Asianet Suvarna News Asianet Suvarna News

ಒಂದೇ ದಿನ 500 ಮಂದಿ ಕೋಟ್ಯಾಧಿಪತಿ: ನೌಕರರಿಗೆ ಬಂಪರ್!

* ಅಮೆರಿಕದ ನಾಸ್ಡಾಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಫ್ರೆಶ್‌ವರ್ಕ್ಸ್‌ ಕಂಪನಿ ಐಪಿಒ ಬಿಡುಗಡೆ

* ಈ ಕಂಪನಿ ನೌಕರರು ಒಂದೇ ದಿನದಲ್ಲಿ ಕೋಟ್ಯಧಿಪತಿಗಳು

* ಕಂಪನಿಯ ಸಾಧನೆಗೆ ನಟ ರಜನೀಕಾಂತ್‌ ಪ್ರೇರಣೆ ಎಂದ ಸಿಇಒ ಮಾತೃಬೂಥಮ್‌

Over 500 Indian employees of this company turn crorepatis after US IPO listing pod
Author
Bangalore, First Published Sep 24, 2021, 9:43 AM IST

ವಾಷಿಂಗ್ಟನ್‌(ಸೆ.24): 2010ರಲ್ಲಿ ಸ್ಥಾಪನೆಯಾದ ಭಾರತೀಯ ಮೂಲದ ಸ್ಟಾರ್ಟಪ್‌ ಕಂಪನಿಯೊಂದು ಅಮೆರಿಕ ನಾಸ್ಡಾಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ನೋಂದಣಿ ಆಗಿದ್ದು, ಗುರುವಾರ ಐಪಿಒ ಬಿಡುಗಡೆ ಮಾಡಿದೆ. ಐಪಿಒಗೆ ಹೂಡಿಕೆದಾರರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಕಂಪನಿಯ 500ಕ್ಕೂ ಹೆಚ್ಚು ಉದ್ಯೋಗಿಗಳು ಒಂದೇ ದಿನದಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ. ವಿಶೇಷವೆಂದರೆ ಇವರ ಪೈಕಿ ಶೇ.70ರಷ್ಟು ಮಂದಿ 30 ವರ್ಷದ ಒಳಗಿನ ಉದ್ಯೋಗಿಗಳಾಗಿದ್ದಾರೆ! ಅಲ್ಲದೇ ಚೆನ್ನೈ ಮೂಲದ ನಾಸ್ಡಾಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ(Nasdaq Stock Xxchange) ಪಟ್ಟಿಮಾಡಲಾದ ಮೊದಲ ಎಸ್‌ಎಎಎಸ್‌ ಕಂಪನಿ ಎಂಬ ಹೆಗ್ಗಳಿಕೆಗೂ ಫ್ರೆಶ್‌ವರ್ಕ್ಸ್‌(Freshworks Inc) ಪಾತ್ರವಾಗಿದೆ.

