ಇಸ್ಲಾಮಾಬಾದ್(ಮೇ.22): ಪಾಕಿಸ್ತಾನದ ಆರ್ಥಿಕ ಸ್ಥಿತಿ ಹೀನಾಯ ಸ್ಥಿತಿ ತಲುಪಿದೆ ಎಂಬುದಕ್ಕೆ ಇದಕ್ಕಿಂತ ಏನು ಸಾಕ್ಷಿ ಬೇಕು ಹೇಳಿ. ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇ ಪಾಕಿಸ್ತಾನಕ್ಕೆ ಮುಳುವಾಗಿದೆ.

ಐಎಂಎಫ್ ಜೊತೆ 6 ಬಿಲಿಯನ್ ಡಾಲರ್ ನೆರವಿಗಾಗಿ ಪ್ರಾಥಮಿಕ ಒಪ್ಪಂದ ಮಾಡಿಕೊಂಡ ನಂತರ, ಪಾಕ್ ರೂಪಾಯಿ ಮೌಲ್ಯ ಜಾಗತಿಕ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಕುಸಿತ ದಾಖಲಿಸಿದೆ.

ಪಾಕಿಸ್ತಾನ ರೂಪಾಯಿ ಮೌಲ್ಯ ಇದೀಗ ಅಮೆರಿಕ ಡಾಲರ್ ಎದುರು 153 ರೂ.ಗೆ ಬಂದು ತಲುಪಿದೆ. ಕೆಲವೇ ದಿನಗಳ ಹಿಂದೆ ಡಾಲರ್ ಎದುರು ಪಾಕ್ ರೂಪಾಯಿ ವಹಿವಾಟು 146 ರೂ. ಇತ್ತು. 

ಪಾಕಿಸ್ತಾನದ ರೂಪಾಯಿ ಮೌಲ್ಯ ಒಟ್ಟು ಶೇ. 12.25 ರಷ್ಟು ಕುಸಿತ ಕಂಡಿದ್ದು, ಒಂದು ಲೀಟರ್ ಹಾಲಿಗೆ 98.36 ರೂ.ಗೆ ಬಂದು ತಲುಪಿದೆ.