ನವದೆಹಲಿ(ಏ. 12)  ದಿ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ  ಎಚ್‌ಡಿಎಫ್ ಸಿ ಯ 1.75 ಕೋಟಿ ಷೇರು ಖರೀದಿಗೆ ತೀರ್ಮಾನ ಮಾಡಿದೆ.  ಚೀನಾದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಸುಮಾರು 1.75 ಕೋಟಿ ಷೇರುಗಳನ್ನು ಖರೀದಿ ಮಾಡಿ ಗಮನ ಸೆಳೆದಿದೆ.

ಪ್ರಸಕ್ತ ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ 1,74,92,909 ಷೇರುಗಳನ್ನು ಖರೀದಿ ಮಾಡಿರುವ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಕೊರೋನಾ ಆತಂಕದ ನಡುವೆಯೂ ಅತಿದೊಡ್ಡ ಹೂಡಿಕೆ ಮಾಡಿದೆ. ಅಂದರೆ ಒಟ್ಟು ಷೇರಿನ ಶೇ. 1.01 ಶೇಕಡಾವನ್ನು  ಖರೀದಿ ಮಾಡಿದಂತೆ ಆಗಿದೆ.

ಎಟಿಎಂ ಬಳಕೆದಾರರೇ ದಯವಿಟ್ಟು ಇದನ್ನು ಗಮನಿಸಿ

ಕಳೆದ ಫೆಬ್ರವರಿ ಮೊದಲನೇ ವಾರದಲ್ಲಿ ಹೆಚ್‌ಡಿಎಫ್‌ಸಿ ಷೇರು ಮೌಲ್ಯ ದಲ್ಲಿ ಶೇ. 41ರಷ್ಟು ಕುಸಿತ ಕಂಡಿತ್ತು. ಕೊರೋನಾ ಹೊಡೆತ ಷೇರು ಮಾರುಕಟ್ಟೆ ಮೇಲೆಯೂ ಆಗಿತ್ತು. ವಾರ್ಷಿಕ ಲೆಕ್ಕದಲ್ಲಿ  ಎಚ್‌ಡಿಎಫ್ ಸಿ ಷೇರುಗಳು ಶೇ. 32 ರಷ್ಟು ಕುಸಿತ ಕಂಡಿವೆ. 2020ರ ಜನವರಿ 14 ರಂದು 52 ವಾರಗಳ ಅಧಿಕ ಅಂದರೆ 2499 ರೂ. ದಾಖಲಿಸಿತ್ತು. 

ಅತಿ ದೊಡ್ಡ ಜೀವ ವಿಮಾ ನಿಗಮ ಎಂದು ಗುರುತಿಸಿಕೊಂಡಿರುವ ಎಲ್‌ಐಸಿ ಶೇ. 4.21ರಿಂದ ಶೇ. 4.67ಕ್ಕೆ ತನ್ನ ಹೂಡಿಕೆಯನ್ನು ಎಚ್‌ಡಿಎಫ್ ಸಿಯಲ್ಲಿ ಹೆಚ್ಚಳ ಮಾಡಿಕೊಂಡಿತ್ತು. ಈ ಬದಲಾವಣೆ ಮಾರುಕಟ್ಟೆ ಮೇಲೆ ಪರಿಣಾಮ ಬೀರುವುದು ಪಕ್ಕಾ ಆಗಿದ್ದು ಪೀಪಲ್ಸ್ ಬ್ಯಾಂಕ್ ಇಂಥ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬ ಚರ್ಚೆ ಆರಂಭವಾಗಿದೆ.