆ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ ಮತ್ತು ಸಾಲದ ಅರ್ಜಿ ತಿರಸ್ಕರಿಸಬಹುದು. ಒಂದು ವೇಳೆ ಸಾಲ ಸಿಕ್ಕಿದರೂ, ಅದು ಹೆಚ್ಚಿನ ಬಡ್ಡಿ ದರದಲ್ಲಿರುತ್ತದೆ. ನೀವು ಸಲ್ಲಿಸುವ ದಾಖಲೆಗಳು ನಿಮಗೆ ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ನೋಡೋಣ. ಗಮನಿಸಬೇಕಾದ ಅಂಶಗಳು ಇವು:

1. ಕ್ರೆಡಿಟ್ ಅರ್ಹತೆ: ಕ್ರೆಡಿಟ್ ಅರ್ಹತೆಯನ್ನು ಪರಿಶೀಲಿಸುವ ದಾಖಲೆಯು ನಿಮ್ಮ ಸಾಲ ಮರುಪಾವತಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ. ಇದನ್ನು ಬ್ಯಾಂಕುಗಳು ಎಚ್ಚರಿಕೆಯಿಂದ ಪರಿಶೀಲಿಸುತ್ತವೆ.

2. ಆರ್ಥಿಕ ಸ್ಥಿರತೆ: ಸ್ಯಾಲರಿ ಸ್ಲಿಪ್‌ಗಳು ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ನಿಮಗೆ ಸ್ಥಿರ ಆದಾಯವಿದೆ ಎಂಬುದಕ್ಕೆ ಪುರಾವೆಗಳಾಗಿವೆ. ಇದರಿಂದ ನೀವು ಕಡಿಮೆ ಅಪಾಯಕಾರಿ ಸಾಲಗ್ರಾಹಿ ಎಂದು ಬ್ಯಾಂಕ್‌ಗೆ ತಿಳಿಯುತ್ತದೆ.

3. ಕ್ರೆಡಿಟ್ ಸ್ಕೋರ್: ಮೊದಲೇ ಹೇಳಿದಂತೆ, ಕ್ರೆಡಿಟ್ ಸ್ಕೋರ್ ಸಾಲ ಪಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಸಹಾಯ ಮಾಡುತ್ತದೆ.

VRS 2.0 ಒಪ್ಪಿಗೆ ನೀಡಿದ BSNL ಮಂಡಳಿ: 19 ಸಾವಿರ ಉದ್ಯೋಗಿಗಳು ಔಟ್‌?

4. ಖಾತರಿದಾರರು: ವೈಯಕ್ತಿಕ ಸಾಲವು ಸುರಕ್ಷಿತವಲ್ಲದ ಸಾಲವಾಗಿದ್ದರೂ, ಖಾತರಿದಾರರಿದ್ದರೆ ಬ್ಯಾಂಕಿನ ಅಪಾಯ ಕಡಿಮೆಯಾಗುತ್ತದೆ. ಖಾತರಿದಾರರಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಬಹುದು.

ಹೊಸ ವರ್ಷದ ಕೊನೆಯಲ್ಲಿ ಟೆಲಿಕಾಂ ದರ ಶೇ. 15ರಷ್ಟು ಏರಿಕೆ ಸಾಧ್ಯತೆ; ಫೋನ್‌ ರಿಚಾರ್ಜ್‌ ಮತ್ತಷ್ಟು ದುಬಾರಿ!

 

Latest Videos
Follow Us:
Download App:
  • android
  • ios