Asianet Suvarna News Asianet Suvarna News

ಪೇಂಟ್ Vs ವಾಟರ್ ಪ್ರೂಫಿಂಗ್ ಕೋಟಿಂಗ್? ನಿಮ್ಮ ಮನೆ ಛಾವಣಿಗೆ ಯಾವುದು ಸೂಕ್ತ?

ಕನಸಿನ ಸೂರೊಂದನ್ನು ಕಟ್ಟಿ ಕೊಳ್ಳುವುದು ಮಾತ್ರವಲ್ಲ. ಅದನ್ನು ಮೆಂಟೈನ್ ಮಾಡುವುದೂ ದೊಡ್ಡ ಸವಾಲು. ಗೋಡೆ, ಛಾವಣಿ ಹಾಳಾಗದಂತೆ ಸಾಕಷ್ಟು ಶ್ರಮ ಹಾಕುವುದು ಅನಿವಾರ್ಯ. ಆ ರೀತಿ ಮಾಡುವಾಗ ಪ್ರತಿಯೊಬ್ಬರಿಗೂ ಮೂಡುವ ಹಲವು ಗೊಂದಲಗಳಿಗೆ ಇಲ್ಲಿವೆ ಉತ್ತರ. 

Paint vs waterproofing coating What is the right choice for the roof of your house
Author
Bengaluru, First Published Mar 3, 2021, 6:18 PM IST

ಪೇಂಟ್ Vs ವಾಟರ್ ಪ್ರೂಫಿಂಗ್ ಕೋಟಿಂಗ್? ನಿಮ್ಮ ಮನೆ ಛಾವಣಿಗೆ ಯಾವುದು ಸೂಕ್ತ? 
‘ವರ್ಷದ ಹಿಂದೆಯಷ್ಟೇ ಮನೆ ಚಾವಣಿಗೆ ಪೇಂಟ್ ಮಾಡಿದರೂ ಏಕೆ ಸೋರುತ್ತಿದೆ?’
‘ಚಾವಣಿಗೆ ಪೇಂಟ್ ಉತ್ಪನ್ನಗಳನ್ನು ಹೊಡದರೆ ನೀರು ಸೋರೋದು ನಿಲ್ಲುತ್ತಾ?’

ಮನೆಯ ಚಾವಣಿ ಹಾಗೂ ಒಳ ಚಾವಣಿ ಬಗ್ಗೆ ಅನೇಕ ಮನೆ ಮಾಲೀಕರು ಕೇಳುವ ಪ್ರಶ್ನೆಗಳಿವು. ಎಂಥದ್ದೇ ಮನೆ ಕಟ್ಟಿದರೂ ಬರ್ತಾ ಬರ್ತಾ ಒಂದಲ್ಲೊಂದು ಸಮಸ್ಯೆ ತಲೆದೂರುವುದು ಖಚಿತ. ಮಳೆ ನೀರು ನಿಂತೋ, ಅತೀವ ಶಾಖ ಹೆಚ್ಚಾಗಿ ಚಾವಣಿಯಲ್ಲಿ ಬಿರುಕು ಮೂಡಿ, ನೀರು ಸೋರಬಹುದು. ಪದೆ ಪದೇ ನೀರು ಲೀಕ್ ಆದರೆ, ಮನೆಯ ಮೋಲ್ಡಿಗೇ ಆಪತ್ತು ಬರೋದು ಖಚಿತ. ವಾತಾವರಣ ಶಾಖ ಬಿಟ್ಟ ಬಿರುಕಿನಲ್ಲಿ ನುಸುಳಿ, ಮನೆಯಲ್ಲಿ ಮತ್ತಷ್ಟು ಬಿಸಿಯಾಗುವಂತೆ ಮಾಡುತ್ತದೆ. ಇದು ಎರ್ ಕಂಡೀಷನ್ರ ಮತ್ತು ಕೂಲರ್ಸ್ ಮೇಲೆ ಹೆಚ್ಚಿನ ಒತ್ತಡ ಬೀರುವಂತೆ ಮಾಡಿ ಅವೂ ಹಾಳಾಗುವಂತೆ ಮಾಡುತ್ತದೆ. ತಾವು ಕಟ್ಟಿಕೊಂಡ ಸೂರು ಗಟ್ಟಿಮುಟ್ಟಾಗಿ ಬಲವಾಗಿರಬೇಕು. ಸುಂದರವಾಗಿ ಕಾಣಬೇಕೆಂಬ ಆಸೆ ಯಾವ ಮನೆ ಮಾಲೀಕರಿಗೆ ಇರೋಲ್ಲ ಹೇಳಿ? ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವಲ್ಲಿ ಸಾಕಷ್ಟು ಚರ್ಚೆಗಳಾಗಿದ್ದು, ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲೂ ಹಲವು ಪ್ರಯತ್ನಗಳಾಗಿವೆ. ಮನೆ ಚಾವಣಿಗೆ ಪೇಂಟ್ ಮಾಡಿದರೆ ಸಾಕೋ ಅಥವಾ ವಾಟರ್ ಪ್ರೂಫ್ ಕೋಟಿಂಗ್ ಬೆಂಕೆಂಬ ಅನುಮಾನಗಳಿವೆ. ಈ ಬಗ್ಗೆ ತಿಳಿದುಕೊಳ್ಳಲು ಕಟ್ಟಡ ನಿರ್ಮಾಣ ತಜ್ಞರನ್ನು ಮಾತನಾಡಿಸಿದ್ದೇವೆ. 

