ನವದೆಹಲಿ(ಜ.02): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಕಳೆದೊಂದು ತಿಂಗಳಿನಿಂದ ರೈತರು ನಡೆಸುತ್ತಿರುವ ಪ್ರತಿಭಟನೆಯ ಫಲವಾಗಿ 2020-21ರ ಅಕ್ಟೋಬರ್‌- ಡಿಸೆಂಬರ್‌ ತ್ರೈಮಾಸಿಕದಲ್ಲಿ ಆರ್ಥಿಕತೆಗೆ ಸುಮಾರು 70,000 ಕೋಟಿ ರು. ಆರ್ಥಿಕ ನಷ್ಟ ಉಂಟಾಗಿದೆ ಎಂದು ಪಿಎಚ್‌ಡಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಂದಾಜಿಸಿದೆ.

ಯುಪಿಐ ಹಣ ವರ್ಗಾವಣೆಗೆ ಶುಲ್ಕ ವಿಧಿಸುವ ಸುದ್ದಿ ಸುಳ್ಳು!

ಅನ್ನದಾತರ ಪ್ರತಿಭಟನೆಯಿಂದಾಗಿ ಪಂಜಾಬ್‌, ಹರಾರ‍ಯಣ ಮತ್ತು ದೆಹಲಿಯ ಗಡಿ ಭಾಗಗಳಲ್ಲಿ ಸರಕು, ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಪಂಜಾಬ್‌, ಹರಾರ‍ಯಣಗಳಲ್ಲಿ ಸುಮಾರು 25 ಲಕ್ಷ ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿವೆ. 45 ಲಕ್ಷ ಜನರಿಗೆ ಉದ್ಯೋಗ ನೀಡಿರುವ ಇವುಗಳು ಉಭಯ ರಾಜ್ಯಗಳ ಆರ್ಥಿಕತೆಗೆ 4 ಲಕ್ಷ ಕೋಟಿ ರು. ಕೊಡುಗೆ ನೀಡುತ್ತಿವೆ.

ಆದರೆ ರೈತರ ಪ್ರತಿಭಟನೆಯಿಂದಾಗಿ ಕಚ್ಚಾ ವಸ್ತುಗಳ ಪುರೈಕೆಯಾಗದೆ ಕಾಟನ್‌ ಟೆಕ್ಸ್‌ಟೈಲ್ಸ್‌, ಗಾರ್ಮೆಂಟ್ಸ್‌, ಆಟೋಮೊಬೈಲ್‌, ಮಾಹಿತಿ ತಂತ್ರಜ್ಞಾನ, ಪ್ರವಾಸ ಮತ್ತು ಸಾರಿಗೆ ಸೇರಿದಂತೆ ಹಲವಾರು ಕ್ಷೇತ್ರಗಳ ಉತ್ಪಾದನೆ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ ಎಂದು ಪಿಎಚ್‌ಡಿಸಿಸಿಐ ಅಧ್ಯಕ್ಷ ಸಂಜಯ್‌ ಅಗರ್‌ವಾಲ್‌ ತಿಳಿಸಿದ್ದಾರೆ.