Asianet Suvarna News Asianet Suvarna News

ಪೋಸ್ಟ್ ಆಫೀಸ್‌ನಲ್ಲಿ 100 ರೂಗೆ ಖಾತೆ ತೆರೆದು ಹೂಡಿಕೆ ಮಾಡಿ, 10 ವರ್ಷದಲ್ಲಿ ಕೈಸೇರಲಿದೆ 8 ಲಕ್ಷ ರೂ!

ಪೋಸ್ಟ್ ಆಫೀಸ್‌ನಲ್ಲಿ ಕೇವಲ 100 ರೂಪಾಯಿ ನೀಡಿ ಖಾತೆ ತೆರೆದರೆ ಸಾಕು. ಬಳಿಕ ಸಣ್ಣ ಪ್ರಮಾಣದ ಹೂಡಿಕೆ ಕೆಲ ಅಚ್ಚರಿಗಳನ್ನೇ ನೀಡಲಿದೆ. 10 ವರ್ಷದ ಬಳಿಕ 100 ರೂಪಾಯಿಗೆ ತೆರೆದ ಖಾತೆಯಿಂದ ನಿಮ್ಮ ಕೈಸೇರಲಿದೆ 8 ಲಕ್ಷ ರೂಪಾಯಿ. ಈ ಆದಾಯ ಪಡೆಯಲು ಹೂಡಿಕೆ ಹೇಗೆ ಮಾಡಬೇಕು? ಯೋಜನೆ ಯಾವುದು ಇಲ್ಲಿದೆ ವಿವರ.

Open account just rs 100 in post office scheme and get rs 8 lakh in 10 years by investing right way ckm
Author
First Published Sep 3, 2024, 3:50 PM IST | Last Updated Sep 3, 2024, 3:50 PM IST

ಬೆಂಗಳೂರು(ಆ.03) ಪೋಸ್ಟ್ ಆಫೀಸ್‌ನಲ್ಲಿಉಳಿತಾಯ, ಆರ್‌ಡಿ, ಸುಕನ್ಯ ಸಮೃದ್ಧಿ, ನಿವೃತ್ತಿ ಸೇರಿದಂತೆ ಹಲವು ಯೋಜನೆಗಳಿವೆ.  ಯೋಜನಗಳ ಸಂಪೂರ್ಣ ಮಾಹಿತಿ ತಿಳಿದುಕೊಂಡು ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಯಾವುದೇ ಚಿಂತೆ ಇರುವುದಿಲ್ಲ. ಹೀಗೆ ಪೋಸ್ಟ್ ಆಫೀಸ್‌ನಲ್ಲಿ ಕೇವಲ 100 ರೂಪಾಯಿಗೆ ಖಾತೆ ತೆರೆದು ಹಂತ ಹಂತವಾಗಿ ಹೂಡಿಕೆ ಮಾಡುತ್ತಾ ಹೋದರೆ ಸಾಕು, 10 ವರ್ಷದಲ್ಲೇ ಇದೇ 100 ರೂಪಾಯಿ ಖಾತೆಯಲ್ಲಿ 8 ಲಕ್ಷ ರೂಪಾಯಿ ಆಗಲಿದೆ. ಪೋಸ್ಟ್ ಆಫೀಸ್‌ನಲ್ಲಿರುವ ಈ ಯೋಜನೆ ಕುರಿತ ಮಾಹಿತಿ ಇಲ್ಲಿದೆ.

ಈ ಯೋಜನೆ ಪ್ರಮುಖವಾಗಿ ರಿಕರಿಂಗ್ ಡೆಪಾಸಿಟ್(ಆರ್‌ಡಿ) ಸ್ಕೀಮ್ ಅಡಿಯಲ್ಲಿದೆ. ಕೇವಲ 100 ರೂಪಾಯಿ ನೀಡಿ ಈ ಆರ್‌ಡಿ ಖಾತೆ ಆರಂಭಿಸಲು ಸಾಧ್ಯವಿದೆ. ಆರಂಭಿಕ ಹಂತದಲ್ಲಿ ಈ ಯೋಜನೆ ಮೆಚ್ಯುರಿಟಿ ಅವಧಿ 5 ವರ್ಷ. ಈ ಐದು ವರ್ಷದ ಯೋಜನೆಯನ್ನು ಮತ್ತೆ ಐದು ವರ್ಷಕ್ಕೆ ಮುಂದುವರಿಸಿದರೆ ಅಂದರೆ ಒಟ್ಟು 10 ವರ್ಷಗಳ ಮೆಚ್ಯುರಿಟಿ ಅವಧಿಯಲ್ಲಿ 8 ಲಕ್ಷ ರೂಪಾಯಿ ಕೈಸೇರಲಿದೆ. 