ಕೆಟ್ಟ ವಾತವರಣಕ್ಕೆ ಮನೆಯನ್ನು ಸಂರಕ್ಷಿಸುವುದು ಹೇಗೆ?
ಮನೆಯ ಚಾವಣಿ ಕಾಲಕ್ಕೆ ತಕ್ಕಂತೆ ಹಿಗ್ಗುತ್ತದೆ, ಇಲ್ಲವೇ ಕುಗ್ಗುತ್ತದೆ. ಹವಾಮಾನ ವೈಪರಿತ್ಯವನ್ನು ತಡೆದುಕೊಳ್ಳುವ ಶಕ್ತಿ ಚಾವಣಿಗಿರಬೇಕು. ಅದರಲ್ಲಿಯೂ ಭಾರತದ ರಾಜ್ಯಗಳಲ್ಲಿ ಒಂದೋ ವಿಪರೀತ ಸೆಖೆ ಇರುತ್ತದೆ. ಅಲ್ಲದೇ ವಿಪರೀತ ಚಳಿಯೂ ಇರುತ್ತದೆ. ಎಲ್ಲಾ ಋತುಗಳಲ್ಲಿಯೂ ಮನೆ ಬಲವಾಗಿರಬೇಕೆಂದರೆ ಅಗತ್ಯ ಪರಿಹಾರ ಕಂಡು ಕೊಳ್ಳಬೇಕು. ಮಳೆಯಲ್ಲಿ ನೀರು ಲೀಕ್ ಆಗದಂತಿರಬೇಕು. ದಕ್ಷಿಣ ಭಾರತೀಯ ರಾಜ್ಯಗಳಲ್ಲಿಯೂ ಗಾಳಿ ಆರ್ದತೆ ನಿರಂತರವಾಗಿರುತ್ತದೆ. ಇದು ಗೋಡೆ ಮತ್ತು ಸೀಲಿಂಗ್ ಅನ್ನು ಮತ್ತಷ್ಟು ಹಾಳು ಮಾಡುವಂತೆ ಮಾಡುತ್ತದೆ. ಈ ರೀತಿ ಹವಾಮಾನದ ವೈಪರಿತ್ಯಗಳು ಸಹಜವಾಗಿಯೇ ಮನೆ ಗೋಡೆ, ಚಾವಣಿ ಮೇಲೆ ಪರಿಣಾಮ ಬೀರಬಹುದು. ಮಳೆಗಾಲದಲ್ಲಿ ಎಡಬಿಡದೇ ಸುರಿಯೋ ಮಳೆ, ಬೇಸಿಗೆಯ ವಿಪರೀತ ಸೆಖೆ ಹಾಗೂ ಚಳಿಗಾಲದ ಶೀತ ಹವಾಮಾನ ಚಾವಣಿ ಮತ್ತು ಟೆರಾಸ್‌ಗೆ ಎಲ್ಲಿಲ್ಲದ ತೊಂದರೆ ಕೊಡುತ್ತದೆ. ಹವಾಮಾನ ವೈಪರಿತ್ಯ ಸೀಲಿಂಗ್ ಹಿಗ್ಗುವಂತೆ ಮಾಡಿ, ಬಿರುಕು ಸೃಷ್ಟಿಸುತ್ತದೆ. ಇದರಿಂದ ನೀರು ಸೋರುವುದು ಹೆಚ್ಚುತ್ತದೆ. ಬೇಸಿಗೆಯಲ್ಲಿ ಶಾಖ ಮನೆಯೊಳಗೆ ನುಗ್ಗಿ, ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಇದು ಮನೆಯಲ್ಲಿರುವ ಏರ್ ಕಂಡೀಷನರ್ ಹಾಗೂ ಕೂಲಿಂಗ್ ಮೇಲೆ ಒತ್ತಡ ಹೆಚ್ಚಿಸಿ, ಹೆಚ್ಚಿನ ಇಂಧನವನ್ನು ಬಳಸಿಕೊಳ್ಳುವಂತಾಗುತ್ತದೆ. ಎಂಥದ್ದೇ ಹವಾಮಾನವಿದ್ದರೂ ಮನೆಯ ಗೋಡೆ ಮತ್ತು ಚಾವಣಿಗೆ ಯಾವ ತೊಂದರೆಯೂ ಆಗದಂತೆ ವಾಟರ್ ಪ್ರೂಫಿಂಗ್ ತಂತ್ರಜ್ಞಾನ ಬಳಸಬೇಕು. 

