Asianet Suvarna News Asianet Suvarna News

50 ಪೈಸೆಗೆ ಕೆಜಿ ಈರುಳ್ಳಿ: ಮಾರ್ಕೆಟ್ ನಲ್ಲಿ ಜನಜಂಗುಳಿ!

2018ನೇ ಸಾಲಿನ ಹಿಂಗಾರಿ ಬೆಳೆಯ ಈರುಳ್ಳಿಯನ್ನು ರೈತರು ಈಗ ಮಾರಾಟ ಮಾಡುತ್ತಿರುವುದೇ ಈರುಳ್ಳಿ ಬೆಲೆ ಈ ಪರಿಯಾಗಿ ಕುಸಿಯಲು ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ಹಿಂಗಾರು ಸೀಸನ್‌ನ ಈರುಳ್ಳಿಯನ್ನು ಡಿಸೆಂಬರ್‌ ಹೊತ್ತಿಗೆ ಮಾರಾಟ ಮಾಡಲಾಗುತ್ತಿತ್ತು.

Onions sell at 50 paise per kg in wholesale market
Author
Pune, First Published Jan 27, 2019, 10:59 AM IST

ಪುಣೆ(ಜ.27): ಈರುಳ್ಳಿ ದರ ಮತ್ತೆ ಕುಸಿದಿದೆ. ಮಹಾರಾಷ್ಟ್ರದ ಪುಣೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ ಈರುಳ್ಳಿಯು 50 ಪೈಸೆಯಿಂದ 3 ರು. ವರೆಗೂ ಬಿಕರಿಯಾಗುತ್ತಿದೆ. ಹೀಗಾಗಿ ಜನರು ಮುಗಿಬಿದ್ದು ಖರೀದಿಸುತ್ತಿದ್ದಾರಂತೆ.

2018ನೇ ಸಾಲಿನ ಹಿಂಗಾರಿ ಬೆಳೆಯ ಈರುಳ್ಳಿಯನ್ನು ರೈತರು ಈಗ ಮಾರಾಟ ಮಾಡುತ್ತಿರುವುದೇ ಈರುಳ್ಳಿ ಬೆಲೆ ಈ ಪರಿಯಾಗಿ ಕುಸಿಯಲು ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ಹಿಂಗಾರು ಸೀಸನ್‌ನ ಈರುಳ್ಳಿಯನ್ನು ಡಿಸೆಂಬರ್‌ ಹೊತ್ತಿಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಇನ್ನು 30 ರಿಂದ 40 ಟನ್‌ಗಳ ಹಿಂಗಾರಿ ಈರುಳ್ಳಿಗಳನ್ನು ರೈತರು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದಾಗಿ ತಾವು ಈರುಳ್ಳಿ ಬೆಳೆಯಲು ಮಾಡಿದ ಖರ್ಚುಗಳನ್ನು ಸರಿದೂಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಲವತ್ತುಕೊಂಡಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಈರುಳ್ಳಿ ಬೆಲೆಯು ಪಾತಾಳಕ್ಕೆ ಕುಸಿಯುತ್ತಿದೆ. ಆದರೆ, ರೈತರು ಮಾತ್ರ ಭವಿಷ್ಯದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಬಹುದು ಎಂಬ ಆಶಾಭಾವನೆಯಲ್ಲಿ ತಾವು ಬೆಳೆದ್ದದ್ದನ್ನು ತಮ್ಮಲ್ಲೇ ಶೇಖರಿಸಿಕೊಂಡಿದ್ದರು. ಹೀಗಾಗಿಯೇ ಈರುಳ್ಳಿ ಬೆಲೆ ಈ ಪರಿಯಾಗಿ ಕುಸಿದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
 

Follow Us:
Download App:
  • android
  • ios