ಒಮ್ಮೆ ಹೂಡಿಕೆ ಮಾಡಿ ತಿಂಗಳಿಗೆ 20,000 ರೂ ಆದಾಯ ಗಳಿಸಿ, ಇದು ಪೋಸ್ಟ್ ಆಫೀಸ್ ನಿವೃತ್ತಿ ಪ್ಲಾನ್!

ಐದು ವರ್ಷಗಳ ಆರ್‌ಡಿ ಸ್ಕೀಮ್‌ಗೆ ಶೇಕಡಾ 6.7 ಬಡ್ಡಿಯನ್ನು ಪೋಸ್ಟ್ ಆಫೀಸ್ ನೀಡಲಿದೆ.ಈ ಯೋಜನೆಯಲ್ಲಿ 100 ರೂಪಾಯಿ ಮೂಲಕ ಖಾತೆ ಆರಂಭಿಸಿದರೆ, ಖಾತೆಗೆ ಆರ್‌ಡಿ ರೂಪದಲ್ಲಿ ಜಮೆ ಮಾಡಲು ಯಾವುದೇ ಮಿತಿಗಳಿಲ್ಲ. ಪ್ರತಿ ತಿಂಗಳು ಒಂದಿಷ್ಟು ಹಣವನ್ನು ಜಮೆ ಮಾಡಿದರೆ ಸಾಕು. 12 ತಿಂಗಳು ಹಣ ಜಮೆ ಮಾಡಿದರೆ ಬಳಿಕ ಶೇಕಡಾ 50 ರಷ್ಟು ಸಾಲ ಪಡೆಯಲು ಖಾತೆದಾರರು ಅರ್ಹರಾಗಿರುತ್ತಾರೆ.

ಪ್ರತಿ ತಿಂಗಳು 5,000 ರೂಪಾಯಿ ಈ ಆರ್‌ಡಿ ಖಾತೆಗೆ ಜಮೆ ಮಾಡುತ್ತಾ ಬಂದರೆ 5 ವರ್ಷದಲ್ಲಿ ಜಮೆ ಮಾಡಿದ ಮೊತ್ತ ಒಟ್ಟು 3 ಲಕ್ಷ ರೂಪಾಯಿ. ಇದಕ್ಕೆ 6.7 ಶೇಕಡಾ ಬಡ್ಡಿ ಮೂಲಕ 56,830 ರೂಪಾಯಿ ಪೋಸ್ಟ್ ಆಫೀಸ್ ನೀಡಲಿದೆ. 5 ವರ್ಷದಲ್ಲಿ ಒಟ್ಟು ಮೊತ್ತ 3,56,830 ರೂಪಾಯಿ. ಯೋಜನೆಯನ್ನು ಮತ್ತೆ 5 ವರ್ಷಕ್ಕೆ ಮುಂದುವರಿಸಿದರೆ, ಅಂದರೆ ಒಟ್ಟು ಸಮಯ 10 ವರ್ಷ. ಎರಡನೇ 5 ವರ್ಷದಲ್ಲಿ ಮತ್ತೆ 3 ಲಕ್ಷ ರೂಪಾಯಿ ಜಮೆಯಾಗಲಿದೆ. ತಿಂಗಳ 5,000 ರೂಪಾಯಿ ಹಾಗೆ ಜಮೆ ಮಾಡಿದರೆ 10 ವರ್ಷದಲ್ಲಿ 6 ಲಕ್ಷ ರೂಪಾಯಿ ಖಾತೆಗೆ ಜಮೆ ಆಗಲಿದೆ. 6.7 ಶೇಕಡಾ ಬಡ್ಡಿಯಂತೆ ಒಟ್ಟು 2,54,272 ರೂಪಾಯಿ ಬಡ್ಡಿ ರೂಪದಲ್ಲಿ ಸಿಗಲಿದೆ. 10 ವರ್ಷದಲ್ಲಿ ಒಟ್ಟು 8,54,272 ರೂಪಾಯಿ ಖಾತೆಯಲ್ಲಿ ಇರಲಿದೆ.100 ರೂಪಾಯಿ ಮೂಲಕ ಖಾತೆ ಆರಂಭಿಸಿ 10 ವರ್ಷದಲ್ಲಿ 8.5 ಲಕ್ಷ ರೂಪಾಯಿ ಕೈಸೇರಲಿದೆ. 

Investment Plan : ದಿನಕ್ಕೆ ಕೇವಲ 6 ರೂ. ಕಟ್ಟಿದ್ರೆ ಸಿಗುತ್ತೆ ಮೂರು ಲಕ್ಷ…! ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮ ಯೋಜನೆ
 

Latest Videos
Follow Us:
Download App:
  • android
  • ios