ತಾರಸಿಯ ಎಲ್ಲಾ ಮೂಲೆಗಳಿಗೂ ವಾಟರ್ ಪ್ರೂಫ್ ಟ್ರೀಟ್ಮೆಂಟ್ ಕೊಡುವುದರಿಂದ ಒಳ್ಳೆಯ ಫಲಿತಾಂಶ ಕಾಣಬಹುದು. ಕೇವಲ ಚಾವಣೆ ಮೇಲಿನ ಭಾಗಕ್ಕೆ ಮಾತ್ರವಲ್ಲ, parapet wall ಮೂಲೆ ಮೂಲೆಗೂ ಸೂಕ್ತ ಗಮನ ನೀಡುವುದು ಅತ್ಯಗತ್ಯ. ಅಕಸ್ಮಾತ್ ಗೋಡೆ ತುದಿಯನ್ನು ಬಿಟ್ಟರೂ, ಗಾಳಿಯ ಆರ್ದತೆ ಗೋಡೆಯಲ್ಲಿ ಬಿರಕು ಸೃಷ್ಟಿಸಬಹುದು. ಇದು ಒಟ್ಟಾರೆ ಮನೆಯ ಸೌಂದರ್ಯಕ್ಕೆ ಧಕ್ಕೆ ತರುವುದಲ್ಲದೇ, ಇಡೀ ಮನೆಯ ಆರೋಗ್ಯವನ್ನೇ ಹಾಳು ಮಾಡಿ ಬಿಡಬಹುದು. 

ಪೇಂಟ್ ಅಥವಾ ವಾಟರ್‌ಪ್ರೂಫ್ ಕೋಟಿಂಗ್, ಯಾವುದನ್ನು ಆರಿಸಿಕೊಳ್ಳೋದು ಬೆಸ್ಟ್?
ಮನೆ ಗೋಡೆ ಹಾಗೂ ಚಾವಣಿಯಲ್ಲಿ ಬಿರುಕು ಮೂಡದಂತೆ, ನೀರು ಲೀಕ್ ಆಗದಂತೆ ಮಾಡಲು ತಾರಸಿಗೆ ತಜ್ಞರಿಂದ ವಾಟರ್ ಪ್ರೂಫ್ ಚಿಕಿತ್ಸೆ ಕೊಡಿಸಬೇಕು. ಪೇಂಟ್ ಮಾಡಿದರೆ ಬಿರುಕನ್ನು ಮುಚ್ಚಬಹುದೇ ಹೊರತು, ರಬ್ಬರಿನಂತೆ ಹಿಗ್ಗೋ-ಕುಗ್ಗೋ ಗೋಡೆ ಅಥವಾ ತಾರಸಿಯ ಗುಣದಿಂದ ಸುದೀರ್ಘ ಕಾಲ ಮನೆಯನ್ನು ರಕ್ಷಿಸುವ ಭರವಸೆ ಇರೋಲ್ಲ. ಕಾಲಾಂತರದಲ್ಲಿ ಗೋಡೆಯಲ್ಲಿ ಬಿರುಕು ಬೀಳುವ ಸಾಧ್ಯತೆ ಇರುತ್ತದೆ. ಇದು ಮತ್ತೆ ನೀರು ಸೋರುವಂತೆ ಮಾಡುತ್ತದೆ.
 