ನಾಸ್ಡಾಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಐಪಿಒ ಲಿಸ್ಟ್‌ ಆದ ಬಳಿಕ ಫ್ರೆಶ್‌ವರ್ಕ್ಸ್‌(Freshworks Inc) ಕಂಪನಿಯ ಷೇರುಗಳು ಶೇ.32ರಷ್ಟುಏರಿಕೆ ಆಗಿದ್ದು, 1 ಬಿಲಿಯನ್‌ ಡಾಲರ್‌ (7,372 ಕೋಟಿ ರು.)ಗೆ ತಲುಪಿದೆ. ಫ್ರೆಶ್‌ವರ್ಕ್ಸ್‌ನ ಪ್ರತಿ ಷೇರು ಮೌಲ್ಯ ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ 47.55 ಡಾಲರ್‌ (3,505 ರು.)ನಲ್ಲಿ ಕೊನೆಗೊಂಡಿದೆ. ಇದರಿಂದಗಿ ಕಂಪನಿಯ ಮಾರುಕಟ್ಟೆಮೌಲ್ಯ 92,300 ಕೋಟಿ ರು. ಆಗಿದೆ. ಕಂಪನಿಯಲ್ಲಿ ಸದ್ಯ 4,300 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಫ್ರೆಶ್‌ವರ್ಕ್ಸ್‌ನ ಈ ಸಾಧ್ಯತೆ ಅತ್ಯಂತ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿರುವ ಕಂಪನಿಯ ಸಹ ಸಂಸ್ಥಾಪಕ ಹಾಗೂ ಸಿಇಒ ಗಿರೀಶ್‌ ಮಾತೃಬೂಥಮ್‌, ಐಪಿಒ ಬಿಡುಗಡೆ ಮಾಡಿದ್ದರಿಂದಾಗಿ ನೌಕರರ ಷೇರು ಮಾಲೀಕತ್ವ ಯೋಜನೆ (ಇಎಸ್‌ಒಪಿ)ಯ ಮೂಲಕ ತಮ್ಮ ಸಂಸ್ಥೆಯ ಉದ್ಯೋಗಿಗಳ ಸಂಪತ್ತು ಸಾಕಷ್ಟುವೃದ್ಧಿಸಿದೆ. ಕೇವಲ ಸಂಸ್ಥೆಯನ್ನು ಸ್ಥಾಪಿಸಿದವರಿಗೆ ಮಾತ್ರವಲ್ಲದೇ ಸಂಸ್ಥೆಯನ್ನು ಈ ಮಟ್ಟಕ್ಕೆ ಬೆಳೆಸಲು ಕಾರಣರಾದ ಉದ್ಯೋಗಿಗಳಿಗೆ ಸಂಪತ್ತನ್ನು ಹಂಚಿಕೆ ಮಾಡಲಾಗುವುದು. ಶೇ.76ರಷ್ಟುಉದ್ಯೋಗಿಗಳು ಕಂಪನಿಯಲ್ಲಿ ಷೇರುಗಳನ್ನು ಹೊಂದಿದ್ದಾರೆ. ಭಾರತದಲ್ಲಿ 500ಕ್ಕೂ ಹೆಚ್ಚು ಉದ್ಯೋಗಿಗಳು ಈಗ ಕೋಟ್ಯಧೀಶರಾಗಿದ್ದಾರೆ. ಅವರಲ್ಲಿ 70 ಮಂದಿ 30 ವರ್ಷದ ಒಳಗಿನವರಾಗಿದ್ದಾರೆ. ಕೆಲವು ವರ್ಷಗಳ ಹಿಂದಷ್ಟೇ ಅವರು ಕಾಲೇಜು ಮುಗಿಸಿದವರಾಗಿದ್ದಾರೆ ಎಂದು ಹೇಳಿದ್ದಾರೆ.

ರಜನೀಕಾಂತ್‌ ಪ್ರೇರಣೆ

ಇದೇ ವೇಳೆ ತಮ್ಮ ಕಂಪನಿಯ ಸಾಧನೆಗೆ ಸೂಪರ್‌ ಸ್ಟಾರ್‌ ರಜನೀಕಾಂತ್‌(Rajinikanth) ಅವರ ಪ್ರೇರಣೆಯೇ ಕಾರಣ ಸಿಇಒ ಗಿರೀಶ್‌ ಹೇಳಿದ್ದಾರೆ. ರಜನೀಕಾಂತ್‌ ಅವರ ಪ್ರಸಿದ್ಧ ಡೈಲಾಗ್‌ವೊಂದನ್ನು ಉಲ್ಲೇಖಿಸಿ ಫ್ರೆಶ್‌ವರ್ಕ್ಸ್‌ನ ಸಾಧನೆಯನ್ನು ಅವರು ವಿವರಿಸಿದ್ದಾರೆ. ತಿರುಚ್ಚಿ ಮೂಲದವರಾದ ಗಿರೀಶ್‌ ರಜನೀ ಚಿತ್ರಗಳನ್ನು ನೋಡುತ್ತಾ ಬೆಳೆದಿದ್ದಾರೆ. ರಜನೀಕಾಂತ್‌ ದೊಡ್ಡ ಅಭಿಮಾನಿಯಾಗಿರುವ ಅವರು, ರಜನೀಕಾಂತ್‌ರ ಚಿತ್ರಗಳ ವೀಕ್ಷಣೆಗೆ ಉದ್ಯೋಗಿಗಳಿಗೆ ರಜೆ ನೀಡುವ ಮೂಲಕ ಸುದ್ದಿಯಾಗಿದ್ದರು.

Follow Us:
Download App:
  • android
  • ios