ನವದೆಹಲಿ(ಜ.19): ಡಿಜಿಟಲ್ ಮನಿ​ ವಾಲೆಟ್​​ ಅಗ್ರಗಣ್ಯ ಪೇಟಿಎಂ ಹೊಸ ಹೊಸ ಯೋಜನೆಗಳೊಂದಿಗೆ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗುವತ್ತ ದಾಪುಗಾಲಿಟ್ಟಿದೆ. ತನ್ನ ಬಳಕೆದಾರರಿಗೆ ಮತ್ತೊಂದು ಸೇವೆ ನೀಡಲು ಮುಂದಾಗಿರುವ ಪೇಟಿಎಂ, ಇದಕ್ಕಾಗಿ ಜೊಮ್ಯಾಟೋ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. 

ಹೌದು, ಜೊಮ್ಯಾಟೋ ಜೊತೆ ಆನ್‌ಲೈನ್​ ಫುಡ್​ ಆರ್ಡರ್​ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಪೇಟಿಎಂ, ಸದ್ಯಕ್ಕೆ ಈ ಸೇವೆಯನ್ನು ಸದ್ಯಕ್ಕೆ ನವದೆಹಲಿ ಗ್ರಾಹಕರಿಗೆ ಪರಿಚಯಿಸಿದೆ. ಅಲ್ಲದೇ ಕೆಲವೇ ದಿನಗಳಲ್ಲಿ ದೇಶದ ಇತರ ನಗರಗಳಿಗೂ ಈ ಸೇವೆ ವಿಸ್ತರಿಸುವುದಾಗಿ ಸಂಸ್ಥೆ ತಿಳಿಸಿದೆ.

ಜೊಮ್ಯಾಟೋ ಕಂಪನಿ ಈಗಾಗಲೇ 80 ಸಾವಿರ ರೆಸ್ಟೋರೆಂಟ್​ಗಳ ಮೂಲಕ ಆನ್‌ಲೈನ್ ಆಹಾರ ಸೇವೆಯನ್ನು ಒದಗಿಸುತ್ತಿದೆ. ಸದ್ಯ 100 ನಗರಗಳಲ್ಲಿ ಫುಡ್​ ಡೆಲಿವರಿ ಸೇವೆಯನ್ನು ವಿಸ್ತರಿಸಿರುವ ಕಂಪನಿ, ಕಳೆದ ಡಿಸೆಂಬರ್​ ವೇಳೆಗೆ 28 ದಶಲಕ್ಷ ಆನ್‌ಲೈನ್ ಆರ್ಡರ್​ಗಳನ್ನು ಸ್ವೀಕರಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಪೇಟಿಎಂನಿಂದ ಬಳಕೆದಾರರಿಗೆ ಹೊಸ ಸೌಲಭ್ಯ

ಪೇಟಿಎಂ ಬ್ಯಾಂಕ್ ಮೇಲೆ ಆರ್‌ಬಿಐ ಮುನಿಸು: ಅದರಲ್ಲಿರೋ ನಿಮ್ಮ ಹಣ ಬಾಸು?