ರಬ್ಬರಿನಂಥ ಗುಣವುಳ್ಳ ಗೋಡೆ, ಚಾವಣಿ ಮೇಲ್ಮೈ ಮತ್ತು ಒಳ ಚಾವಣಿ ಮೂಲೆ ಮೂಲೆಗೂ ನೀಡುವ ವಾಟರ್ ಪ್ರೂಫ್ ಚಿಕಿತ್ಸೆಯಲ್ಲಿ ಎಲಾಸ್ಟೋಮೆರಿಕ್ ಪಿಯು ಕೋಟಿಂಗ್ ಬಳಸಲಾಗುತ್ತದೆ. ಇದು ಚಾವಣಿಯನ್ನು ಬಲಗೊಳಿಸಿ, ಹೊಸ ಬಿರುಕು ಮೂಡದಂತೆ ತಡೆಯುತ್ತದೆ. ಬಿರುಕೇ ಇಲ್ಲವೆಂದರೆ, ಇನ್ನು ನೀರು ಸೋರುವ ಮಾತೆಲ್ಲಿ ಹೇಳಿ? ಎಂಥದ್ದೇ ಹವಾಮಾನ ಪರಿಸ್ಥಿತಿಯಲ್ಲಿಯೂ ಗೋಡೆ, ಟೆರೆಸ್‌ಗೆ ಏನೂ ಆಗದಂತೆ ಈ ವಾಟರ್ ಪ್ರೂಫಿಂಗ್ ತಡೆಯಬಲ್ಲದು. ಎಲೆಸ್ಟೋಮೆಟ್ರಿಕ್ ಗುಣವುಳ್ಳು ಈ ವಾಟರ್ ಫ್ರೂಫಿಂಗ್ ಚಿಕಿತ್ಸೆಯಿಂದ ಗೋಡೆ, ಹಿಗ್ಗುವ ಕುಸಿಯುವ ಗುಣಕ್ಕೆ ಹೊಂದಿಕೊಳ್ಳುತ್ತದೆ. ಅದು ಗೋಡೆ ಹಾಗು ಟೆರೇಸ್‌ನಲ್ಲಿ ಬಿರುಕು ಮೂಡದಂತೆ ತಡೆಯುತ್ತದೆ. ಮನೆಯೊಳಗೆ ಶಾಖ ನುಗ್ಗದಂತೆ ತಡೆದು, ನೀರು ಸೋರದಂತೆ ತಡೆಯುವಲ್ಲಿ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು.

ಡಾ.ಫಿಕ್ಸಿಟ್ ರೂಫ್‌ಸೀಲ್ ಇಂಥ ವಾಟರ್ ಪ್ರೂಫ್ ಚಿಕಿತ್ಸೆಗೆ ಮಾರುಕಟ್ಟೆಯಲ್ಲಿ ಸಿಗುವ ಅತ್ಯುತ್ತಮ ಉತ್ಪನ್ನ. ಈ ಎಲೆಸ್ಟೋಮೆರಿಕ್ ಕೋಟಿಂಗ್ ಅನ್ನು ನ್ಯಾನೋ ಫೈಬರ್ ತಂತ್ರಜ್ಞಾನದಿಂದ ಮಾಡಲ್ಪಟ್ಟಿದ್ದು, ಗೋಡೆ ಮತ್ತು ಸೀಲಿಂಗ್‌ನ ಶಕ್ತಿಯನ್ನು ಸಮವಾಗಿ ಶಕ್ತಿಯುತಗೊಳಿಸುತ್ತದೆ. ಶಾಖವನ್ನು ಇದು ಹೀರಿಕೊಳ್ಳದೇ, ಮನೆಯನ್ನು ಕೂಲ್ ಆಗಿಡುತ್ತದೆ. ಬೇರೆ ಉತ್ಪನ್ನಗಳಿಗೆ ಹೋಲಿಸಿದಲ್ಲಿ ಇದು ಅತ್ಯುತ್ತಮವಾಗಿದೆ. 

ಮನೆ ಮಾಲೀಕರರಾಗಿ ಸಿಗೋ ಅತ್ಯಂತ ಒಳ್ಳೆಯ ಉತ್ಪನ್ನವನ್ನು ಆಯ್ಕೆ ಮಾಡಿಕೊಂಡು, ಮನೆಗೆ ಉತ್ತಮ ವಾಟರ್ ಪ್ರೂಫಿಂಗ್ ಟೀಟ್ಮೆಂಟ್ ನೀಡಿ. ಕೇವಲ ಪೇಂಟಿನಿಂದ ಬಿರುಕನ್ನು ಮುಚ್ಚುವಂಥ ಕೆಲಸ ಮಾಡಬೇಡಿ.

Follow Us:
Download App:
  • android
  • ios