ದೇಶದಲ್ಲಿ 25 ಕೋಟಿ ಜನರು ಬಡತನಮುಕ್ತ! 9 ವರ್ಷದಲ್ಲಿ ಸಾಧನೆ

ಈ ಬಹು ಆಯಾಮ ಬಡತನ ಮಾಪನದಲ್ಲಿ ಬಡತನವನ್ನು ಆರೋಗ್ಯ, ಶಿಕ್ಷಣ, ಜೀವನದ ಗುಣಮಟ್ಟ, ಪೌಷ್ಟಿಕ ಆಹಾರ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್‌ ಹೀಗೆ ಹಲವು ವಿಭಾಗಗಳಲ್ಲಿ ನೀತಿ ಆಯೋಗ ಅಳೆಯುತ್ತದೆ.

over 24 8 crore people moved out of poverty in India in nine years niti aayog report ash

ನವದೆಹಲಿ (ಜನವರಿ 16, 2024): 2013 ರಿಂದ 2023ರ ಅವಧಿಯಲ್ಲಿ ಒಟ್ಟು 24.8 ಕೋಟಿ ಭಾರತೀಯರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ನೀತಿ ಆಯೋಗ ಸಿದ್ಧಪಡಿಸಿದ ಬಹು ಆಯಾಮ ಬಡತನ ಅಳತೆ ಆಧಾರದಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶವಿದೆ.

ಬಡತನ ಇಳಿಕೆ ಪ್ರಮಾಣದಲ್ಲಿ ಗರಿಷ್ಠ ಸಾಧನೆ ಮಾಡಿದ ರಾಜ್ಯಗಳ ಪೈಕಿ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ ಮೊದಲ ಮೂರು ಸ್ಥಾನದಲ್ಲಿವೆ. ಉತ್ತರಪ್ರದೇಶದ 5.94 ಕೋಟಿ, ಬಿಹಾರದ 3.77 ಕೋಟಿ ಮತ್ತು ಮಧ್ಯಪ್ರದೇಶದ 2.30 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ವರದಿ ಹೇಳಿದೆ.

ಇದನ್ನು ಓದಿ: 5 ವರ್ಷದಲ್ಲಿ 13.5 ಕೋಟಿ ಭಾರತೀಯರು ಬಡತನದಿಂದ ಹೊರಕ್ಕೆ: ಮೋದಿ ಅವಧಿಯಲ್ಲಿ ಕ್ರಾಂತಿಕಾರಿ ಆರ್ಥಿಕತೆ ಸುಧಾರಣೆ

ಈ ಬಹು ಆಯಾಮ ಬಡತನ ಮಾಪನದಲ್ಲಿ ಬಡತನವನ್ನು ಆರೋಗ್ಯ, ಶಿಕ್ಷಣ, ಜೀವನದ ಗುಣಮಟ್ಟ, ಪೌಷ್ಟಿಕ ಆಹಾರ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್‌ ಹೀಗೆ ಹಲವು ವಿಭಾಗಗಳಲ್ಲಿ ನೀತಿ ಆಯೋಗ ಅಳೆಯುತ್ತದೆ.

ಮೇಲ್ಕಂಡ ವಿಷಯಗಳನ್ನು ಆಧರಿಸಿ ನಡೆಸಿದ ಅಧ್ಯಯನದ ಅನ್ವಯ 2013ರಲ್ಲಿ ಶೇ.29.17ರಷ್ಟಿದ್ದ ಬಡತನ 2023ರಲ್ಲಿ 11.28ಕ್ಕೆ ಇಳಿದಿದೆ. ಅಂದರೆ ಪ್ರತಿ ವರ್ಷ ಸರಾಸರಿ 2.75 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ.

ಇದನ್ನು ಓದಿ: 2047ಕ್ಕೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ; ರಾಜ್ಯ ಸರ್ಕಾರಗಳು ದೂರದೃಷ್ಟಿಯ ಯೋಜನೆ ರೂಪಿಸಬೇಕು: ಮೋದಿ

ಜೊತೆಗೆ 2024ರ ವೇಳೆಗೆ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಶೇಕಡಾವಾರು ಪ್ರಮಾಣ ಒಂದಂಕಿಗೆ ಇಳಿಯಲಿದೆ ಎಂಬ ವಿಶ್ವಾಸವನ್ನೂ ವರದಿ ವ್ಯಕ್ತಪಡಿಸಿದೆ.

ಇದನ್ನು ಓದಿ: 5 ವರ್ಷದಲ್ಲಿ 13.5 ಕೋಟಿ ಭಾರತೀಯರು ಬಡತನದಿಂದ ಹೊರಕ್ಕೆ: ಮೋದಿ ಅವಧಿಯಲ್ಲಿ ಕ್ರಾಂತಿಕಾರಿ ಆರ್ಥಿಕತೆ ಸುಧಾರಣೆ

Latest Videos
Follow Us:
Download App:
  • android
  • ios